ತಿರುವನಂತಪುರಂ: ಕೇರಳದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿರುವ ವಿ.ಡಿ. ಸತೀಶನ್(V.D Satheesan) ಅವರು ಶುಕ್ರವಾರ ಭಾವನೆಗಳ ಅಲೆಗೆ ಸಿಲುಕಿದರು. ತಮ್ಮ ರಾಜಕೀಯ ಗುರು, ದಿವಂಗತ ಕಾಂಗ್ರೆಸ್ ನಾಯಕ ಜಿ. ಕಾರ್ತಿಕೇಯನ್ ಅವರ ನಿವಾಸಕ್ಕೆ ಭೇಟಿ ನೀಡಿದ ವೇಳೆ ಸತೀಶನ್ ಭಾವುಕರಾಗಿ ಕಣ್ಣೀರಿಟ್ಟರು. ಕಾರ್ತಿಕೇಯನ್ ಅವರ ಪತ್ನಿಯನ್ನು ಭೇಟಿಯಾದಾಗ ದುಃಖ ತಡೆಯಲಾಗದೆ ಅತ್ತ ಸತೀಶನ್ ಅವರನ್ನು ಕಂಡು, ಮುಖ್ಯಮಂತ್ರಿಯಾದವರು ಈ ರೀತಿ ಕಣ್ಣೀರು ಹಾಕಬಾರದು ಎಂದು ಸಮಾಧಾನಪಡಿಸಿದ ರೀತಿ ಎಲ್ಲರ ಹೃದಯ ಸ್ಪರ್ಶಿಸಿದೆ.