ದಳಪತಿ ವಿಜಯ್​ಗೆ ಕೇಳಿದ್ವಿ ಅಂತ ಹೇಳಿ ಮೇಡಂ ಅಂದ ಅಭಿಮಾನಿ; ನಗು ಮುಖದಿಂದ ಒಳಗೊಳಗೆ ನಕ್ಕ ನಟಿ ತ್ರಿಷಾ | Actress Trisha

ನಟಿ ತ್ರಿಷಾ ಮತ್ತು ಸಿಎಂ ವಿಜಯ್
ನಟಿ ತ್ರಿಷಾ ಮತ್ತು ಸಿಎಂ ವಿಜಯ್
Published on
ಚೆನ್ನೈ: ತಮಿಳುನಾಡು ಸಿಎಂ ಸಿ.ಜೋಸೆಫ್ ವಿಜಯ್ ಮತ್ತು ಸೌತ್ ಬ್ಯೂತಿ ನಟಿ ತ್ರಿಷಾ ಕೃಷ್ಣನ್(Actress Trisha) ನಡುವಿನ ಸಂಬಂಧದ ಊಹಾಪೋಹಗಳು ಕಡಿಮೆಯಾಗುತ್ತಿಲ್ಲ. ಕರುಪ್ಪು ಚಿತ್ರದ ವಿಶೇಷ ಪ್ರದರ್ಶನದಲ್ಲಿ ಈ ಜೋಡಿಯ ಬಗೆಗಿನ ನಿರೂಪಣೆ ಮತ್ತಷ್ಟು ವೇಗವನ್ನು ಪಡೆದುಕೊಂಡಿದ್ದು, ಇಬ್ಬರು ಸಂಬಂಧದಲ್ಲಿರುವುದನ್ನು ಖಚಿತಪಡಿಸಿದೆ.
ತಿಂಗಳುಗಳ ಹಿಂದೆ ಚೆನ್ನೈನಲ್ಲಿ ನಡೆದ ವಿವಾಹ ಆರತಕ್ಷತೆಯಲ್ಲಿ ವಿಜಯ್ ಮತ್ತು ತ್ರಿಷಾ ಒಟ್ಟಿಗೆ ಕಾಣಿಸಿಕೊಂಡಾಗ ಇಬ್ಬರು ರಿಲೇಷನ್​ಶಿಫ್​ನಲ್ಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಮೊನ್ನೆಯ ತಮಿಳುನಾಡು ಸಿಎಂ ಆಗಿ ವಿಜಯ್ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲೂ ಕೂಡ ತ್ರಿಷಾ ಭಾಗವಹಿಸಿದ್ದು ಎಲ್ಲರ ಗಮನ ಸೆಳೆದಿತ್ತು.
ಈಗ ಮತ್ತೊಂದು ಅಂತಹದ್ದೇ ಕ್ಷಣ ಅವರ ನಡುವಿನ ಸಂಬಂಧವನ್ನು ಬಹಿರಂಗಪಡಿಸಿದ್ದು, ಸೂರ್ಯ ಜೊತೆ ನಟಿಸಿರುವ ತ್ರಿಷಾ ಅವರ ಚಿತ್ರ ಕರುಪ್ಪು ಎರಡು ದಿನಗಳ ಹಿಂದೆ ಬಿಡುಗಡೆಯಾಯಿತು. ಚಿತ್ರದ ವಿಶೇಷ ಪ್ರದರ್ಶನದ ಸಮಯದಲ್ಲಿ ಒಬ್ಬ ಅಭಿಮಾನಿ ತ್ರಿಶಾಗೆ ವಿಜಯ್ ಅವರನ್ನು ಕೇಳಿದೆ ಅಂತ ಹೇಳಿ ಮೇಡಂ ಅಂದಾಗ ತ್ರಿಷಾ ಅವರು ನಾಚಿಕೆಪಟ್ಟುಕೊಂಡು ಕಾರಲ್ಲಿ ಕುಳಿತು ಒಳಗೊಳಗೆ ನಕ್ಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net