ಅಮನ್‌ದೀಪ್ ಸಿಂಗ್ ಒಬ್ಬ ಬಿಲ್ಡರ್ ಮತ್ತು ಫೈನಾನ್ಷಿಯರ್ ಆಗಿದ್ದು, ಸಲೂನ್ ನಡೆಸುತ್ತಿದ್ದರು ಎನ್ನಲಾಗಿದೆ. ಗುರುವಾರ ಬೆಳಗ್ಗೆ ಮನೆಯ ಕೆಲಸಗಾರರು ಬಂದಾಗ ಬಾಗಿಲು ತೆಗೆಯದೇ ಒಳಗೆ ಲಾಕ್ ಇರುವುದನ್ನು ಗಮನಿಸಿದ್ದು, ಬಳಿಕ ನೆರೆಹೊರೆಯವರನ್ನು ಕರೆದು ಬಾಗಿಲು ಹೊಡೆದು ನೋಡಿದಾಗ ಮನೆಯಲ್ಲಿ ನಾಲ್ವರ ಶವಗಳು ಪತ್ತೆಯಾಗಿವೆ. ತಕ್ಷಣ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.