ಮೊದಲ ದಿನದ ಅಧಿವೇಶನ ಪ್ರಾರಂಭವಾದ 20 ನಿಮಿಷದಲ್ಲೇ ಅಂತ್ಯ ! Winter Parliament Session

 Winter Parliament Session
Winter Parliament Session
Published on
ನವದೆಹಲಿ : ಇಂದಿನಿಂದ ಚಳಿಗಾಲದ ಅಧಿವೇಶನ ಆರಂಭವಾಗಿದ್ದು, ವಿರೋಧ ಪಕ್ಷಗಳು ಮತದಾರರ ಪಟ್ಟಿ ವಿಶೇಷ ಪರೀಕ್ಷಣನೆಯನ್ನು ( Special Intensive Revision) ವಿರೋಧಿಸಿದ ಕಾರಣ ಮೊದಲ ದಿನದ ಅಧಿವೇಶನವು ಪ್ರಾರಂಭವಾದ ಇಪ್ಪತ್ತು ನಿಮಿಷಗಳಲ್ಲಿ ಅಂತ್ಯವಾಯಿತು.
ಅಧಿವೇಶನದಲ್ಲಿ ಗದ್ದಲ ಪ್ರಾರಂಭವಾಗುತ್ತಿದ್ದಂತೆ ಸಭಾಪತಿ ಒಂ ಬಿರ್ಲಾ ಮಾತನಾಡಿ, ಅಧಿವೇಶನ ಇರುವುದು ಚರ್ಚೆಯನ್ನು ಮಾಡಲು ಹೊರತು ಘೋಷಣೆ ಕೂಗಲಲ್ಲ. ನಿಮಗೆ ಹೋರಾಟ ಮಾಡುವ ಉದ್ದೇಶವಿದ್ದರೆ ಹೊರಗಡೆ ಬಹಳ ಜಾಗವಿದೆ ಅಲ್ಲಿ ಹೋಗಿ ಕೂಗಾಡಿ ಎಂದಿದ್ದಾರೆ.
ನಾವು ಏನನ್ನಾದರೂ ಬದಲಾವಣೆ ತರುತ್ತೇವೆ ಎಂಬ ನೀರಿಕ್ಷೆಯಲ್ಲಿ ಜನ ನಮ್ಮನ್ನು ಆಯ್ಕೆಮಾಡಿ ಕಳಿಸುತ್ತಾರೆ. ನಾವಿಲ್ಲಿ ಏನು ಮಾಡುತ್ತಿದ್ದೆವೆ ಎನ್ನುವುದನ್ನು ಜನ ನೋಡುತ್ತಿರುತ್ತಾರೆ ಎಂದು ಸಭಾಪತಿ ಒಂ ಬಿರ್ಲಾ ವಿರೋಧ ಪಕ್ಷದವರನ್ನು ತರಾಟೆಗೆ ತೆಗೆದುಕೊಂಡರು.
ಈ ಮಧ್ಯೆ ಮೊದಲ ದಿನದ ಅಧಿವೇಶನದಲ್ಲಿ ಮಣಿಪುರ ಸರಕು ಮತ್ತು ಸೇವಾ ತೆರಿಗೆ ಮಸೂದೆ( Manipur Goods and ervice Tax), ಕೇಂದ್ರ ಅಬಕಾರಿ ಮಸೂದೆ (Central Excise Bill) ಮತ್ತು ಆರೋಗ್ಯ ಭದ್ರತಾ ಮಸೂದೆ ( Health Security Bill) ಎಂಬ ಮೂರು ಮಸೂದೆಗಳ ಪ್ರಸ್ತಾವನೆಯನ್ನು ಮಂಡಿಸಲಾಯಿತು.
ಅಧಿವೇಶನದ ಆರಂಭಕ್ಕೂ ಮುನ್ನ ಸಭಾಪತಿ ಒಂ ಬಿರ್ಲಾ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ ವಿಶ್ವಕಪ್ ಗೆದ್ದ ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಯರನ್ನು, ಅಂಧರ ಟಿ20 ವಿಶ್ವಕಪ್ ಗೆದ್ದ ಮಹಿಳಾ ತಂಡದ ಆಟಗಾರ್ತಿಯರನ್ನು ಮತ್ತು ಕಬಡ್ಡಿ ವಿಶ್ವಕಪ್ ವಿಜೇತ ಮಹಿಳಾ ತಂಡದ ಆಟಗಾರ್ತಿಯರನ್ನು ಹಾಗೂ ಕಿವುಡರ ಒಲಂಪಿಕ್ಸನಲ್ಲಿ 20 ಪದಕಗಳನ್ನು ಗೆದ್ದು ಬಂದ ಮಹಿಳೆಯರನ್ನು ಅಭಿನಂದಿಸಿದರು.
ಈ ಮಹಿಳೆಯರ ಶಿಸ್ತು, ಸತತ ಪರಿಶ್ರಮ ಮತ್ತು ಕಠಿಣ ಅಭ್ಯಾಸದ ಫಲದಿಂದಾಗಿ ಇಎಲ್ಲಾ ಸ್ಪರ್ಧೆಗಲ್ಲಿ ಯಶಸ್ಸನ್ನು ಗಳಿಸುವ ಮೂಲಕ ಕ್ರೀಡೆಯಲ್ಲಿ ಭಾರತದ ಸ್ಥಾನ ಹೆಚ್ಚುತ್ತಿರುವುದನ್ನು ನೋಡಬಹುದಾಗಿದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net