ಬೆಂಗಳೂರು: ಭಾರತೀಯ ರಾಜಕಾರಣದಲ್ಲಿ ಚುನಾವಣೆ ಎಂದರೆ ಕೇವಲ ಭಾಷಣ, ರ‍್ಯಾಲಿಗಳಲ್ಲ, ಅಲ್ಲಿ ಬಳಸುವ ಗುರುತುಗಳೂ ಸಹ ಅಷ್ಟೇ ಪ್ರಮುಖ ಪಾತ್ರ ವಹಿಸುತ್ತವೆ. ಸಾಮಾನ್ಯವಾಗಿ ಹಸ್ತ, ಕಮಲ, ಪೊರಕೆ, ಸೂರ್ಯ ಮುಂತಾದ ಚಿಹ್ನೆಗಳನ್ನು ನಾವು ದಿನಾ ನೋಡುತ್ತೇವೆ. ಆದರೆ, ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ‘ಜಿರಳೆ ಜನತಾ ಪಾರ್ಟಿ’ (Cockroach Janta Party) ಎಂಬ ವಿಲಕ್ಷಣ ಹೆಸರಿನ ಪಕ್ಷವೊಂದು(cockroach) ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.