ಇಥಿಯೋಪಿಯನ್ ರಾಜಧಾನಿ ಅಡಿಸ್ ಅಬಾಬಾವನ್ನು ಆಫ್ರಿಕಾದ ಪ್ರಮುಖ ವಾಯುಯಾನ ಕೇಂದ್ರವಾಗಿ ಅಭಿವೃದ್ಧಿಪಡಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದು, ವಿಮಾನಗಳ ಸಂಖ್ಯೆ, ಅಂತಾರಾಷ್ಟ್ರೀಯ ಮಾರ್ಗಗಳು ಮತ್ತು ಕಾರ್ಯಾಚರಣೆಯ ಸಾಮರ್ಥ್ಯಗಳನ್ನು ಗಮನಾರ್ಹವಾಗಿ ವಿಸ್ತರಿಸಲು ಕಾರಣರಾಗಿದ್ದಾರೆ. ಆರೋಗ್ಯ ಕಾರಣಗಳಿಂದಾಗಿ ಅವರು 2022ರಲ್ಲಿ ನಿವೃತ್ತಿ ಪಡೆದರು. ಆದರೀಗ, ಏರ್ ಇಂಡಿಯಾಗೆ ಜಂಪ್ ಹೊಡೆದಿರುವ ಅವರು, ಇನ್ಮುಂದೆ ಟಾಟಾ ಒಡೆತನದ ಸಂಸ್ಥೆಯನ್ನು ಸಿಇಒ ಆಗಿ ಮುನ್ನಡೆಸಲಿದ್ದಾರೆ.