ಈ ಕುರಿತು ಮಾಹಿತಿ ನೀಡಿರುವ ಡಿಸಿಪಿ ಷ್ಣಲಾಲ್ ಚಂದಾನಿ, ಪ್ರಖರ್ ಕಾಸ್ಲಿವಾಲ್ ಅವರ ಹುಟ್ಟುಹಬ್ಬದ ಆಚರಣೆ ಮುಗಿಸಿಕೊಂಡು ಪ್ರೇರಣಾ, ಪ್ರಖರ್, ಮನಾ ಮತ್ತು ಅನುಷ್ಕಾ ಬೂದು ಬಣ್ಣದ ಟಾಟಾ ನೆಕ್ಸಾನ್ ಕಾರಿನಲ್ಲಿ (ನೋಂದಣಿ ಸಂಖ್ಯೆ MP13 ZS 8994) ಮನೆಗೆ ವಾಪಸ್ ಆಗುತ್ತಿದ್ದರು. ಪ್ರಖರ್ ಕಾರನ್ನು ಚಲಾಯಿಸುತ್ತಿದ್ದು, ನಿಯಂತ್ರಣ ತಪ್ಪಿ ಟ್ರಕ್ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎಂದು ಹೇಳಿದ್ದಾರೆ.