ಸದ್ಯ ಆ್ಯಪ್ ಮೇಲಿದ್ದ ಮುಖ್ಯ ನಿಷೇಧದ ಅವಧಿ ಮುಕ್ತಾಯಗೊಂಡಿದ್ದರೂ ಸಹ, ಈಗಾಗಲೇ ಪೋಸ್ಟ್ ಮಾಡಲಾದ ಸಂದೇಶಗಳನ್ನು ತಿದ್ದಲು ಅವಕಾಶ ನೀಡುವ 'ಮೆಸೇಜ್ ಎಡಿಟಿಂಗ್' ಫೀಚರ್ ಮೇಲಿನ ನಿಷೇಧವು ಭಾರತದಲ್ಲಿ ಜೂನ್ 30 ರವರೆಗೆ ಮುಂದುವರಿಯಲಿದೆ. ಪರೀಕ್ಷೆ ಮುಗಿದ ನಂತರ ಹಳೆಯ ಮೆಸೇಜ್‌ಗಳ ಟೈಮ್‌ಸ್ಟ್ಯಾಂಪ್ ಬದಲಾಗದಂತೆ ಪ್ರಶ್ನೆಪತ್ರಿಕೆಗಳನ್ನು ತೂರಿಸಿ, ಸುಳ್ಳು ಪ್ರಶ್ನೆಪತ್ರಿಕೆ ಸೋರಿಕೆ ಪುರಾವೆಗಳನ್ನು ಸೃಷ್ಟಿಸುವುದನ್ನು ತಡೆಯಲು ಈ ವಿಶೇಷ ನಿರ್ಬಂಧವನ್ನು ವಿಧಿಸಲಾಗಿದೆ, (ಏಜೆನ್ಸೀಸ್).