'ಧುರಂಧರ್' ಸಿನಿಮಾದಲ್ಲಿ 'ಬಲೂಚ್' ಹೆಸರು ಬಳಸುವಂತಿಲ್ಲ! ವಿವಾದಾತ್ಮಕ ದೃಶ್ಯಗಳಿಗೆ ಕತ್ರಿ ಹಾಕಿದ ಚಿತ್ರ ತಂಡ.. Dhurandhar

Dhurandhar
Dhurandhar
Published on

ಪ್ರಮುಖ ಮುಖ್ಯಾಂಶಗಳು

  • ಬದಲಾದ ದೃಶ್ಯಗಳೊಂದಿಗೆ ಹೊಸ ವರ್ಷಕ್ಕೆ ಸಿನಿಮಾ ಬಿಡುಗಡೆ
  • ಧುರಂಧರ್' ಹೊಸ ರೂಪದಲ್ಲಿ ರಿಲೀಸ್!
  • ಸರ್ಕಾರದ ಆದೇಶದಂತೆ ಬದಲಾದ 'ಧುರಂಧರ್'
ಮುಂಬೈ: ( Dhurandhar ) 2025 ರ ಮತ್ತು ಹಿಂದಿ ಚಿತ್ರರಂಗದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ' ಧುರಂಧರ್' ಚಿತ್ರವು ಉತ್ತಮ ಪ್ರದರ್ಶನ ನೀಡುತ್ತಿದೆ. ಸಿನಿಮಾ ಯಶಸ್ಸು ಕಾಣುತ್ತಿರುವ ಬೆನ್ನಲ್ಲೇ ಸರ್ಕಾರ ಚಿತ್ರತಂಡಕ್ಕೆ ವಿವಾದಾತ್ಮಕ ದೃಶ್ಯಗಳಿಗೆ ಕತ್ರಿ ಹಾಕಿ ಪ್ರಸಾರ ಮಾಡುವಂತೆ ಆದೇಶಿದೆ.
'ಧುರಂಧರ್' (Dhurandhar) ಚಿತ್ರ ತಂಡ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ (I&B Ministry) ಕಟ್ಟುನಿಟ್ಟಿನ ಆದೇಶದ ನಂತರ, ಚಿತ್ರದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದ್ದು, ಪರಿಷ್ಕೃತ ಆವೃತ್ತಿಯು ಇಂದು 2026 ಜನವರಿ1 ರಿಂದ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ.
ಚಿತ್ರದ ಕೆಲವು ದೃಶ್ಯಗಳು ಸಾರ್ವಜನಿಕ ಭಾವನೆಗಳಿಗೆ ಧಕ್ಕೆ ತರುವಂತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ, ಸೆನ್ಸಾರ್ ಮಂಡಳಿ ಮತ್ತು ಸಂಬಂಧಿತ ಇಲಾಖೆಗಳು ಚಿತ್ರವನ್ನು ಮರು-ಪರಿಶೀಲಿಸಿ ಕೆಲವು ಭಾಗಗಳನ್ನು ಕತ್ತರಿಸಲು ಸೂಚಿಸಿದ್ದವು.ಮೂಲ ಆವೃತ್ತಿಯಲ್ಲಿದ್ದ ಕೆಲವು ಕಟುವಾದ ರಾಜಕೀಯ ಸಂಭಾಷಣೆಗಳಿಗೆ ಅಥವಾ ಸಾಮಾಜಿಕ ವಿಷಯಗಳಿಗೆ ಸಂಬಂಧಿಸಿದ ದೃಶ್ಯಗಳಿಗೆ ಈಗ ಕತ್ರಿ ಹಾಕಲಾಗಿದೆ ಅಥವಾ ಡಬ್ಬಿಂಗ್ ಬದಲಾಯಿಸಲಾಗಿದೆ.
ಚಿತ್ರದಲ್ಲಿ ಬಳಸಲಾಗಿದ್ದ 'ಬಲೂಚ್' ಎಂಬ ಪದಕ್ಕೆ ಕೇಂದ್ರ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿತ್ತು. ಅಂತರಾಷ್ಟ್ರೀಯ ಸಂಬಂಧಗಳು ಮತ್ತು ಭದ್ರತಾ ದೃಷ್ಟಿಯಿಂದ ಈ ಪದವನ್ನು ತೆಗೆದುಹಾಕಲು ಅಥವಾ ಬದಲಿಸಲು ಸಚಿವಾಲಯ ಸೂಚಿಸಿತ್ತು.
ಎಲ್ಲಾ ವಿವಾದಗಳನ್ನು ಬಗೆಹರಿಸಿಕೊಂಡು, ಹೊಸ ವರ್ಷದ ಮೊದಲ ದಿನವೇ (ಜನವರಿ 1) ಚಿತ್ರವನ್ನು ಹೊಸ ರೂಪದಲ್ಲಿ ಪ್ರೇಕ್ಷಕರ ಮುಂದೆ ತರಲು ಚಿತ್ರತಂಡ ಯಶಸ್ವಿಯಾಗಿದೆ. ಚಿತ್ರತಂಡವು ಬದಲಾವಣೆಗಳ ನಂತರವೂ ಚಿತ್ರದ ವೇಗ ಮತ್ತು ರೋಚಕತೆಗೆ ಯಾವುದೇ ತೊಂದರೆಯಾಗದಂತೆ ಎಚ್ಚರಿಕೆ ವಹಿಸಿದೆ.
ರಣವೀರ್ ಸಿಂಗ್ ಒಬ್ಬ ಭಾರತೀಯ ಏಜೆಂಟ್ ಆಗಿ ಕಾಣಿಸಿಕೊಂಡಿರುವ ಈ ಚಿತ್ರವು ದೇಶಭಕ್ತಿ ಮತ್ತು ಸಾಹಸದ ಕಥೆಯನ್ನು ಹೊಂದಿದೆ. ಧುರಂಧರ್ ಚಿತ್ರದಲ್ಲಿ ರಣವೀರ್ ಸಿಂಗ್, ಸಂಜಯ್ ದತ್, ಅಕ್ಷಯ್ ಖನ್ನಾ, ಆರ್ ಮಾಧವನ್, ಅರ್ಜುನ್ ರಾಂಪಾಲ್ ಮತ್ತು ಸಾರಾ ಅರ್ಜುನ್ ನಟಿಸಿದ್ದಾರೆ.
ಈ ಸಿನಿಮಾ ಕಥೆನ್ನು ಆದಿತ್ಯ ಧರ್ ಬರೆದು ನಿರ್ದೇಶಿಸಿದ್ದಾರೆ. ಡಿಸೆಂಬರ್ 5 ರಂದು ಬಿಡುಗಡೆಯಾದ ಈ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಕೋಟಿ ಕೋಟಿ ಕಲೆಕ್ಷನ್​ ಮಾಡುತ್ತಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net