ಸರ್ಕಾರದ ಪ್ರಮುಖ ನೀತಿ ನನ್ನನ್ನು ಅವಮಾನಿಸಿ, ಸಾಯುವಂತೆ ಶಾಪ ಹಾಕುವುದು; ರೇವಂತ್ ರೆಡ್ಡಿ ವಿರುದ್ಧ ಕೆಸಿಆರ್ ವಾಗ್ದಾಳಿ | KCR

ಬಿಆರ್​ಎಸ್ ಅಧ್ಯಕ್ಷ ಮತ್ತು ಮಾಜಿ ಸಿಎಂ ಕೆಸಿಆರ್
ಬಿಆರ್​ಎಸ್ ಅಧ್ಯಕ್ಷ ಮತ್ತು ಮಾಜಿ ಸಿಎಂ ಕೆಸಿಆರ್
Published on
ಹೈದರಾಬಾದ್: ತೆಲಂಗಾಣದ ಸಿಎಂ ರೇವಂತ್ ರೆಡ್ಡಿ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಆರ್​ಎಸ್ ಅಧ್ಯಕ್ಷ ಮತ್ತು ಮಾಜಿ ಸಿಎಂ ಕೆಸಿಆರ್(KCR) ಇದೇ ಮೊದಲ ಬಾರಿಗೆ ಬಹಿರಂಗವಾಗಿ ತೀವ್ರ ವಾಗ್ದಾಳಿ ನಡೆಸಿದ್ದು, ಈ ಸರ್ಕಾರದ ಪ್ರಮುಖ ನೀತಿ ಅಂದ್ರೆ ನನ್ನನ್ನು ಅವಮಾನಿಸಿ, ಸಾಯುವಂತೆ ಶಾಪ ಹಾಕುವುದಾಗಿದೆ ಎಂದು ಕಿಡಿಕಾರಿದ್ದಾರೆ.
ಹೈದರಾಬಾದ್‌ನ ತೆಲಂಗಾಣ ಭವನದಲ್ಲಿ ಕೆಸಿಆರ್ ಅಧ್ಯಕ್ಷತೆಯಲ್ಲಿ ಬಿಆರ್‌ಎಸ್‌ಎಲ್‌ಪಿ ಮತ್ತು ರಾಜ್ಯ ಕಾರ್ಯಕಾರಿ ಸಮಿತಿಗಳ ಜಂಟಿ ಸಭೆಯಲ್ಲಿ ಮಾತನಾಡಿರುವ ಅವರು, ಸರ್ಕಾರ ರಚನೆಯಾಗಿ ಎರಡು ವರ್ಷಗಳು ಕಳೆದರೂ ಒಂದೇ ಒಂದು ಹೊಸ ನೀತಿಯನ್ನು ತರಲಾಗಿಲ್ಲ. ರಾಜ್ಯ ಸರ್ಕಾರ ಈಗ ಅನುಸರಿಸುತ್ತಿರುವ ನೀತಿ ನನ್ನನ್ನು ಅವಮಾನಿಸಿ ನನ್ನನ್ನು ಸಾಯುವಂತೆ ಶಪಿಸುವಂತಿದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಆರ್‌ಎಸ್ ಪಕ್ಷ ಉತ್ತಮ ಫಲಿತಾಂಶಗಳನ್ನು ಸಾಧಿಸಿದೆ. ಆಡಳಿತ ಪಕ್ಷದ ವಿರುದ್ಧದ ಸಾರ್ವಜನಿಕ ವಿರೋಧವು ಈ ಚುನಾವಣೆಗಳ ಫಲಿತಾಂಶಗಳಲ್ಲಿ ಗೋಚರಿಸುತ್ತಿದೆ. ಪಕ್ಷವನ್ನು ಗೆಲ್ಲಿಸಲು ಶ್ರಮಿಸಿದ ಎಲ್ಲರಿಗೂ ಅವರು ಧನ್ಯವಾದ. ಆದರೆ ಬಿಆರ್​ಎಸ್​ ಗೆಲುವಿನ ಬಗ್ಗೆ ಕೋಪಗೊಂಡು ಕೆಲವು ಕಾಂಗ್ರೆಸ್ ಹಿಂಸಾಚಾರಕ್ಕೆ ಇಳಿದಿದ್ದಾರೆ. ಹಿಂದೆ ಅಧಿಕಾರದಲ್ಲಿದ್ದಾಗ ಬಿಆರ್‌ಎಸ್ ಇಂತಹ ದುರಹಂಕಾರದ ಹಿಂಸಾಚಾರಕ್ಕೆ ಎಂದಿಗೂ ಪ್ರಯತ್ನಿಸಿರಲಿಲ್ಲ. ಈಗ ಕಾಂಗ್ರೆಸ್ ಪಕ್ಷವು ವಿರೋಧ ಪಕ್ಷಗಳನ್ನು ಹೇಗೆ ಎದುರಿಸಬೇಕೆಂದು ಕಲಿಸುತ್ತಿದೆ ಎಂದು ಹೇಳಿದ್ದಾರೆ.
ಕಳೆದ ಎರಡು ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರ ಒಂದೇ ಒಂದು ಹೊಸ ನೀತಿಯನ್ನು ತಂದಿಲ್ಲ. ಹೊಸ ಯೋಜನೆಗಳನ್ನು ಘೋಷಿಸದಿದ್ದರೂ, ಅದು ಇರುವ ನೀತಿಗಳನ್ನು ಸಹ ನಿಲ್ಲಿಸುತ್ತದೆ. ತಂದಿರುವ ಎಲ್ಲಾ ನೀತಿಗಳು ರಿಯಲ್ ಎಸ್ಟೇಟ್‌ಗೆ ಸಂಬಂಧಿಸಿವೆ. ಜನರ ಆದಾಯದ ಮೌಲ್ಯ ಕುಸಿದಿದೆ. ರೈತರಿಗೆ ಯೂರಿಯಾ ಸಿಗುತ್ತಿಲ್ಲ ಎಂದು ಕಿಡಿಕಾರಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net