ತನ್ನ ಪ್ರಿಯಕರ ದಿಕ್ಷಾಂತ್ ಕಮ್ರಾ ಜತೆ ಸೇರಿ 21 ಲಕ್ಷ ರೂ. ಸಾಲದ ಸುಳಿಯಲ್ಲಿ ಸಿಲುಕಿದ್ದ ಪ್ರಿಯಾ, ದುಷ್ಯಂತ್ನನ್ನು ಕಿಡ್ನ್ಯಾಪ್ ಮಾಡಿ, ಆತನಿಂದ ಹಣ ವಸೂಲಿ ಮಾಡಲು ಸಂಚು ರೂಪಿಸಿದ್ದಳು. ಆನ್ಲೈನ್ನಲ್ಲಿ ಆತನ ಬಯೋದಲ್ಲಿ ಉದ್ಯಮಿ ಎಂದು ತಿಳಿಸಲಾಗಿತ್ತು. ಇದನ್ನೇ ಆಧಾರವಾಗಿಟ್ಟುಕೊಂಡು, ತನ್ನ ಫ್ಲಾಟ್ಗೆ ಬರುವಂತೆ ಕರೆದ ಪ್ರಿಯಾ, ದುಷ್ಯಂತನನ್ನು ಲಾಕ್ ಮಾಡಿ, 10 ಲಕ್ಷ ರೂ. ಕೊಡುವಂತೆ ಒತ್ತಾಯಿಸಿದಳು. ಇದರಿಂದ ಕಂಗಾಲಾದ ಆತ, ಮುಂದೇನು ಮಾಡಬೇಕೆಂದು ತಿಳಿಯದೆ, ತನ್ನ ತಂದೆಗೆ ಕರೆ ಮಾಡಿ ಸಹಾಯ ಕೋರಿದ.