ಬೆಂಗಳೂರು: ಹಿಂದೆ ಮಾಹಿತಿ ವಿನಿಮಯಕ್ಕೆ ಮಾತ್ರ ಬಳಕೆಯಾಗುತ್ತಿದ್ದ ಮೊಬೈಲ್ ಫೋನ್‌ಗಳು ಇಂದು ಮನುಷ್ಯನ ದಿನಚರಿ ಮತ್ತು ವರ್ತನೆಯನ್ನೇ ನಿಯಂತ್ರಿಸುತ್ತಿವೆ. ಅದರಲ್ಲೂ ಇನ್‌ಸ್ಟಾಗ್ರಾಮ್ ರೀಲ್ಸ್(Reel Addiction) ಮತ್ತು ಯೂಟ್ಯೂಬ್ ಶಾರ್ಟ್ಸ್‌ಗಳ ವ್ಯಸನವು ಸಮಾಜವನ್ನು ಒಂದು ಗಂಭೀರ ಮಾನಸಿಕ ಆರೋಗ್ಯದ ತುರ್ತು ಪರಿಸ್ಥಿತಿಯತ್ತ ತಳ್ಳುತ್ತಿದೆ. ಕುಟುಂಬದ ಸದಸ್ಯರೆಲ್ಲಾ ಒಂದೆಡೆ ಕುಳಿತಿದ್ದರೂ, ಒಬ್ಬರಿಗೊಬ್ಬರು ಮಾತನಾಡದೆ ಮೊಬೈಲ್ ಪರದೆಯತ್ತ ಕಣ್ಣು ನೆಟ್ಟಿರುವುದು ಇಂದಿನ ಕರಾಳ ಸತ್ಯವಾಗಿದೆ.