ಸಿಂಗಾಪುರದಿಂದ ಜಾವಾ ದ್ವೀಪಗಳಿಗೆ ಹೋಗುವ ದಾರಿಯಲ್ಲಿ, ಅವರ ವಿಮಾನವನ್ನು ಹೊಡೆದು ಉರುಳಿಸುವುದಾಗಿ ಡಚ್ ಪಡೆಗಳು ಬೆದರಿಕೆ ಹಾಕಿದ್ದವು. ಆದರೆ, ಕಳಿಂಗ ಬುಲ್ ಎಂದೇ ಖ್ಯಾತರಾಗಿದ್ದ ಪಟ್ನಾಯಕ್ ಅದಕ್ಕೆ ಹೆದರದೆ, ಇಂಡೋನೇಷ್ಯಾದ ಪ್ರಧಾನಿ ಸಜಹ್ರೀರ್ ಮತ್ತು ಉಪಾಧ್ಯಕ್ಷ ಹಟ್ಟಾ ಅವರನ್ನು ಸುರಕ್ಷಿತವಾಗಿ ಸಿಂಗಾಪುರ ಮಾರ್ಗವಾಗಿ ಭಾರತಕ್ಕೆ ಕರೆತರುವಲ್ಲಿ ಯಶಸ್ವಿಯಾದರು.