ದೇಶದಲ್ಲೇ ಅತಿ ಹೆಚ್ಚು ಲೋಕಸಭಾ ಸ್ಥಾನಗಳನ್ನು ಹೊಂದಿರುವ ಪ್ರಮುಖ ಐದು ರಾಜ್ಯಗಳಾದ ಉತ್ತರ ಪ್ರದೇಶ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಬಿಹಾರ ಮತ್ತು ತಮಿಳುನಾಡು ಒಟ್ಟು 249 ಲೋಕಸಭಾ ಸ್ಥಾನಗಳನ್ನು ಹೊಂದಿವೆ. ಆದರೆ ಇಂದು ಈ ಐದೂ ರಾಜ್ಯಗಳಿಂದ ಕಾಂಗ್ರೆಸ್ ಹೊಂದಿರುವ ಸಂಸದರ ಸಂಖ್ಯೆ ಕೇವಲ 32 ಆಗಿದ್ದು. ಇನ್ನು ಈ ರಾಜ್ಯಗಳ ಒಟ್ಟು 1,462 ವಿಧಾನಸಭಾ ಸ್ಥಾನಗಳ ಪೈಕಿ ಕಾಂಗ್ರೆಸ್ ಬಳಿ ಇರುವುದು ಕೇವಲ 72 ಸೀಟುಗಳು ಮಾತ್ರ. ತಳಮಟ್ಟದಲ್ಲಿ ತನ್ನದೇ ಆದ ಅಸ್ತಿತ್ವ ಇಲ್ಲದ ಕಾರಣ, ಪ್ರಾದೇಶಿಕ ಪಕ್ಷಗಳ ಹೆಗಲ ಮೇಲೆ ಕೂತು ಚುನಾವಣೆ ಗೆಲ್ಲುವ ಕಾಂಗ್ರೆಸ್‌ನ ಹಳೆಯ ತಂತ್ರ ಈಗ ಉಲ್ಟಾ ಹೊಡೆಯುತ್ತಿದೆ.