ಪಾಕಿಸ್ತಾನ ಮತ್ತು ಬಾಂಗ್ಲಾದೊಂದಿಗೆ ಭಾರತ ಹೊಂದಿರುವ ಸುಮಾರು 6,000 ಕಿಲೋಮೀಟರ್ ಉದ್ದದ ಗಡಿಯನ್ನು ಸಂಪೂರ್ಣವಾಗಿ ಅಭೇದ್ಯಗೊಳಿಸಲು ಮುಂದಿನ ಒಂದು ವರ್ಷದೊಳಗೆ ಕೇಂದ್ರ ಸರ್ಕಾರವು ಹೈಟೆಕ್ ಸ್ಮಾರ್ಟ್ ಬಾರ್ಡರ್ ಯೋಜನೆಯನ್ನು ಪ್ರಾರಂಭಿಸಲಿದೆ. ಮುಳ್ಳುತಂತಿ ಬೇಲಿಗಳ ಜೊತೆಗೆ ಅತ್ಯಾಧುನಿಕ ತಂತ್ರಜ್ಞಾನಗಳಾದ ಡ್ರೋನ್‌ಗಳು, ಹೈ-ರೆಸಲ್ಯೂಶನ್ ರೇಡಾರ್‌ಗಳು, ಸ್ಮಾರ್ಟ್ ಥರ್ಮಲ್ ಕ್ಯಾಮೆರಾಗಳು ಮತ್ತು ಸುಧಾರಿತ ತಾಂತ್ರಿಕ ಸಂಪನ್ಮೂಲಗಳನ್ನು ಬಳಸಿಕೊಂಡು ಗಡಿಯ ಪ್ರತಿಯೊಂದು ಇಂಚು ಜಾಗದ ಮೇಲೆಯೂ ಕಣ್ಣಿಡಲಾಗುವುದು. ಗಡಿ ಭದ್ರತೆಯಲ್ಲಿರುವ ಸಣ್ಣ ಸಣ್ಣ ಲೋಪದೋಷಗಳನ್ನು ಪ್ಲಗ್ ಮಾಡಲು ಈ ಯೋಜನೆ ನೆರವಾಗಲಿದೆ ಎಂದು ಅಮಿತ್ ಷಾ ತಿಳಿಸಿದ್ದಾರೆ.