ಬಿಎಂಸಿ ಚುನಾವಣೆಗೂ ಮುನ್ನ ಶಿವಸೇನಾ(ಯುಬಿಟಿ) ತೊರೆದು ಬಿಜೆಪಿ ಸೇರಿದ ಮುಂಬೈ ಮಾಜಿ ಮೇಯರ್ | BMC elections

ಮಾಜಿ ಮೇಯರ್ ಶುಭಾ ರೌಲ್
ಮಾಜಿ ಮೇಯರ್ ಶುಭಾ ರೌಲ್
Published on
ಮುಂಬೈ: ಮುಂಬೈ ಮಹಾನಗರ ಪಾಲಿಕೆ ಚುನಾವಣೆಗೆ(BMC elections) ಕೆಲವೇ ದಿನಗಳು ಬಾಕಿ ಇರುವಂತೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಪಕ್ಷಕ್ಕೆ ಭಾರಿ ಹೊಡೆತ ಬಿದ್ದಿದ್ದು, ಮುಂಬೈ ಮಹಾನಗರ ಪಾಲಿಕೆಯ ಮಾಜಿ ಮೇಯರ್ ಶುಭಾ ರೌಲ್ ಪಕ್ಷ ತೊರೆದು ಭಾನುವಾರ(ಜ. 04) ಬಿಜೆಪಿ ಸೇರಿದ್ದಾರೆ.
ಉದ್ಧವ್ ಠಾಕ್ರೆ ಮತ್ತು ರಾಜ್ ಠಾಕ್ರೆ ತಮ್ಮ ಮೈತ್ರಿಕೂಟದ ಪ್ರಣಾಳಿಕೆಯನ್ನು ಘೋಷಿಸಿದ ದಿನವೇ ಶುಭಾ ರೌಲ್ ಪಕ್ಷಕ್ಕೆ ರಾಜೀನಾಮೆ ನೀಡಿ, ಸಿಎಂ ದೇವೇಂದ್ರ ಫಡ್ನವೀಸ್ ನೇತೃತ್ವದಲ್ಲಿ ಬಿಜೆಪಿ ಪಾಳಯಕ್ಕೆ ಸೇರ್ಪಡೆಯಾಗಿದ್ದಾರೆ.
ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಜೊತೆಗೆ ಇತರ 28 ನಾಗರಿಕ ಸಂಸ್ಥೆಗಳಿಗೆ ಜನವರಿ 15 ರಂದು ಮತದಾನ ನಡೆಯಲಿದೆ. ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟದ ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧಿಸಿದ್ರೆ, ಶಿವಸೇನೆ(ಯುಬಿಟಿ) & ಎಂಎನ್​ಎಸ್ ಮೈತ್ರಿ ಮಾಡಿಕೊಂಡಿವೆ. ಇನ್ನೂ ಎನ್​ಡಿಎ ಕೂಟದ ಬಿಜೆಪಿ, ಶಿಂಧೆ ಶಿವಸೇನಾ ಜೊತೆಗೂಡಿ ಸ್ಪರ್ಧಿಸಿದ್ರೆ, ಅಜಿತ್ ಪವರ್ ನೇತೃತ್ವದ ಎನ್​ಸಿಪಿ ಏಕಾಂಗಿಯಾಗಿ ಸ್ಪರ್ಧೆ ಮಾಡಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net