ಅನಂತ್ನಾಗ್ನಲ್ಲಿ ಉಗ್ರರ ಅಟ್ಟಹಾಸ: ಅಮರನಾಥ್ ಯಾತ್ರೆ ಭದ್ರತಾ ಸಿಬ್ಬಂದಿಗಳ ಮೇಲೆ ಗುಂಡಿನ ದಾಳಿ; ಒಬ್ಬ ಪೊಲೀಸ್ ಹುತಾತ್ಮ! Terror Attack in Anantnag
ಅಮರನಾಥ ಯಾತ್ರೆ ಭದ್ರತಾ ಸಿಬ್ಬಂದಿ ಮೇಲೆ ಉಗ್ರರ ಗುಂಡಿನ ದಾಳಿ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಜಮ್ಮು-ಕಾಶ್ಮೀರದ ಅನಂತ್ನಾಗ್ನಲ್ಲಿ ಮತ್ತೆ ತಲೆಎತ್ತಿದ ಭಯೋತ್ಪಾದನೆ
ಅಮರನಾಥ ಯಾತ್ರೆ ಭದ್ರತಾ ಸಿಬ್ಬಂದಿ ಮೇಲೆ ಉಗ್ರರ ಗುಂಡಿನ ದಾಳಿ
ದಾಳಿಯಲ್ಲಿ ಓರ್ವ ಪೊಲೀಸ್ ಸಿಬ್ಬಂದಿ ಹುತಾತ್ಮ; ಕಣಿವೆ ರಾಜ್ಯದಲ್ಲಿ ಭದ್ರತೆ ತೀವ್ರ
ಅನಂತ್ನಾಗ್: ಬುಧವಾರ (ಜು.22) ಜಮ್ಮು-ಕಾಶ್ಮೀರದ ಅನಂತ್ನಾಗ್ನಲ್ಲಿ ಪೊಲೀಸರ ಮೇಲೆ ಉಗ್ರದಾಳಿ (Terror Attack in Anantnag) ನಡೆದಿದ್ದು, ಒಬ್ಬ ಪೊಲೀಸ್ ಸಿಬ್ಬಂದಿ ಹುತಾತ್ಮನಾಗಿದ್ದಾನೆಂದು ವರದಿಯಾಗಿದೆ.
ಈ ಘಟನೆಯು ಮಧ್ಯಾಹ್ನ 12.30 ರ ಸಮಯದಲ್ಲಿ ಅನಂತ್ನಾಗ್ನಲ್ಲಿರುವ ಲಾಲ್ಚೌಕ್ ಬಳಿ ನಡೆದಿದ್ದು, ಅಮರ್ನಾಥ್ ಯಾತ್ರೆಯ ರಕ್ಷಣೆಗೆ ನಿಂತಿದ್ದ ಪೊಲೀಸ್ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆದಿದೆ ಎಂದು ಹೇಳಲಾಗುತ್ತಿದೆ.
ಹುತಾತ್ಮನಾದ ಪೊಲೀಸ್ ಸಿಬ್ಬಂದಿಯನ್ನು 35 ವರ್ಷದ ಆಶಿಕ್ ಹುಸೇನ್ ಖುರೇಷಿ ಎಂದು ಗುರುತಿಸಲಾಗಿದ್ದು, ಗುಂಡಿನ ದಾಳಿ ನಡೆದ ಕೂಡಲೇ, ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದರೆ ಆಸ್ಪತ್ರೆ ತಲುಪುವ ಮೊದಲೆ ಸಾವು ಸಂಭವಿಸಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಈ ಕೃತ್ಯ ಮಾಡಿದ್ದು ನಾವೇ!
ಅನಂತ್ನಾಗ್ನಲ್ಲಿ ನಡೆದಿರುವ ಈ ದಾಳಿಯ ಜವಾಬ್ದಾರಿಯನ್ನು ಭಯೋತ್ಪಾದನಾ ಸಂಘಟನೆ ಲಷ್ಕರ್-ಎ-ತೊಯ್ಬಾ ತೆಗೆದುಕೊಂಡಿದೆ. ಸದ್ಯ ಘಟನಾ ಸ್ಥಳದಲ್ಲಿ ಸೇನಾ ಸಿಬ್ಬಂದಿಗಳು ಬೀಡು ಬಿಟ್ಟಿದ್ದು, ಶಂಕಿತ ಉಗ್ರರ ಪತ್ತೆಗಾಗಿ ಕಾರ್ಯಾಚರಣೆ ಮುಂದುವರಿಸಿದೆ ಎಂದು ತಿಳಿದು ಬಂದಿದೆ.
ಕಳೆದ ನಾಲ್ಕು ದಿನದಿಂದ ಜಮ್ಮು-ಕಾಶ್ಮೀರದಲ್ಲಿ ಹವಾಮಾನ ವೈಪರಿತ್ಯ ಉಂಟಾದ ಹಿನ್ನಲೆ ಅಮರನಾಥ್ ಯಾತ್ರೆಯನ್ನು ನಿಲ್ಲಿಸಲಾಗಿದೆ. ಹೀಗಾಗಿ ರಕ್ಷಣೆಗಾಗಿ ನಿಯೋಜನೆಯಾಗಿದ್ದ ಸೈನಿಕರು ತಮ್ಮ ಕ್ಯಾಂಪ್ ಸೇರಿದ್ದ ಹಿನ್ನಲೆ ಈ ಘಟನೆ ನಡೆದಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಈ ಬಾರಿಯ ಅಮರನಾಥ್ ಯಾತ್ರೆಗೆ ಹೆಚ್ಚಿನ ಭದ್ರತೆಯನ್ನು ನೀಡಲು ಹೆಚ್ಚು ಕಡೆಮೆ 80 ಸಾವಿರ ಭದ್ರತಾ ಸಿಬ್ಬಂದಿಗಳನ್ನು ಕೇಂದ್ರ ಸರ್ಕಾರ ನಿಯೋಜನೆ ಮಾಡಿದೆ. ಆದರೆ ಪರಿಸರ ವೈಪರಿತ್ಯದ ಕಾರಣ ತಾತ್ಕಾಲಿಕವಾಗಿ ಈ ಅಮರನಾಥ್ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಜಮ್ಮು-ಕಾಶ್ಮೀರ ಆಡಳಿತ ಆದೇಶವನ್ನು ಹೊರಡಿಸಿದೆ, (ಏಜನ್ಸೀಸ್).