ಬಜೆಟ್‌ನಲ್ಲಿ 5 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳ ಮೂಲಸೌಕರ್ಯಕ್ಕೆ ಒತ್ತು ನೀಡಲಾಗಿದೆ. ಇದರಿಂದ ಕರ್ನಾಟಕದ ಮೈಸೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಮಂಗಳೂರು ಮತ್ತು ಕಲಬುರಗಿ ಅಂತಹ ನಗರಗಳಿಗೆ ಕೇಂದ್ರದ 12.2 ಲಕ್ಷ ಕೋಟಿ ಬಂಡವಾಳ ವೆಚ್ಚದ ನಿಧಿಯಿಂದ ಹೆಚ್ಚಿನ ಪಾಲ ಸಿಗಲಿದೆ. ಇದು ಈ ನಗರಗಳಲ್ಲಿ ಮೆಟ್ರೋ, ಸುಸಜ್ಜಿತ ರಸ್ತೆ ಮತ್ತು ಐಟಿ ಪಾರ್ಕ್‌ಗಳ ನಿರ್ಮಾಣಕ್ಕೆ ವೇಗ ನೀಡಲಿದೆ.