ವೈರಲ್: ಅಂಗಡಿಯೊಂದರಲ್ಲಿ ಐಸ್‌ಕ್ರೀಮ್ ಸೇವಿಸಿ, ಮಾಲೀಕನ ಕೈಗೆ ಬಂದೂಕನ್ನು ನೀಡಿ ಶೂಟ್ ಮಾಡು ಎಂದು ಹೇಳಿರುವ ಘಟನೆ ಉತ್ತರ ಪ್ರದೇಶದ ಹತ್ರಾಸ್ (Hathras Ice Cream) ನಲ್ಲಿ ನಡೆದಿದೆ. ಈ ವಿಡಿಯೋವೊಂದು ಸೋಷಿಯಲ್ ಮೀಡಿಯಾನಲ್ಲಿ ವೈರಲ್ ಆಗುತ್ತಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಉತ್ತರ ಪ್ರದೇಶ ಪೊಲೀಸರು ಕಿರಾತಕರ ಪತ್ತೆ ನಡೆಸುತ್ತಿದ್ದಾಗಿ ತಿಳಿದು ಬಂದಿದೆ.