"ಚಿನ್ನ ಖರೀದಿಸಬೇಡಿ, ಇಂದಿರಾ ಮನವಿ; ರಾಷ್ಟ್ರೀಯ ಶಿಸ್ತಿಗಾಗಿ ಕರೆ" ಎಂಬ ಶೀರ್ಷಿಕೆಯಡಿ ದಿ ಹಿಂದೂ ಪತ್ರಿಕೆಯಲ್ಲಿ 1967, ಜೂನ್ 6ರಂದು ಪ್ರಕಟವಾಗಿತ್ತು ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪೋಸ್ಟರ್ ಆರಂಭದಲ್ಲಿ ದೊಡ್ಡ ಸುದ್ದಿಗೆ ಕಾರಣವಾಯಿತು. ಆದರೀಗ, ಇದೊಂದು ನಕಲಿ ಫೋಟೋ ಎಂಬುದು ಸ್ಪಷ್ಟವಾಗಿದೆ. ಸ್ವತಃ ದಿ ಹಿಂದೂ ಪತ್ರಿಕೆಯೇ ಇದಕ್ಕೆ ಸ್ಪಷ್ಟನೆ ನೀಡಿದ್ದು, ಇದು ಅಕ್ಷರಶಃ ನಕಲಿ ಎಂದಿದೆ.