ಕಾಂಗ್ರೆಸ್​ ಸಭೆಯಲ್ಲಿ ಸೋನಿಯಾ ಗಾಂಧಿ-ದಿಗ್ವಿಜಯ್ ಸಿಂಗ್ ಮಾತಿನ ಚಕಮಕಿ...? ನಾಯಕರ ಜಟಾಪಟಿಗೆ ಕಾರಣವಾಯ್ತು ನಿತೀಶ್​​ರ ಆ ವಿಚಾರ! | CWC Meeting

ನವದೆಹಲಿ: ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ (CWC Meeting) ಜೆಡಿಯು ನಾಯಕ ನಿತೀಶ್ ಕುಮಾರ್ ಅವರ ವಿಷಯಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ನ ಹಿರಿಯ ನಾಯಕರ ನಡುವೆ ಸಣ್ಣ ಮಟ್ಟದ ಭಿನ್ನಾಭಿಪ್ರಾಯ ಮತ್ತು ಬಿಸಿಯೇರಿದ ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್​ ಸಭೆಯಲ್ಲಿ ಸೋನಿಯಾ ಗಾಂಧಿ-ದಿಗ್ವಿಜಯ್ ಸಿಂಗ್ ಮಾತಿನ ಚಕಮಕಿ...?
ಕಾಂಗ್ರೆಸ್​ ಸಭೆಯಲ್ಲಿ ಸೋನಿಯಾ ಗಾಂಧಿ-ದಿಗ್ವಿಜಯ್ ಸಿಂಗ್ ಮಾತಿನ ಚಕಮಕಿ...?
Published on: 

ನವದೆಹಲಿ: ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ (CWC Meeting) ಜೆಡಿಯು ನಾಯಕ ನಿತೀಶ್ ಕುಮಾರ್ ಅವರ ವಿಷಯಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ನ ಹಿರಿಯ ನಾಯಕರ ನಡುವೆ ಸಣ್ಣ ಮಟ್ಟದ ಭಿನ್ನಾಭಿಪ್ರಾಯ ಮತ್ತು ಬಿಸಿಯೇರಿದ ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. 2024ರಲ್ಲಿ ಇಂಡಿಯಾ ಒಕ್ಕೂಟದಿಂದ ನಿತೀಶ್ ಕುಮಾರ್ ಹೊರನಡೆದ ಪ್ರಸಂಗದ ಕುರಿತು ಸೋನಿಯಾ ಗಾಂಧಿ ಮತ್ತು ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅವರ ಮಧ್ಯೆ ಭಿನ್ನ ನಿಲುವುಗಳು ವ್ಯಕ್ತವಾದವು ಎಂದು ತಿಳಿದುಬಂದಿದೆ.

ಸಿಡಬ್ಲ್ಯೂಸಿ ಸಭೆಯಲ್ಲಿ ಕಾಂಗ್ರೆಸ್‌ನ ಮುಂದಿನ ರಾಜಕೀಯ ತಂತ್ರಗಾರಿಕೆ ಹಾಗೂ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ವಿರುದ್ಧ ಚುನಾವಣಾ ಆಯೋಗದ ಮೇಲೆ ವಾಗ್ದಾಳಿ ನಡೆಸುವ ಕುರಿತು ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಈ ಪ್ರಸಂಗ ಎದುರಾಗಿರುವುದಾಗಿ ವರದಿಯಾಗಿದೆ.

ಸಭೆಯನ್ನುದ್ದೇಶಿಸಿ ಮಾತನಾಡಿದ ದಿಗ್ವಿಜಯ್ ಸಿಂಗ್, ನಾವು ನಿತೀಶ್ ಕುಮಾರ್ ಅವರಿಗೆ ಇಂಡಿಯಾ ಒಕ್ಕೂಟದಿಂದ ಹೊರಹೋಗಲು ಅವಕಾಶ ನೀಡಬಾರದಿತ್ತು. ಅವರನ್ನು ಮೈತ್ರಿಕೂಟದಲ್ಲೇ ಉಳಿಸಿಕೊಳ್ಳಲು ಪ್ರಯತ್ನಗಳನ್ನು ನಡೆಸಬೇಕಿತ್ತು. ಅವರು ನಮ್ಮೊಂದಿಗೆ ಉಳಿದುಕೊಂಡಿದ್ದರೆ ಇಂದಿನ ರಾಜಕೀಯ ಪರಿಸ್ಥಿತಿಯೇ ಬೇರೆಯಾಗಿರುತ್ತಿತ್ತು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಇದನ್ನೂ ಓದಿ:SIR ವಿವಾದಕ್ಕೆ ಬ್ರೇಕ್: ಮತದಾರರ ಫಾರ್ಮ್-6 ನಲ್ಲಿದ್ದ ಹೆಚ್ಚುವರಿ ನಿಯಮ ಹಿಂಪಡೆದ ಚುನಾವಣಾ ಆಯೋಗ!

ಈ ಹೇಳಿಕೆಗೆ ತಕ್ಷಣವೇ ಪ್ರತಿಕ್ರಿಯಿಸಿದ ಸೋನಿಯಾ ಗಾಂಧಿ, ದೇವರಿಗೆ ಧನ್ಯವಾದ, ನಿತೀಶ್ ಕುಮಾರ್ ಸರಿಯಾದ ಸಮಯಕ್ಕೇ ಹೊರನಡೆದರು. ಅವರು ಬಿಜೆಪಿಗೆ ಹೋಗಲೇಬೇಕಿತ್ತು, ನಿತೀಶ್ ಮೊದಲಿನಿಂದಲೂ ಇಂಡಿಯಾ ಒಕ್ಕೂಟದಿಂದ ಹೊರಹೋಗಲು ಹೆಜ್ಜೆ ಹೆಜ್ಜೆಗೂ ನೆಪ ಹುಡುಕುತ್ತಿದ್ದರು ಮತ್ತು ಅವರನ್ನು ಬಿಜೆಪಿ ನಿಯಂತ್ರಿಸುತ್ತಿತ್ತು ಎಂದು ಆರೋಪಿಸಿದರು.

2024ರ ಜನವರಿಯಲ್ಲಿ ನಿತೀಶ್ ಕುಮಾರ್ ಅವರು ಮಹಾಗಟಬಂಧನ್​​ದಿಂದ ಹೊರಬಂದು, ಬಿಜೆಪಿಯೊಂದಿಗೆ ಕೈಜೋಡಿಸಿ ಹೊಸ ಸರ್ಕಾರ ರಚಿಸಿದ್ದರು. ಈ ರಾಜಕೀಯ ತಿರುವುಗಳ ನಂತರ ಅವರು ಬಿಹಾರದ ಮುಖ್ಯಮಂತ್ರಿಯಾಗಿ ದಾಖಲೆಯ 9ನೇ ಬಾರಿಗೆ ಪ್ರಮಾಣವಚನ ಸ್ವೀಕರಿಸಿದ್ದರು.

Also Read
SIR ವಿವಾದಕ್ಕೆ ಬ್ರೇಕ್: ಮತದಾರರ ಫಾರ್ಮ್-6 ನಲ್ಲಿದ್ದ ಹೆಚ್ಚುವರಿ ನಿಯಮ ಹಿಂಪಡೆದ ಚುನಾವಣಾ ಆಯೋಗ!
ಕಾಂಗ್ರೆಸ್​ ಸಭೆಯಲ್ಲಿ ಸೋನಿಯಾ ಗಾಂಧಿ-ದಿಗ್ವಿಜಯ್ ಸಿಂಗ್ ಮಾತಿನ ಚಕಮಕಿ...?

ಇಂದು ಇಂಡಿಯಾ ಒಕ್ಕೂಟದ ಸಭೆ!...

ಇಂದು (ಬುಧವಾರ) ಇಂಡಿಯಾ ಒಕ್ಕೂಟದ ಪ್ರಮುಖ ಸಭೆ ನಿಗದಿಯಾಗಿದ್ದು, ಅದಕ್ಕೂ ಮುನ್ನ ಕಾಂಗ್ರೆಸ್ ನಾಯಕರ ನಡುವೆ ಈ ಚರ್ಚೆ ನಡೆದಿದೆ. ಒಕ್ಕೂಟದ ಸಭೆಯಲ್ಲಿ ಎಸ್​​ಐಆರ್​ ಪ್ರಕ್ರಿಯೆ ಮತ್ತು ಚುನಾವಣಾ ಆಯೋಗದ ವಿರುದ್ಧ ಜಂಟಿ ಹೋರಾಟದ ತಂತ್ರಗಾರಿಕೆಯನ್ನು ವಿಪಕ್ಷಗಳು ರೂಪಿಸಲಿವೆ.

ಮಂಗಳವಾರ ನಡೆದ ಸಭೆಯಲ್ಲಿ ಸಿಡಬ್ಲ್ಯೂಸಿಯು ಮಹತ್ವದ ನಿರ್ಣಯವೊಂದನ್ನು ಅಂಗೀಕರಿಸಿದೆ. ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯನ್ನು ಪ್ರಕ್ರಿಯೆಯನ್ನು ತಕ್ಷಣವೇ ಅಮಾನತುಗೊಳಿಸಬೇಕು, ಪಟ್ಟಿಯಿಂದ ತೆಗೆದುಹಾಕಲಾಗಿದೆ ಎನ್ನಲಾದ 13.3 ಕೋಟಿ ಹೆಸರುಗಳನ್ನು ಮರುಸೇರ್ಪಡೆಗೊಳಿಸಬೇಕು ಮತ್ತು ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರು ತಕ್ಷಣ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದೆ.

ಇದರ ಜೊತೆಗೆ, ಚುನಾವಣಾ ಆಯೋಗದ ಸ್ವಾಯತ್ತತೆ ಕುಸಿದಿದೆ ಎಂದು ಆರೋಪಿಸಿರುವ ಕಾಂಗ್ರೆಸ್, ಪ್ರಧಾನಿ ನರೇಂದ್ರ ಮೋದಿ ಅವರ ರಾಜೀನಾಮೆಗೂ ಆಗ್ರಹಿಸಿದೆ. ಚುನಾವಣಾ ಆಯೋಗವು ಸ್ವತಂತ್ರ ಸಂವಿಧಾನಾತ್ಮಕ ಸಂಸ್ಥೆಯಾಗಿ ಪುನಃಸ್ಥಾಪನೆಗೊಳ್ಳುವವರೆಗೆ ಸಂಸತ್ತಿನಲ್ಲಿ, ನ್ಯಾಯಾಲಯಗಳಲ್ಲಿ ಹಾಗೂ ಬೀದಿಗಿಳಿದು ಹೋರಾಟವನ್ನು ತೀವ್ರಗೊಳಿಸುವುದಾಗಿ ಪಕ್ಷ ಸ್ಪಷ್ಟಪಡಿಸಿದೆ. ಈ ಉನ್ನತ ಮಟ್ಟದ ಸಿಡಬ್ಲ್ಯೂಸಿ ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಹಲವು ಪ್ರಮುಖ ನಾಯಕರು ಉಪಸ್ಥಿತರಿದ್ದರು(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net