ಬಡತನದ ಕತ್ತಲೆಗೆ ದಾಸೋಹದ ಹಣತೆ; ಸಮಾಜದ ಪ್ರಗತಿಗೆ ನಾಂದಿಯಾದ ಪರಿಕಲ್ಪನೆ

ಸಾವಿರಾರು ವಿದ್ಯಾರ್ಥಿಗಳಿಗೆ ನಿರಂತರ ತ್ರಿವಿಧ ದಾಸೋಹ ಮಾಡಿದ ಡಾ.ಶಿವಕುಮಾರ ಸ್ವಾಮೀಜಿ
ಸಾವಿರಾರು ವಿದ್ಯಾರ್ಥಿಗಳಿಗೆ ನಿರಂತರ ತ್ರಿವಿಧ ದಾಸೋಹ ಮಾಡಿದ ಡಾ.ಶಿವಕುಮಾರ ಸ್ವಾಮೀಜಿ
Published on

ಪ್ರಮುಖ ಮುಖ್ಯಾಂಶಗಳು

  • ಬಡತನದ ಕತ್ತಲೆಗೆ ದಾಸೋಹದ ಹಣತೆ
  • ಸಮಾಜದ ಉನ್ನತಿಗೆ ಪ್ರಥಮ ಮೆಟ್ಟಿಲು ದಾಸೋಹ
  • ದೇಶದಲ್ಲೆ ವಿಶಿಷ್ಟ ಪರಿಕಲ್ಪನೆ ನೀಡಿದ ಮಠ-ಮಂದಿರಗಳು

ಪ್ರಶಾಂತರಿಪ್ಪನ್‌ಪೇಟೆ,ಬೆಂಗಳೂರು :ಜಗತ್ತಿನಲ್ಲಿರುವಎಲ್ಲ ಜ್ಞಾನ,ಸಿದ್ಧಾಂತ,ತತ್ವ,ಸಂದೇಶಗಳು ಸಮಾಜದಹಿತಕ್ಕಾಗಿ,ಜಗತ್ತಿನಕಲ್ಯಾಣಕ್ಕಾಗಿವೆ.ಅದನ್ನೇ ಸಂವಿಧಾನಎಂಬ ಚೌಕಟ್ಟಿನಲ್ಲಿ ರಚಿಸಲಾಗಿದೆ.ಸಂವಿಧಾನದ ಆಶಯವೂಕೂಡಾ ದುರ್ಬಲರನ್ನು ಮೇಲಕ್ಕೆತ್ತುವ,ಸಮ ಸಮಾಜವನ್ನುನಿರ್ಮಿಸುವ ಉದ್ದೇಶವನ್ನೇ ವ್ಯಕ್ತಮಾಡಿದೆ. ಈಹಿನ್ನೆಲೆಯಲ್ಲಿ ಸಮಾಜದ ಉನ್ನತಿಗೆ,ಸರ್ವೋತೋಮುಖಅಭಿವೃದ್ಧಿಗೆ ಪ್ರಥಮ ಮೆಟ್ಟಿಲೆಂದರೆದಾಸೋಹ.

ತನ್ನಲ್ಲಿರುವನಿರಹಂಕಾರ ಭಾವನೆಯನ್ನು ತೊಡೆದುಹಾಕಿ, ತಾನುಸತ್ಯಶುದ್ಧವಾಗಿ ಮಾಡಿದ ಕಾಯದಿಂದಬಂದ ಆದಾಯದಲ್ಲಿ ಇತರರಿಗೆ ನೀಡುವುದೇದಾಸೋಹ. ದಾಸೋಹಎಂಬುದು ಕೇವಲ ಅನ್ನಕ್ಕೆಸೀಮಿತವಾಗಿಲ್ಲ.ಅನ್ನ ದಾಸೋಹದಜೊತೆಗೆ ಜ್ಞಾನ ದಾಸೋಹ,ವಸ ದಾಸೋಹ,ಆಶ್ರಯ ದಾಸೋಹಹೀಗೆ ತನ್ನಲ್ಲಿರುವ ಸಂಪತ್ತನ್ನುನನ್ನದಲ್ಲ ಎಂಬ ಭಾವನೆಯಿಂದಇತರರಿಗೆ ನೀಡುವುದೆಲ್ಲವೂ ದಾಸೋಹಎನಿಸಿಕೊಳ್ಳುತ್ತದೆ.ಅದನ್ನೇ ಶರಣರುಸೋಹಂ ಎಂದೆನಿಸದೆ ದಾಸೋಹಂಎಂದೆನಿಸಯ್ಯ ಎಂದು ಹೇಳಿದ್ದಾರೆ.

12ಶತಮಾನದಲ್ಲಿಶರಣರು ಮಾಡಿದ ಬಹುದೊಡ್ಡಪರಿವರ್ತನೆಗಳಲ್ಲಿ 3ಮುಖ್ಯವಾಗಿವೆ.ದಾನವನ್ನು ದಾಸೋಹ,ಕೆಲಸವನ್ನುಕಾಯಕ, ಪದಾರ್ಥವನ್ನುಪ್ರಸಾದ ಮಾಡಿದರು.ದಾನ ಎನ್ನುವಲ್ಲಿಕೊಡುವವನ ದವಲತ್ತು,ಪಡೆಯುವವನುದೈನ್ಯತೆ, ದಾಸೋಹಎನ್ನುವಲ್ಲಿ ನೀಡುವವನ ನಿಯತ್ತು,ಪಡೆಯುವವನಸಂತೃಪ್ತಿ ವ್ಯಕ್ತವಾಗುತ್ತದೆ.ಕೆಲಸ ಎಂಬಲ್ಲಿಮಾಲಿಕ, ನೌಕರನೆಂಬತರತಮ, ಕಾಯಕಎಂಬಲ್ಲಿ ಸರ್ವರೂ ಸಮಾನವೆಂಬ ಭಾವಮೂಡುತ್ತದೆ.ಪದಾರ್ಥವೆಂದರೆಜಡವಸ್ತು ಎಂಬ ಲಘು ಅರ್ಥ,ಪ್ರಸಾದವೆಂದಾಗಜಗತ್ತಿನ ಚೈತನ್ಯದ ಸ್ವರೂಪಅನಾವರಣಗೊಳ್ಳುತ್ತದೆ.ಇಂತಹ ಭಾವಶುದ್ಧಿಯಬದಲಾವಣೆಗೆ ಅಂಕಿತ ಹಾಕಿದವರುಬಸವಾದಿ ಶರಣರು.

ದಾಸೋಹತತ್ವವನ್ನು ಎತ್ತಿ ಹಿಡಿದ ಮಠಗಳು

ಜಗತ್ತಿನಲ್ಲಿಭಾರತ ಒಂದು ದೇವಾಲಯ ಎಂದೆನಿಸಿಕೊಂಡರೆ,ಆ ದೇವಾಲಯದಗರ್ಭಗುಡಿ ಕರ್ನಾಟಕ.ದೇಶದಲ್ಲಿರುವಬಹುತೇಕ ತತ್ವ-ಸಿದ್ಧಾಂತಗಳು,ನೈತಿಕ ಮೌಲ್ಯಗಳು,ಸಾಮಾಜಿಕ ಚಿಂತನೆಗಳುಚಿಗುರೊಡೆದ ಪುಣ್ಯನೆಲ ಈ ಕರ್ನಾಟಕ.ಇಲ್ಲಿರುವಷ್ಟುಮಠಗಳು ಮತ್ತೆಲ್ಲೂ ಇಲ್ಲ.ಆ ಎಲ್ಲ ಮಠಗಳುಜಾತಿ, ಮತ,ಪಂತ,ಪ್ರದೇಶ,ಭಾಷೆಯನ್ನುಮೀರಿ ಜಗತ್ತಿಗೆ ನೀಡಿದ ಅಪೂರ್ವಕೊಡುಗೆ ದಾಸೋಹ ಪರಿಕಲ್ಪನೆ.

ಮಠಎಂದರೆ ಇದ್ದವರಿಂದ ತರಬೇಕು,ಇಲ್ಲದವರಿಗೆನೀಡಬೇಕು ಎಂಬ ವ್ಯಾಖ್ಯಾನವನ್ನುಬಹುತೇಕ ಮಠಗಳು ಸಾಕಾರಗೊಳಿಸುತ್ತಿವೆ.ಮಠದ ಭೌತಿಕಆಸ್ತಿ, ಆದಾಯಗಳಪ್ರಮಾಣದಲ್ಲಿ ವ್ಯತ್ಯಾಸಗಳೇನೇಇದ್ದರು ಅವುಗಳು ನಡೆಸಿಕೊಂಡುಬಂದಿರುವ ಸಾಮಾಜಿಕ ಕಳಕಳಿಯಲ್ಲಿವ್ಯತ್ಯಾಸವಿಲ್ಲ.ನಾಡಿನ ಬೃಹತ್ಮಠಗಳು ಮಾತ್ರವಲ್ಲದೆ ಸಣ್ಣ ಸಣ್ಣಮಠಗಳು ಕೂಡಾ ತಮ್ಮ ಶಕ್ತ್ಯಾನುಸಾರದಾಸೋಹವನ್ನು ಮಾಡುತ್ತಾ ಸಮಾಜದಶ್ರೇಯೋಭಿವೃದ್ಧಿಗೆ ತಮ್ಮದೇಕೊಡುಗೆ ನೀಡುತ್ತಿವೆ.

ದಾಸೋಹಕ್ಕೆಹೊಸ ವ್ಯಾಖ್ಯಾನ ಬರೆದ ಸಿದ್ಧಗಂಗೆ

ದಾಸೋಹಎಂಬ ಪದ ಜಾಗತಿಕವಾಗಿ ಮನ್ನಣೆಪಡೆಯುವಂತೆ ಹೊಸ ವ್ಯಾಖ್ಯಾನನೀಡಿದ ಕೀರ್ತಿ ಸಿದ್ಧಗಂಗಾಮಠಕ್ಕೆಸಲ್ಲುತ್ತದೆ.ಭಕ್ತರ ಪಾಲಿಗೆನಡೆದಾಡುವ ದೇವರೆಂದೇ ಪ್ರಸಿದ್ಧರಾಗಿದ್ದ ಡಾ.ಶಿವಕುಮಾರಸ್ವಾಮಿಗಳುತಮ್ಮ 88 ವರ್ಷಗಳಸನ್ಯಾಸ ಜೀವನವನ್ನು ದಾಸೋಹಕ್ಕಾಗಿಯೇಮುಡಿಪಾಗಿಟ್ಟವರು.ಕೇವಲ 50ವಿದ್ಯಾರ್ಥಿಗಳಿಂದಆರಂಭಿಸಲ್ಪಟ್ಟ ಶ್ರೀಮಠದ ವಿದ್ಯಾರ್ಥಿನಿಲಯದಲ್ಲಿ 10ಸಾವಿರವಿದ್ಯಾರ್ಥಿಗಳಾದಾಗಲೂ ಎಲ್ಲರಿಗೂಅನ್ನ, ಅಕ್ಷರ,ಆಶ್ರಯವನ್ನುನೀಡಿ ತ್ರಿವಿಧ ದಾಸೋಹಿ ಎನಿಸಿಕೊಂಡಮಹಾಚೇತನ ಪೂಜ್ಯರು. ‘ಗುರುವಿಗೆತನುವನ್ನು,ಲಿಂಗಕ್ಕೆಮನವನ್ನು, ಜಂಗಮಕ್ಕೆಧನವ ಕೊಟ್ಟು ನಿಶ್ಚಿಂತನಾಗಿರು’ಎಂಬ ವಚನದ ಸಾಲಿನಂತೆ ವಿದ್ಯಾರ್ಥಿಗಳನ್ನುಜಂಗಮ ಸ್ವರೂಪದಲ್ಲಿ ಕಂಡು ಅವರಿಗೆದಾಸೋಹವನ್ನು ಮಾಡಿ ಅವರಲ್ಲೇಭಗವಂತನನ್ನು ಕಂಡ ತೃಪ್ತಿಶ್ರೀಗಳದ್ದು.

ಗುರುಗಳಾಗಿದ್ದಶ್ರೀಉದ್ದಾನ ಶಿವಯೋಗಿಗಳಿಗಿಂತಮೊದಲಿದ್ದ ಶ್ರೀಅಟವಿ ಸ್ವಾಮಿಗಳುಅನ್ನದಾಸೋಹಕ್ಕಾಗಿ ಮಠದಲ್ಲಿಹಾಕಿದ ಅಗ್ನಿ ಇಂದಿಗೂ ಆರಿಲ್ಲಎಂಬ ಮಾತಿದೆ.ಒಂದೂವರೆ ಶತಮಾನದಿಂದಸಿದ್ಧಗಂಗೆ ಮಠದಲ್ಲಿ ನಿತ್ಯದಾಸೋಹ ನಡೆದುಕೊಂಡು ಬಂದಿದೆ.

ಸರ್ಕಾರಕ್ಕೂಪ್ರೇರಣೆಯಾದ ದಾಸೋಹ

ನಾಡಿನನೂರಾರು ಮಠ-ಮಂದಿರಗಳುನಿತ್ಯ ಅನ್ನದಾಸೋಹವನ್ನು ಮಾಡಿಸಮಾಜದ ಶೈಕ್ಷಣಿಕ,ಸಾಮಾಜಿಕಅಭಿವೃದ್ಧಿಗೆ ತಮ್ಮದೇ ಆದಕೊಡುಗೆಯನ್ನು ನೀಡಿದ್ದು,ಇದರಿಂದ ಪ್ರೇರಿತವಾದಸರ್ಕಾರ ಕೂಡಾ ದೇಶದಲ್ಲೇ ಮೊದಲಬಾರಿಗೆ ಸರ್ಕಾರಿ ಶಾಲೆಗಳಲ್ಲಿಬಿಸಿಯೂಟ ನೀಡುವ ‘ಅಕ್ಷರ ದಾಸೋಹ’ಎಂಬ ವಿನೂತನ ಯೋಜನೆಯನ್ನುಎಸ್.ಎಂ.ಕೃಷ್ಣಮುಖ್ಯಮಂತ್ರಿಗಳಾಗಿದ್ದ ಕಾಲದಲ್ಲಿಆರಂಭಿಸಲಾಯಿತು.ಮೊದಲಿಗೆ ಪ್ರಾಥಮಿಕಶಾಲೆಗಳಲ್ಲಿ ಆರಂಭವಾದ ಅಕ್ಷರದಾಸೋಹ ನಂತರದ ವರ್ಷಗಳಲ್ಲಿಪ್ರೌಢಶಾಲೆಗೂ ವಿಸ್ತರಣೆಯಾಯಿತು.

ದಾಸೋಹದಿಂದಸಮಾಜದ ಪ್ರಗತಿ

ದಾಸೋಹಮನುಷ್ಯನ ಅಹಂ ಭಾವವನ್ನು ನಿವಾರಿಸಿ‘ಅಹಂ ದಾಸಃ’ ಎಂಬ ಸಾತ್ವಿಕಭಾವನೆಯನ್ನು ಮೂಡಿಸುತ್ತದೆ.ನೀಡುವ,ಪಡೆಯುವ ಇಬ್ಬರಲ್ಲೂಒಂದು ಸಾಮಾಜಿಕ ಹೊಣೆಗಾರಿಕೆಯನ್ನುಹೆಚ್ಚಿಸುತ್ತದೆ.ಪ್ರತಿಯೊಬ್ಬರೂತಾವು ಗಳಿಸಿದ್ದರಲ್ಲಿ ಸಮಾಜಕ್ಕೆಮರಳಿಸಬೇಕೆಂಬ ಭಾವ ಮೂಡಿದರೆದೇಶದಲ್ಲಿನ ಬಹುತೇಕ ಎಲ್ಲಸಮಸ್ಯೆಗಳಿಗೂ ಪರಿಹಾರ ದೊರೆಯುತ್ತದೆ.ಆ ನಿಟ್ಟಿನಲ್ಲಿಉತ್ತರ ಕರ್ನಾಟಕದಲ್ಲಿದ್ದ ಕಿತ್ತುತಿನ್ನುವ ಬಡತನಕ್ಕೆ ತಕ್ಕಮಟ್ಟಿನಪರಿಹಾರ ನೀಡಿದ್ದು ದಾಸೋಹ ತತ್ವ.

ಕಲಬುರಗಿನಶರಣಬಸವೇಶ್ವರ ಸಂಸ್ಥಾನವನ್ನುದಾಸೋಹ ಪೀಠ ಎಂದೇ ಸಂಬೋದಿಸಲಾಗುತ್ತದೆ.ಇಂದಿಗೂ ಶರಣಬಸಪ್ಪನದಾಸೋಹವನ್ನು ಮೀರಿಸಲು ಯಾರಿಗೂಸಾಧ್ಯವಿಲ್ಲ.ಮೈಸೂರು ಭಾಗದಲ್ಲಿಸುತ್ತೂರು ಮಠ ಸುಮಾರು 5ಸಾವಿರ ಬಡವಿದ್ಯಾರ್ಥಿಗಳಿಗೆ ಉಚಿತ ವಸತಿ,ಊಟ ಮತ್ತುವಿದ್ಯೆಯನ್ನು ನೀಡುವ ಮೂಲಕ ಸಮಾಜದಪ್ರಗತಿಗೆ ದೊಡ್ಡ ಕೊಡುಗೆನೀಡುತ್ತಿದೆ.ಲಿಂಗೈಕ್ಯಶ್ರೀಶಿವರಾತ್ರಿ ರಾಜೇಂದ್ರಸ್ವಾಮಿಗಳು ವಿದ್ಯಾರ್ಥಿಗಳದಾಸೋಹಕ್ಕಾಗಿ ತಮ್ಮ ಚಿನ್ನದಕರಡಿಗೆಯನ್ನು ಮಾರಿ ಅದರಿಂದದಾಸೋಹ ನಡೆಸಿದ್ದು ಇತಿಹಾಸದಲ್ಲಿದಾಖಲಾಗಿದೆ.

ಮತ್ತೆಮತ್ತೆ ದಾಖಲೆಯಾದ ದಾಸೋಹ

ನಾಡಿನಬಹುತೇಕ ಮಠ-ಮಂದಿರಗಳುದಾಸೋಹದ ಮೂಲಕ ಸಮಾಜದಲ್ಲಿ ವಿಶಿಷ್ಟಕೊಡುಗೆ ನೀಡುತ್ತಿವೆ.ವಿಶೇಷವಾಗಿಕೊಪ್ಪಳ ಗವಿ ಮಠದಲ್ಲಿ ನಡೆಯುವವಾರ್ಷಿಕ ಜಾತ್ರೆಯಲ್ಲಿ ಸುಮಾರು20 ಲಕ್ಷಜನ ಅನ್ನ ದಾಸೋಹ ಸ್ವೀಕರಿಸಿದ್ದುದಾಖಲೆಯಾಗಿದೆ.

ಇತ್ತೀಚೆಗೆಲಿಂಗೈಕ್ಯರಾದ ಬಾಗಲಕೋಟೆ ಜಿಲ್ಲೆಯಬಂಡಿಗಣಿ ನೀಲಮಾಣಿಕ ಮಠದ ದಾಸೋಹರತ್ನ ಚಕ್ರವರ್ತಿ ದಾನೇಶ್ವರಸ್ವಾಮಿಗಳು ವರ್ಷಪೂರ್ತಿ ದೇಶದವಿವಿಧ ಕ್ಷೇತ್ರಗಳಲ್ಲಿ ಹೋಗಿಲಕ್ಷಾಂತರ ಜನರಿಗೆ ನಿರಂತರಅನ್ನದಾಸೋಹ ಮಾಡುತ್ತಿದ್ದರು.ಇದನ್ನು ಸರಿಗಟ್ಟುವಮತ್ತೊಂದು ಉದಾಹರಣೆ ದಾಖಲಾಗಿಲ್ಲ. ಪ್ರತಿ ವರ್ಷನಡೆಯುವ 6 ದಿನಗಳಸುತ್ತೂರು ಜಾತ್ರೆಯಲ್ಲಿ ಸುಮಾರು20 ರಿಂದ25 ಲಕ್ಷಜನರಿಗೆ ಅನ್ನ ದಾಸೋಹ ಮಾಡುವುದುಮತ್ತೊಂದು ದಾಖಲೆ.

ಬೆಳಗಾವಿಜಿಲ್ಲೆಯ ಹುಕ್ಕೇರಿ ಹಿರೇಮಠವುಶ್ರೀ ಗುರುಶಾಂತೇಶ್ವರ ಅಕ್ಷರದಾಸೋಹ ಯೋಜನೆಯ ಮೂಲಕ ಚಿಕ್ಕೋಡಿಶೈಕ್ಷಣಿಕ ಜಿಲ್ಲೆಯ ಸುಮಾರು 70ಸಾವಿರ ವಿದ್ಯಾರ್ಥಿಗಳಿಗೆನಿತ್ಯ ಅನ್ನ ದಾಸೋಹವನ್ನುಪೂರೈಸುತ್ತಿರುವುದು ದೊಡ್ಡದಾಖಲೆ.

ಇನ್ನುಳಿದಂತೆನಾಡಿನ ಪ್ರತಿಷ್ಠಿತ ಕ್ಷೇತ್ರವಾಗಿರುವಧರ್ಮಸ್ಥಳದಲ್ಲಿ ವರ್ಷ ಪೂರ್ತಿಸರಾಸರಿ 25 ಸಾವಿರಜನ ಪ್ರತಿದಿನ ಅನ್ನದಾಸೋಹಸ್ವೀಕರಿಸುತ್ತಾರೆ.ವಿಶೇಷ ದಿನಗಳಲ್ಲಿಈ ಸಂಖ್ಯೆ ಒಂದು ಲಕ್ಷವನ್ನುಮೀರುತ್ತದೆ. ಅನ್ನದ ಅಧಿದೇವತೆಎಂದೇ ನಂಬಲಾಗಿರುವ ಅನ್ನಪೂರ್ಣೇಶ್ವರಿನೆಲೆಸಿರುವ ಹೊರನಾಡು ಕ್ಷೇತ್ರವನ್ನೇಮೊದಲ್ಗೊಂಡು ನಾಡಿನ ಎಲ್ಲಪುಣ್ಯಕ್ಷೇತ್ರಗಳಲ್ಲೂ ಭಕ್ತರಿಗೆಅನ್ನ ದಾಸೋಹ ನೀಡಲಾಗುತ್ತಿದೆ.

ದಾಸೋಹದಿನ ಘೋಷಿಸಿದ ಸರ್ಕಾರ

2019ರಜ.21 ರಂದುತ್ರಿವಿಧ ದಾಸೋಹಿ ಡಾ.ಶಿವಕುಮಾರಸ್ವಾಮಿಗಳು ತಮ್ಮ 112ನೇವಯಸ್ಸಿನಲ್ಲಿ ಲಿಂಗೈಕ್ಯರಾದನಂತರ, ಶ್ರೀಗಳುನಾಡಿಗೆ ನೀಡಿದ ಸೇವೆ,ಕೊಡುಗೆಗಳನ್ನುಶಾಶ್ವತವಾಗಿ ನೆನಪಿನಲ್ಲಿಡಬೇಕೆಂಬಕಾರಣಕ್ಕೆ 2021ರಸೆ.2ರಂದುಸರ್ಕಾರ ಜ.21ನ್ನುದಾಸೋಹ ದಿನ ಎಂದು ಆಚರಿಸಲು ಆದೇಶಹೊರಡಿಸಿದೆ.ಆದೇಶದ ಪ್ರಕಾರಜ.21ರಂದುತಾಲೂಕು ಮತ್ತು ಜಿಲ್ಲಾ ಮಟ್ಟದಕಚೇರಿಯಲ್ಲಿ ಶ್ರೀಶಿವಕುಮಾರಸ್ವಾಮೀಜಿಯವರ ಭಾವಚಿತ್ರವಿಟ್ಟುಗೌರವ ಸಲ್ಲಿಸಿ ತಮ್ಮ ವ್ಯಾಪ್ತಿಯಲ್ಲಿಅನ್ನ ದಾಸೋಹವನ್ನು ನಡೆಸಬೇಕು.ಈ ಬಗ್ಗೆ ಸುವರ್ಣಕರ್ನಾಟಕ ವೀರಶೈವ ಲಿಂಗಾಯತಮಹಾಸಭಾದ ಅಧ್ಯಕ್ಷ ಮೋಹನ್ ಕುಮಾರ್ಬಿ. ಎರಡುಬಾರಿ ರಾಜ್ಯಪಾಲರನ್ನು ಭೇಟಿಯಾಗಿದಿನಾಚರಣೆಯ ಅನುಷ್ಠಾನಕ್ಕೆ ಮನವಿಸಲ್ಲಿಸಿದ್ದಾರೆ

ದಾಸೋಹ ಪರಿಕಲ್ಪನೆ ಮಠಗಳಿಗೆ ಶಿಕ್ಷಣ, ಆರೋಗ್ಯ ಮತ್ತಿತರ ಸೇವೆಯನ್ನು ಮಾಡಲು ಪ್ರೇರಣೆಯಾಗಿದೆ. ವಿದ್ಯಾರ್ಥಿ ನಿಲಯವನ್ನು ಸ್ಥಾಪಿಸಿ ಶೈಕ್ಷಣಿಕ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ನೂರಾರು ವರ್ಷಗಳಿಂದ ಮಾಡಿಕೊಂಡು ಬಂದ ಮಠಗಳ ದಾಸೋಹ, ಸರ್ಕಾರಕ್ಕೂ ಕೂಡ ಅಕ್ಷರ ದಾಸೋಹ ಯೋಜನೆ ಆರಂಭಿಸಲು ಪ್ರೇರಣೆ ನೀಡಿದೆ.

ಧರ್ಮಸ್ಥಳದಲ್ಲಿ ಅನ್ನದಾಸೋಹಕ್ಕೆ ವಿಶೇಷ ಮಹತ್ವ ಇದೆ. ಧರ್ಮದೇವತೆಗಳು ಕೂಡಾ ತಮ್ಮ ನುಡಿಕಟ್ಟಿನಲ್ಲಿ ಅನ್ನದಾಸೋಹದ ಮಹತ್ವದ ಬಗ್ಗೆ ತಿಳಿಸುತ್ತಾರೆ. ಧರ್ಮಸ್ಥಳಕ್ಕೆ ಬಂದವರು ಅನ್ನದಾಸೋಹ ಸ್ವೀಕರಿಸದಿದ್ದರೆ ಕ್ಷೇತ್ರ ದರ್ಶನದ ಫಲವಿಲ್ಲ ಎಂಬ ನಂಬಿಕೆ ಭಕ್ತರಲ್ಲಿದೆ. ಪ್ರತಿದಿನ ಸರಾಸರಿ ದಿನಕ್ಕೆ 25 ಸಾವಿರ ಭಕ್ತಾದಿಗಳು ಅನ್ನಪ್ರಸಾದ ಸ್ವೀಕರಿಸುತ್ತಾರೆ.

ತ್ರಿವಿಧ ದಾಸೋಹದ ಮೂಲಕ ಕರುನಾಡ ಕೀರ್ತಿಯನ್ನು ಬೆಳಗಿದ, ಲಕ್ಷಾಂತರ ಭಕ್ತರ ಪಾಲಿನ ನಡೆದಾಡುವ ದೇವರಾಗಿದ್ದ ಸಿದ್ದಗಂಗೆಯ ಡಾ.ಶಿವಕುಮಾರ ಸ್ವಾಮಿಗಳನ್ನು ಅರ್ಥಪೂರ್ಣವಾಗಿ ಸ್ಮರಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಬಿಜೆಪಿ ಅಧಿಕಾರದಲ್ಲಿದ್ದಾಗ ಜ.21ನ್ನು ದಾಸೋಹ ದಿನ ಎಂದು ನಿರ್ಧರಿಸಿತ್ತು. ಆದರೆ ಈಗಿನ ಕಾಂಗ್ರೆಸ್ ಸರ್ಕಾರ ಈ ನಿರ್ಧಾರದಿಂದ ಹಿಂದೆ ಸರಿದಿರುವುದು ಶ್ರೀಗಳ ದಾಸೋಹ-ಕಾಯಕಕ್ಕೆ ಅಗೌರವ ಸೂಚಿಸುವಂತಿದೆ. ಕೂಡಲೇ ಸರ್ಕಾರ ಜ.21 ರಂದು ದಾಸೋಹ ದಿನವೆಂದು ಆಚರಿಸಿ ಶ್ರೀಗಳಿಗೆ ಗೌರವ ಸಲ್ಲಿಸುವ ಸಂಸ್ಕಾರ ಮುಂದುವರೆಸಲಿ.

ಸಿದ್ದಗಂಗಾ ಹಿರಿಯ ಗುರುಗಳ ತಪಸ್ಸು ಸಾಧನೆಯನ್ನು ನೋಡಿ ನಾವು ದಾಸೋಹ ದಿನ ಅಂತ ಮಾಡಿದ್ದೆವು. ಅದನ್ನು ಮಾಡದಿರುವುದಕ್ಕೆ ಕಾರಣವೇನು ? ಸರ್ಕಾರದ ಈ ನಡೆಯಿಂದ ಸಿದ್ದಗಂಗಾ ಸ್ವಾಮೀಜಿ ಮತ್ತು ಮಠದ ಭಕ್ತರ ಮನಸ್ಸಿಗೆ ಬಹಳ ನೋವಾಗುತ್ತದೆ. ಕೂಡಲೇ ದಾಸೋಹ ದಿನವನ್ನು ಆಚರಣೆ ಮಾಡಲು ಸರ್ಕಾರ ಮುಂದಾಗಬೇಕು. ವಿಶೇಷವಾಗಿ ಸಿಎಂ ಸಿದ್ದರಾಮಯ್ಯ ಇದನ್ನು ಗಮನಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net