

ನವದೆಹಲಿ: ಸಾಮಾಜಿಕ ಮಾಧ್ಯಮ ವೇದಿಕೆ 'X' (ಟ್ವಿಟ್ಟರ್)ನಲ್ಲಿ ಕಳೆದ ಕೆಲವು ದಿನಗಳಿಂದ ವಿಡಿಯೋವೊಂದು ಭಾರಿ ಸಂಚಲನ ಮೂಡಿಸಿದೆ.
ಹೌದು,ರಾಷ್ಟ್ರೀಯಹೆದ್ದಾರಿ 48 (NH-48) ರಲ್ಲಿ ವೇಗವಾಗಿ ಚಲಿಸುತ್ತಿದ್ದ ಮಹೀಂದ್ರಾ ಥಾರ್ ಕಾರೊಂದು ದೆಹಲಿ-ಜೈಪುರರಸ್ತೆಯ ಸೂಚನಾ ಫಲಕಕ್ಕೆ (Signboard) ನೇರವಾಗಿ ಡಿಕ್ಕಿ ಹೊಡೆದು, ಅದರ ಒಳಗೇ ಸಿಲುಕಿಕೊಂಡಿರುವದೃಶ್ಯ ಈ ವಿಡಿಯೋದಲ್ಲಿದೆ(ViralVideo).
@MeenaRamesh91ಎಂಬ ಬಳಕೆದಾರರು ಹಂಚಿಕೊಂಡಿರುವ ಈ ವಿಡಿಯೋದಲ್ಲಿ, ಜೈಪುರಕ್ಕೆ ಹೋಗುವ ದಾರಿಯನ್ನು ಸೂಚಿಸುವ ಬೃಹತ್ಸೈನ್‌ಬೋರ್ಡ್‌ನ ಕಬ್ಬಿಣದ ಚೌಕಟ್ಟಿನೊಳಗೆ ಥಾರ್ ಕಾರು ಸಿಲುಕಿಕೊಂಡಿರುವುದು ಕಾಣಿಸುತ್ತದೆ. ಇದಕ್ಕೆ"ಥಾರ್ ಚಾಲಕ ಬಹುಶಃ ಜೈಪುರಕ್ಕೆ ಹೋಗುವ ದಾರಿಯನ್ನು ಗಂಭೀರವಾಗಿ ಪರಿಗಣಿಸಿ ನೇರವಾಗಿ ಸೈನ್‌ಬೋರ್ಡ್ಒಳಕ್ಕೇ ಡ್ರೈವ್ ಮಾಡಿದ್ದಾನೆ" ಎಂಬ ಹಾಸ್ಯಮಯ ಶೀರ್ಷಿಕೆ ನೀಡಲಾಗಿದೆ. ಇದನ್ನು ನೋಡಿ ಅನೇಕರುದಿಗ್ಭ್ರಮೆಗೊಂಡಿದ್ದರೆ, ಇನ್ನು ಕೆಲವರು ಇದು ನಿಜವೋ ಅಥವಾ ಸುಳ್ಳೋ ಎಂದು ಚರ್ಚಿಸುತ್ತಿದ್ದಾರೆ.
ಸತ್ಯಾಸತ್ಯತೆ:AI ಹೇಳಿದ್ದೇನು?
ಈ ವೀಡಿಯೊದ ವಿಲಕ್ಷಣದೃಶ್ಯವು ಹಲವು ಅನುಮಾನಗಳನ್ನು ಹುಟ್ಟುಹಾಕಿದ ಹಿನ್ನೆಲೆಯಲ್ಲಿ, 'X' ನ AI ಸಾಧನವಾದ 'ಗ್ರೋಕ್'(Grok) ಮೂಲಕ ಇದನ್ನು ಪರೀಕ್ಷಿಸಲಾಯಿತು. ಗ್ರೋಕ್ ನೀಡಿದ ಮಾಹಿತಿ ಹೀಗಿದೆ. ಈ ದೃಶ್ಯದಲ್ಲಿಭೌತವಿಜ್ಞಾನದ (Physics) ನಿಯಮಗಳು ಅನ್ವಯವಾಗುತ್ತಿಲ್ಲ. ಅಷ್ಟು ಎತ್ತರದ ಸೈನ್‌ಬೋರ್ಡ್ ಒಳಕ್ಕೆಕಾರು ಅಪ್ಪಳಿಸಿ ಸಿಲುಕಿಕೊಳ್ಳಲು ಸಾಧ್ಯವಿಲ್ಲ.ಇದು ಬಹುಶಃ ಎಡಿಟ್ ಮಾಡಲಾದ ಅಥವಾ ಸಂಪೂರ್ಣವಾಗಿAI (ಕೃತಕ ಬುದ್ಧಿಮತ್ತೆ) ಬಳಸಿ ಸೃಷ್ಟಿಸಲಾದ ವಿಡಿಯೋ ಆಗಿದೆ.ಇಂತಹ ಭೀಕರ ಅಪಘಾತ ದೆಹಲಿ-ಜೈಪುರ ಹೆದ್ದಾರಿಯಲ್ಲಿನಡೆದಿದ್ದರೆ ಅದು ರಾಷ್ಟ್ರೀಯ ಸುದ್ದಿಯಾಗುತ್ತಿತ್ತು. ಆದರೆ ಅಂತಹ ಯಾವುದೇ ಅಧಿಕೃತ ವರದಿಗಳು ಲಭ್ಯವಿಲ್ಲಎಂದಿದೆ.
ಸಾಮಾಜಿಕ ಜಾಲತಾಣಗಳಲ್ಲಿಕೇವಲ ಮನರಂಜನೆ ಮತ್ತು ಲೈಕ್ಸ್‌ಗಳಿಗಾಗಿ ಇಂತಹ ವಿಡಿಯೋಗಳನ್ನು ಹರಿಬಿಡಲಾಗುತ್ತಿದೆ. ಇದೊಂದು 'ವೈರಲ್ಜೋಕ್' ಅಥವಾ ಮೀಮ್ ಆಗಿರಬಹುದೇ ಹೊರತು ನಿಜವಾದ ಅಪಘಾತವಲ್ಲ ಎಂದು ಸ್ಪಷ್ಟವಾಗಿದೆ. ಇತ್ತೀಚಿನ ದಿನಗಳಲ್ಲಿAI ತಂತ್ರಜ್ಞಾನದ ಮೂಲಕ ನೈಜವಾಗಿ ಕಾಣುವ ಸುಳ್ಳು ವಿಡಿಯೋಗಳನ್ನು ಸೃಷ್ಟಿಸುತ್ತಿರುವುದು ಹೆಚ್ಚಾಗುತ್ತಿದ್ದು,ಜನರು ಇವುಗಳನ್ನು ಗಂಭೀರವಾಗಿ ಪರಿಗಣಿಸಬಾರದು ಎಂದು ತಜ್ಞರು ಎಚ್ಚರಿಸಿದ್ದಾರೆ,(ಏಜೆನ್ಸೀಸ್).