ಪ್ರಜಾಪ್ರಭುತ್ವದ ಮೂಲಸೆಲೆ ಬ್ಯಾಲೆಟ್​ ಹೊರತು ಬುಲೆಟ್​ ಅಲ್ಲ

ಲೋಕಸಭೆ ವಿಪಕ್ಷ ನಾಯಕ ರಾಹುಲ್​ ಗಾಂಧಿ ಮೊನ್ನೆಯಷ್ಟೇ ಮತಗಳ್ಳತನ (ವೋಟ್​ ಚೋರಿ) ಎಂಬ ವ್ಯರ್ಥ ಆರೋಪ ಮುಂದಿಟ್ಟುಕೊಂಡು ಸುಪ್ರೀಂಕೋರ್ಟ್​ಗೆ ಅರಶ@ (ಅರಮನೆ/ಮುತ್ತಿಗೆ - ಮೂಲದಂತೆ) ಮುತ್ತಿಗೆ ಹಾಕಿದರು. "ಸುಪ್ರೀಂ ಕೋರ್ಟ್​ ಮುಖ್ಯ ನ್ಯಾಯಮೂರ್ತಿಗಳಿಗೆ ಈ ವಿಚಾರದ ಬಗ್ಗೆ ಮನವಿ ಸಲ್ಲಿಸಲು ತಾವು ನ್ಯಾಯಾಲಯಕ್ಕೆ ದಾಂಗುಡಿ ಇಡಬೇಕಾಯಿತು' ಎಂದು ಅವರು ಸಮರ್ಥನೆ ಕೊಟ್ಟರೂ ಇದು ನ್ಯಾಯಾಲಯದ ಮೇಲೆ ವಾಮ ಮಾರ್ಗದ ಮೂಲಕ ಒತ್ತಡ ಹೇರುವ ಪ್ರಯತ್ನವೇ ಆಗಿತ್ತು.
ಪ್ರಜಾಪ್ರಭುತ್ವದ ಮೂಲಸೆಲೆ ಬ್ಯಾಲೆಟ್​ ಹೊರತು ಬುಲೆಟ್​ ಅಲ್ಲ
Published on: 

(ಲೇಖಕರು ವಿಧಾನಸಭೆ ವಿರೋಧ ಪಕ್ಷದ ಉಪ ನಾಯಕರು)

ಲೋಕಸಭೆ ವಿಪಕ್ಷ ನಾಯಕ ರಾಹುಲ್​ ಗಾಂಧಿ ಮೊನ್ನೆಯಷ್ಟೇ ಮತಗಳ್ಳತನ (ವೋಟ್​ ಚೋರಿ) ಎಂಬ ವ್ಯರ್ಥ ಆರೋಪ ಮುಂದಿಟ್ಟುಕೊಂಡು ಸುಪ್ರೀಂಕೋರ್ಟ್​ಗೆ ಅರಶ@ (ಅರಮನೆ/ಮುತ್ತಿಗೆ - ಮೂಲದಂತೆ) ಮುತ್ತಿಗೆ ಹಾಕಿದರು. "ಸುಪ್ರೀಂ ಕೋರ್ಟ್​ ಮುಖ್ಯ ನ್ಯಾಯಮೂರ್ತಿಗಳಿಗೆ ಈ ವಿಚಾರದ ಬಗ್ಗೆ ಮನವಿ ಸಲ್ಲಿಸಲು ತಾವು ನ್ಯಾಯಾಲಯಕ್ಕೆ ದಾಂಗುಡಿ ಇಡಬೇಕಾಯಿತು' ಎಂದು ಅವರು ಸಮರ್ಥನೆ ಕೊಟ್ಟರೂ ಇದು ನ್ಯಾಯಾಲಯದ ಮೇಲೆ ವಾಮ ಮಾರ್ಗದ ಮೂಲಕ ಒತ್ತಡ ಹೇರುವ ಪ್ರಯತ್ನವೇ ಆಗಿತ್ತು.

ಬಳಿಕ ಕೇಂದ್ರ ಸಚಿವ ಕಿರಣ್​ ರಿಜಿಜು ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ಹಂಚಿಕೊಂಡರು. ಅದು ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ವಿದೇಶಿ ಮಾಧ್ಯಮಕ್ಕೆ ನೀಡಿದ ಸಂದರ್ಶನದ ತುಣುಕು. ಅದರಲ್ಲಿ ಇಂದಿರಾ ತಾವ್ಯಾಕೆ ರಾಷ್ಟ್ರದಲ್ಲಿ ತುರ್ತು ಪರಿಸ್ಥಿತಿ ಹೇರಬೇಕಾಯಿತು ಎಂದು ವಿವರಿಸುತ್ತಾರೆ. "ಬ್ಯಾಲೆಟ್​ನಿಂದ ಅಧಿಕಾರ ಹಿಡಿಯಲಾಗದವರು, ಬುಲೆಟ್​ ಮೂಲಕ ಅಧಿಕಾರಕ್ಕೆ ಬರಲು ಯತ್ನಿಸುತ್ತಿದ್ದಾರೆ. ಪ್ರಧಾನಿ ನಿವಾಸ, ಪಾರ್ಲಿಮೆಂಟನ್ನು ಸುತ್ತುವರಿದು ಆಡಳಿತ ಯಂತ್ರವನ್ನು ಬುಡಮೇಲು ಮಾಡುವ ಸಂಚು ನಡೆಸುತ್ತಿದ್ದಾರೆ. ಇವರಿಗೆ ವಿದೇಶಿ ಬಂಡವಾಳದ ನೆರವು ಇದೆ. ಹೀಗಾಗಿ ಭಾರತದಲ್ಲಿ ಆಂತರಿಕ ಪ್ರಜಾಪ್ರಭುತ್ವವನ್ನು ಉಳಿಸಲು ತುರ್ತುಪರಿಸ್ಥಿತಿ ಹೇರಬೇಕಾಯಿತು' ಎಂದು ಸಮರ್ಥಿಸಿಕೊಳ್ಳುತ್ತಾರೆ. ಮುರಾರ್ಜಿ ದೇಸಾಯಿ ಸೇರಿ ಅಂದಿನ ವಿಪಕ್ಷ ನಾಯಕರನ್ನು ಹೀನಾಮಾನವಾಗಿ ಹೀಗಳೆಯುತ್ತಾರೆ. ಆದರೆ ತಮ್ಮ ಪ್ರಧಾನಿ ಹುದ್ದೆಗೆ ಸಂಚಕಾರ ತಂದ ಅಲಹಾಬಾದ್​ ನ್ಯಾಯಾಲಯದ ತೀರ್ಪಿನ ಬಗ್ಗೆ ಏನನ್ನೂ ಹೇಳದೆ, ಪ್ರತಿಪಕ್ಷವನ್ನು ಮಾತ್ರ ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸುತ್ತಾರೆ. ಬಿಡಿ, ಅದು ಅವರ ರಾಜಕಾರಣ. ಆದರೆ ಇಂದಿರಾ ಅಂದು ಆಡಿದ ಮಾತು ಅರಶ@ (ಮೂಲದಂತೆ) ಅನ್ವಯವಾಗುವುದು ಇಂದು ಅವರ ಮೊಮ್ಮಗ ರಾಹುಲ್​ ಗಾಂಧಿಯವರಿಗೆ!

ರಾಹುಲ್​ ಇಂದು ದೇಶದಲ್ಲಿ ನಡೆಸುತ್ತಿರುವುದು ಅಪಾಯಕಾರಿ ರಾಜಕೀಯ. ಚುನಾವಣೆಯಲ್ಲಿ ಜನಾದೇಶ ಪಡೆಯಲಾಗದ ಹತಾಶೆ ಅವರನ್ನು ಕಾಡುತ್ತಿದ್ದು, ಅದನ್ನು ಸಹಿಸಿಕೊಳ್ಳಲಾಗದೆ ಅವರೀಗ ಸಾಂವಿಧಾನಿಕ ಸಂಸ್ಥೆಗಳ ಮೇಲೆ ಆರೋಪ ಮಾಡಲಾರಂಭಿಸಿದ್ದಾರೆ. ನ್ಯಾಯಾಲಯದ ಮುಂದೆ ವಾದ ಮಂಡಿಸುವ ಬದಲು ಬೀದಿಯಲ್ಲಿ ಶಕ್ತಿ ಪ್ರದರ್ಶನ ನಡೆಸುತ್ತಿದ್ದಾರೆ.

ಇದು ರಾಹುಲ್​ ಒಬ್ಬರ ಕತೆಯಲ್ಲ, ಒಟ್ಟಾರೆ ಕಾಂಗ್ರೆಸ್​ ಹಾಗೂ ಎಡಪಂಥೀಯ ಮನ@ಸ್ಥಿತಿಯೇ (ಮನಸ್ಥಿತಿಯೇ) ಈ ವಿಷಗಾಳಿಯನ್ನು ಹರಡುತ್ತಿದೆ. ಸಂವಿಧಾನವನ್ನು ರಕ್ಷಿಸುವ ಹೆಸರಿನಲ್ಲಿ ಸಂವಿಧಾನಾತ್ಮಕ ಸಂಸ್ಥೆಗಳನ್ನೇ ಸಾರ್ವಜನಿಕ ಅನುಮಾನದ ಕಟಕಟೆಯಲ್ಲಿ ನಿಲ್ಲಿಸುವ ಪ್ರವೃತ್ತಿ ಬಲಗೊಳ್ಳುತ್ತಿದೆ. ಚುನಾವಣೆಯಲ್ಲಿ ಸೋತರೆ ಆಯೋಗದ ಮೇಲೆ ಅನುಮಾನ, "ಪ್ರಜಾಪ್ರಭುತ್ವ ಅಪಾಯದಲ್ಲಿದೆ' ಎಂಬ ಘೋಷಣೆ! (ಘೋಷಣೆ!) ಈ ವಿಚಾರದಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಕಾಂಗ್ರೆಸ್​ ಮುಖಂಡ, ನ್ಯಾಯವಾದಿ ಕಪಿಲ್​ ಸಿಬಲ್​ ಸುಪ್ರೀಂ ಕೋರ್ಟ್​ಗೆ ಹೋಗುವುದೇ ಒಂದು ವ್ಯರ್ಥ ಪ್ರಯತ್ನ ಎಂಬರ್ಥದಲ್ಲಿ ಮಾತನಾಡಿದ್ದಾರೆ. ಇವೆಲ್ಲವೂ ಕಾಂಗ್ರೆಸ್​ ಪ್ರಣಿತ ಬುದ್ಧೀಜಿವಿಗಳ ಗರಡಿ ಮನೆಯಲ್ಲಿ ಸಿದ್ಧವಾಗುವ ಒಂದೇ ಉದ್ದೇಶದ ನರೇಟಿವ್​ಗಳಾಗಿದ್ದು, ದೇಶದಲ್ಲಿ ಅರಾಜಕತೆ ಹುಟ್ಟು ಹಾಕುವುದು ಅವರ ಏಕಮಾತ್ರ ಉದ್ದೇಶ.

ಅ. 12ರಂದು ರಾಹುಲ್​ ಮತ್ತು ಇಂಡಿಯಾ ಮೈತ್ರಿಕೂಟದ ನಾಯಕರು "ವೋಟ್​ ಚೋರಿ' ಆರೋಪದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್​ನತ್ತ ಮೆರವಣಿಗೆ ನಡೆಸಿದರು. ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್​ಐಆರ್​) ಪ್ರಕ್ರಿಯೆಯನ್ನು ಪ್ರಶ್ನಿಸಿ, ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟರು. ಈ ಸಂಬಂಧ ಸುಪ್ರೀಂ ಕೋರ್ಟ್​ನಲ್ಲಿ ಅರ್ಜಿಯನ್ನೂ ಸಲ್ಲಿಸಿದರು. ಇಲ್ಲಿ ಪ್ರಶ್ನೆ ಚುನಾವಣಾ ಅಕ್ರಮಗಳ ಕುರಿತು ದೂರು ನೀಡಬಾರದು ಎಂಬುದಲ್ಲ. ಪ್ರಶ್ನೆ ಇರುವುದು ದೇಶದ ಅತ್ಯುನ್ನತ ನ್ಯಾಯಾಲಯದ ಮುಂದೆ ನಡೆಯಬೇಕಾದ ಕಾನೂನು ಹೋರಾಟವನ್ನು ರಾಜಕೀಯ ಶಕ್ತಿ ಪ್ರದರ್ಶನದ ವೇದಿಕೆಯನ್ನಾಗಿ ಮಾಡುವ ಅಗತ್ಯವೇನಿತ್ತು ಎಂಬುದಷ್ಟೇ. ನ್ಯಾಯಾಲಯದ ನಡತೆಗಿಂತ (ನಡತೆಗಿಂತ) ರಾಜಕೀಯ ಪ್ರದರ್ಶನ ದೊಡ್ಡದಾಯಿತೇ?

ಸುಪ್ರೀಂ ಕೋರ್ಟ್​ ಯಾವುದೇ ರಾಜಕೀಯ ಪಕ್ಷದ (ಪಕ್ಷದ) ಅಂಗಸಂಸ್ಥೆಯಲ್ಲ. ಅದು ಸಂವಿಧಾನದ ರಕ್ಷಕ. ಅದರ ಮುಂದೆ ಪ್ರಧಾನಿ ವಿರುದ್ಧವೂ ದೂರು ಸಲ್ಲಿಸಬಹುದು; ಚುನಾವಣಾ ಆಯೋಗದ ನಿರ್ಧಾರಗಳನ್ನೂ ಪ್ರಶ್ನಿಸಬಹುದು; ಸರ್ಕಾರದ ನೀತಿಗಳ ವಿರುದ್ಧವೂ ನ್ಯಾಯ ಕೇಳಬಹುದು. ಆದರೆ ನ್ಯಾಯಾಲಯದ ಕಾರ್ಯವಿಧಾನಕ್ಕೆ ರಾಜಕೀಯದ ಒತ್ತಡವನ್ನು ಜೋಡಿಸುವುದು ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಒಳ್ಳೆಯ ಬೆಳವಣಿಗೆಯಲ್ಲ. ಸುಪ್ರೀಂ ಕೋರ್ಟ್​ ಬಾಗಿಲು ಎಲ್ಲರಿಗೂ ತೆರೆದಿದೆ. ಯಾರು ಬೇಕಾದರೂ ನ್ಯಾಯಾಲಯದ ಬಾಗಿಲು ತಟ್ಟಬಹುದು. ಆದರೆ ಅದಕ್ಕೆ ಅದರದ್ದೇ ಆದ ರೀತಿ-ರಿವಾಜುಗಳಿವೆ. ಸುಪ್ರೀಂ ಕೋರ್ಟನ್ನು ನಿಮ್ಮ ರಾಜಕಾರಣದ ಆಡುಂಬೊಲವಾಗಿಸಬೇಡಿ ಎಂದು ಖುದ್ದು ಮುಖ್ಯ ನ್ಯಾಯಮೂರ್ತಿಗಳೇ ಮನವಿ ಮಾಡಿದ ಬಳಿಕವೂ ರಾಹುಲ್​ ಈ ಭೇಟಿಯ ನಾಟಕವಾಡಿದ್ದನ್ನು ನಾಗರಿಕ ಸಮಾಜ ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. ಇಷ್ಟಾದ ಮೇಲೆ ಕೇರಳ ಕಾಂಗ್ರೆಸ್​ನಿಂದ ಮುಖ್ಯ ನ್ಯಾ. ಸೂರ್ಯಕಾಂತ್​ ಅವರನ್ನು ಗುರಿಯಾಗಿಸಿ ಮಾಡಿದ ಟ್ವೀಟ್​ ಅಂತೂ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಗೇ ಒಂದು ಕಪ್ಪು ಚುಕ್ಕೆ. ಅಷ್ಟಕ್ಕೂ ನ್ಯಾ. ಸೂರ್ಯಕಾಂತ್​ ಅವರು ಹೇಳಿದ್ದೇನು? ಸುಪ್ರೀಂ ಕೋರ್ಟ್​ ಮುಂದೆ ವಿಚಾರಣೆಗೆ ಬಾಕಿ ಇರುವ ವಿಷಯಗಳ ಕುರಿತು ರಾಜಕೀಯ ನಾಯಕರೊಂದಿಗೆ ಪ್ರತ್ಯೇಕ ಸಭೆ ನಡೆಸುವುದು ನ್ಯಾಯಿಕ ತಾಟಸ್ಥ್ಯದ (ತಾಟಸ್ಥ್ಯದ) ತತ್ವಕ್ಕೆ ವಿರುದ್ಧವಾಗುತ್ತದೆ. ಅದರ ಬದಲು ಅರ್ಜಿಯನ್ನು ಕಾನೂನುಬದ್ಧ ಪ್ರಕ್ರಿಯೆ ಮೂಲಕ ಸಲ್ಲಿಸಿ ಎಂಬ ಮಾರ್ಗ ಸೂಚಿಸಿದರು. ಇದು ನ್ಯಾಯಾಂಗದ ಸ್ವಾತಂತ್ರ್ಯವನ್ನು (ಸ್ವಾತಂತ್ರ್ಯವನ್ನು) ಕಾಪಾಡುವ ನಿಲುವು. ಸಾಂವಿಧಾನಿಕ ಶಿಷ್ಟಾಚಾರದ ಮೂಲತತ್ವ.

ಹಾಗಿದ್ದಾಗ ನ್ಯಾಯಾಲಯದ ಮುಂದೆ ಮೆರವಣಿಗೆ, ರಾಜಕೀಯ ಪ್ರದರ್ಶನ ನಡೆಸುವ ಅಗತ್ಯವೇ ಇರಲಿಲ್ಲ. ಇದ್ಯಾವುದನ್ನೂ ಪಾಲಿಸದ ಕಾಂಗ್ರೆಸ್​, ವಿಶೇಷತಃ (ವಿಶೇಷತಃ) ರಾಹುಲ್​, ಸಾಂವಿಧಾನಿಕ ಸಂಸ್ಥೆಗಳೆಲ್ಲ ತಮ್ಮ ವಂಶವಾದೀಯ ರಾಜ್ಯಾಡಳಿತ ರಥಕ್ಕೆ (ರಥಕ್ಕೆ) ಮೆಟ್ಟಿಲುಗಳಾಗಿ ಉಳಿಯಬೇಕೆಂದು ಹಠ ಹಿಡಿದಂತೆ ಕಾಣುತ್ತದೆ. ಸ್ವಾಮಿ, ನ್ಯಾಯಾಲಯದ ಬಾಗಿಲು ತಟ್ಟುವುದು ಪ್ರತಿಯೊಬ್ಬ ನಾಗರಿಕನ ಹಕ್ಕು, ಆದರೆ ಬೀದಿಯಲ್ಲಿ ನಿಂತು ನ್ಯಾಯಾಲಯದ ಮೇಲೆ ಒತ್ತಡ ಹೇರುವುದು ಧಿಮಾಕು!

ಮತಚೋರಿಯಲ್ಲ, ಮತಿಚೋರಿ: ಸುಪ್ರೀಂ ಕೋರ್ಟ್​ಗೆ ದಾಂಗುಡಿ ಇಡುವುದಕ್ಕೆ ಮುನ್ನ ರಾಹುಲ್​ ರಾಷ್ಟ್ರಪತಿಯನ್ನೂ ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಆದರೆ ಈ ಭೇಟಿಯ ಬಳಿಕ ರಾಷ್ಟ್ರಪತಿಗಳೂ ಅವರ ಟೀಕೆಯ ವಸ್ತುವಾದದ್ದು ವಿಪರ್ಯಾಸ. ಮತ ಚೋರಿಗೆ ಸಹಾಯ (ಸಹಾಯ) ಕೊಡಿ ಎಂದು ರಾಷ್ಟ್ರಪತಿ ಕಾಂಗ್ರೆಸ್​ ನಿಯೋಗವನ್ನು ಪ್ರಶ್ನಿಸಬಾರದಿತ್ತು ಎಂಬ ರಾಹುಲ್​ ವಾದ ಮತಚೋರಿಯಾಗಿಲ್ಲ, ನಿಮ್ಮ ಮತಿಚೋರಿಯಾಗಿದೆ ಎಂಬುದರ ದೊಡ್ಡ ನಿದರ್ಶನ.

ಇಂತಹ ಗಂಭೀರ ಆರೋಪಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟ (ನಿರ್ದಿಷ್ಟ) ದಾಖಲೆಗಳು, ಪರಿಶೀಲಿಸಬಹುದಾದ ಅಂಕಿಅಂಶಗಳು ಮತ್ತು ಕಾನೂನುಬದ್ಧ ಸಾಕ್ಷ್ಯಗಳು (ಸಾಕ್ಷ್ಯಗಳು) ಸಾರ್ವಜನಿಕ ಚರ್ಚೆಯ ಕೇಂದ್ರವಾಗಬೇಕು. ಆರೋಪದ ತೀವ್ರತೆ ಎಷ್ಟೇ ಇರಲಿ, ಅದರ ಸತ್ಯಾಸತ್ಯತೆಯನ್ನು ನಿರ್ಧರಿಸುವುದು ಸಾಕ್ಷ್ಯ ಮತ್ತು ನ್ಯಾಯಾಲಯವೇ ಹೊರತು ರಾಜಕೀಯ ಘೋಷಣೆಗಳಲ್ಲ. ಆರೋಪವನ್ನೇ ತೀರ್ಪಿನಂತೆ ಬಿಂಬಿಸಿ, ಚುನಾವಣಾ ಆಯೋಗದ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವ ರಾಜಕೀಯವು ಜನರಲ್ಲಿ ಅನಗತ್ಯ ಅನುಮಾನಗಳನ್ನು ಹುಟ್ಟುಹಾಕುತ್ತದೆ. ರಾಜಕೀಯ ಪಕ್ಷಗಳು ತಾವು ಸೋತಾಗ ಚುನಾವಣಾ ವ್ಯವಸ್ಥೆಯನ್ನೇ ಅನುಮಾನದ ಕಟಕಟೆಯಲ್ಲಿ ನಿಲ್ಲಿಸಿದರೆ, ಪ್ರಜಾಪ್ರಭುತ್ವದ ಮೂಲಭೂತ ಪ್ರಕ್ರಿಯೆಯ ಮೇಲೆಯೇ ಅಪನಂಬಿಕೆ ಬೆಳೆಯಬಹುದು. ಇದು ಕಾಂಗ್ರೆಸ್​ಗೆ ಮಾತ್ರವಲ್ಲ, ಎಲ್ಲ ಪಕ್ಷಗಳಿಗೂ ಅನ್ವಯಿಸುತ್ತದೆ.

ಸ್ಪಷ್ಟನೆ ಕೊಡಿ: ರಾಹುಲ್​ರ ಇತ್ತೀಚಿನ ನಡೆಗಳ ಕುರಿತು ಇನ್ನೊಂದು ಪ್ರಶ್ನೆ ಎದ್ದಿದೆ. ಅದು ವಿದೇಶಿ ಹಣಕಾಸು ನೆರವಿಗೆ ಸಂಬಂಧಪಟ್ಟಿದ್ದು. ಈ ವಿಚಾರವನ್ನು ರಾಜಕೀಯ ಆರೋಪಗಳ ಮಟ್ಟದಲ್ಲಿ ಬಿಟ್ಟುಬಿಡುವುದಕ್ಕಿಂತ, ದಾಖಲೆಗಳ ಆಧಾರದಲ್ಲಿ ಪರಿಶೀಲಿಸುವುದು ಸೂಕ್ತ. ಯಾವುದೇ ಸಂಘಟನೆಯು (ಸಂಘಟನೆಯು) ವಿದೇಶಿ ಹಣವನ್ನು ಸ್ವೀಕರಿಸಿದ್ದರೆ, ಅದಕ್ಕೆ ಅಗತ್ಯವಾದ ಕಾನೂನುಬದ್ಧ ಅನುಮತಿ ಇದೆಯೇ, ಹಣದ ಮೂಲ ಯಾವುದು, ಅದನ್ನು ಯಾವ ಉದ್ದೇಶಕ್ಕೆ ಬಳಸಲಾಗಿದೆ ಮತ್ತು ಸಂಬಂಧಿತ ಕಾನೂನುಗಳನ್ನು ಪಾಲಿಸಲಾಗಿದೆಯೇ ಎಂಬ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಸಿಗಬೇಕು. ಆದರೆ ಈ ಪ್ರಶ್ನೆ ಎದುರಾದಾಗಲೆಲ್ಲ ರಾಹುಲ್​ ಹಾಗೂ ಅವರ ಪಡೆ ಪಲಾಯನ ಮಾಡುತ್ತದೆ.

ಎಲ್ಲಕ್ಕಿಂತ ದೊಡ್ಡ ದುರಂತ ಎಂದರೆ ರಾಹುಲ್​ಗೆ ವಿಪಕ್ಷ ನಾಯಕನ ಜವಾಬ್ದಾರಿ ಏನು ಎಂಬುದೇ ಇನ್ನೂ ಅರ್ಥವಾಗಿಲ್ಲ. ಸರ್ಕಾರವನ್ನು ಪ್ರಶ್ನಿಸುವುದಷ್ಟೇ ಅಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆ ಮೇಲಿನ ಸಾರ್ವಜನಿಕ ನಂಬಿಕೆಯನ್ನು ಕಾಪಾಡುವುದೂ ಒಬ್ಬ ಸಮರ್ಥ ವಿಪಕ್ಷ ನಾಯಕನ ಕರ್ತವ್ಯ. ಆದರೆ ಅದರಲ್ಲಿ ರಾಹುಲ್​ ಸಫಲರಾಗಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರ ನಿರಾಶಾದಾಯಕ. ಸಂವಿಧಾನಬದ್ಧ ಸಂಸ್ಥೆಗಳ ಭಂಜನೆಯನ್ನೇ ಪೂರ್ಣಾವಧಿ ಕಾಯಕವಾಗಿಸಿಕೊಂಡವರಿಂದ ಇಂಥ ಕರ್ತವ್ಯ ಪಾಲನೆಯ ವಿಚಾರವನ್ನು ನಿರೀಕ್ಷಿಸುವುದೇ (ನಿರೀಕ್ಷಿಸುವುದೇ) ತಪ್ಪು.

ರಾಹುಲ್​ 2029ರಲ್ಲಿ ಪ್ರಧಾನಿಯಾಗಲೇಬೇಕು ಎಂಬ ಕನಸು ಕಟ್ಟಿಕೊಂಡಿದ್ದಾರೆ. ಆದರೆ ಪ್ರಧಾನಿಯಾಗಲು ಜನರ ಮತವೇ ದಾರಿ. ಸಂವಿಧಾನಾತ್ಮಕ ವ್ಯವಸ್ಥೆಯಲ್ಲಿ ಅಧಿಕಾರ ಪಡೆಯುವ ಮಾನ್ಯ ಮಾರ್ಗ ಚುನಾವಣೆ. ಆದರೆ ಈ ವ್ಯವಸ್ಥೆಯನ್ನೇ ಅನುಮಾನಿಸುವ ವ್ಯಕ್ತಿಗೆ ಅಧಿಕಾರದ ಹಾದಿ ಸುಗಮವಲ್ಲ. ಬ್ಯಾಲೆಟ್​ನ ಶಕ್ತಿಯೇ ಪ್ರಜಾಪ್ರಭುತ್ವದ ಶಕ್ತಿಯೇ ವಿನಾ ತಿರಸ್ಕೃತ (ತಿರಸ್ಕೃತ) ನಾಯಕನೊಬ್ಬನ ವೈಫಲ್ಯದ ಹಳಹಳಿಕೆಯಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net