ಕೆಲ ದಿನಗಳ ಹಿಂದೆ ತಮಿಳುನಾಡು ಬಿಜೆಪಿ ಅಧ್ಯಕ್ಷ ನೈನಾರ್ ನಾಗೇಂದ್ರನ್, ವಿಜಯ್ ರಾಜಕೀಯಕ್ಕೆ ಹೊಸಬ, ಅವನಿಗೆ ರಾಜಕೀಯ ಏನೆಂದು ತಿಳಿದಿಲ್ಲ. ರಾಜಕೀಯ ಏನೆಂದು ತಿಳಿದಕೊಳ್ಳುವ ಮೊದಲು ಆ ನಟಿ ತ್ರಿಷಾ ಮನೆಯಿಂದ ಮೊದಲು ಹೊರಬರಬೇಕು ಎಂಬ ಹೇಳಿಕೆ ನೀಡಿದ್ದರು. ಈ ಹೇಳಿಕೆ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿ, ತ್ರಿಷಾ ಅವರ ವಕೀಲರು ಈ ಹೇಳಿಕೆಯನ್ನು ಹೊರ ತೆಗೆದುಕೊಳ್ಳಬೇಕು ಎಂದು ತಾಕೀತು ಮಾಡಿದ ನಂತರ ನಾಗೇಂದ್ರ ತಮ್ಮ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೇಳುತ್ತೆನೆ ಎಂದು ಹೇಳಿದ್ದರು.