ಭಾರತದಲ್ಲಿ ಟೆಲಿಗ್ರಾಮ್ ತಾತ್ಕಾಲಿಕ ನಿಷೇಧ! ದೆಹಲಿ ಹೈಕೋರ್ಟ್​ ಮೆಟ್ಟಿಲೇರಿದ ಕಂಪನಿ ಮಾಲೀಕ; ಜೂನ್​ 21 ಕ್ಕೆ ನೀಟ್​ ಯುಜಿ ಪರೀಕ್ಷೆ! Telegram Ban

ಭಾರತದಲ್ಲಿ ಟೆಲಿಗ್ರಾಮ್‌ ಆ್ಯಪ್ ತಾತ್ಕಾಲಿಕ ನಿಷೇಧ
ಭಾರತದಲ್ಲಿ ಟೆಲಿಗ್ರಾಮ್‌ ಆ್ಯಪ್ ತಾತ್ಕಾಲಿಕ ನಿಷೇಧ
Published on

ಪ್ರಮುಖ ಮುಖ್ಯಾಂಶಗಳು

  • ಜೂನ್ 21ರ ನೀಟ್ ಯುಜಿ (NEET UG) ಮರುಪರೀಕ್ಷೆ
  • ಭಾರತದಲ್ಲಿ ಟೆಲಿಗ್ರಾಮ್‌ ಆ್ಯಪ್ ತಾತ್ಕಾಲಿಕ ನಿಷೇಧ
  • ಸರ್ಕಾರದ ನಿರ್ಧಾರದ ವಿರುದ್ಧ ದೆಹಲಿ ಹೈಕೋರ್ಟ್ ಮೆಟ್ಟಿಲೇರಿರುವ ಟೆಲಿಗ್ರಾಮ್ ಸಿಇಒ ಪಾವೆಲ್ ಡುರೊವ್
  • ಲಯನ್ಸ್ ಮತ್ತು ಮೆಟಾ ಸಂಸ್ಥೆಗಳ ವಿರುದ್ಧ ಗಂಭೀರ ಆರೋಪ
ನವದೆಹಲಿ: ಜೂನ್​ 21 ರಂದು ನೀಟ್​ ಯುಜಿ ಪರೀಕ್ಷೆ ಹಿತ ದೃಷ್ಟಿಯಿಂದ ಕೇಂದ್ರ ಸರ್ಕಾರವು ಮೆಸೇಜಿಂಗ್​ ವೇದಿಕೆ ಟೆಲಿಗ್ರಾಮ್​ನ್ನು (Telegram Ban) ಜೂನ್​ 22 ರ ವೆರೆಗೆ ತಾತ್ಕಾಲಿಕ ನಿಷೇಧ ಹೇರಿದೆ.
ಈಗ ಈ ನಿರ್ಧಾರವನ್ನು ಪ್ರಶ್ನಿಸಿ ಟೆಲಿಗ್ರಾಮ್​ ದೆಹಲಿ ಹೈಕೋರ್ಟ್​ ಮೆಟ್ಟಿಲನ್ನೇರಿದೆ. ಈ ಪ್ರಕರಣವನ್ನು ರಜಾ ಕಾಲದ ಪೀಠದ ನ್ಯಾಯಮೂರ್ತಿ ತೇಜಸ್​​ ಕರಿಯಾ ಅವರ ನ್ಯಾಯಪೀಠ ಬುಧವಾರ (ಜೂ.17) ತುರ್ತಾಗಿ ವಿಚಾರಣೆ ನಡೆಸಲಿದೆ.
ಮೊದಲ ಬಾರಿಗೆ ನೀಟ್​ ಪ್ರಶ್ನೆ ಪತ್ರಿಕೆಗಳು ಟೆಲಿಗ್ರಾಮ್​ ಮೂಲಕವೇ ಅತ್ಯಧಿಕವಾಗಿ ಸೋರಿಕೆಯಾಗಿ, ಹಂಚಿಕೆಯಾದ ಕಾರಣ, ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಮತ್ತು ಉನ್ನತ ಶಿಕ್ಷಣ ಇಲಾಖೆ ಸರ್ಕಾರ ಈ ಮೆಸೇಜಿಂಗ್​ ವೇದಿಕೆಯನ್ನು ತಾತ್ಕಾಲಿಕವಾಗಿ ನಿಷೇಧಿಸುವಂತೆ ಸಲಹೆ ನೀಡಿದೆ ಎಂದು ತಿಳಿದು ಬಂದಿದೆ.

ಸರ್ಕಾರದ ನಿರ್ಧಾರಕ್ಕೆ ಟೆಲಿಗ್ರಾಮ್​ ಬೇಸರ!

ಭಾರತದ ಸರ್ಕಾರದ ಈ ತಾತ್ಕಾಲಿಕ ನಿಷೇಧಕ್ಕೆ ಬೇಸರ ವ್ಯಕ್ತ ಪಡಿಸಿರುವ ಟೆಲಿಗ್ರಾಮ್​ ಸ್ಥಾಪಕ ಹಾಗೂ ಸಿಇಒ ಪಾವೆಲ್ ಡುರೊವ್ (Pavel Durov) ಸರ್ಕಾರದ ಈ ನಿರ್ಧಾರದಿಂದ ಕಂಪನಿಯ ಬಳಕೆದಾರರಿಗೆ ತೊಂದರೆಯಾಗಲಿದೆ ಎಂದಿದ್ದಾರೆ.
ಈ ಹಿಂದೆ ಭಾರತದಲ್ಲಿ ಪೇಪರ್​ ಲೀಕ್​ ಸೇರಿದಂತೆ ಇತರೆ ವಂಚನೆಗೆ ಟೆಲಿಗ್ರಾಮ್​ನ್ನು ಬಳಸಿದ ಖಾತೆಗಳನ್ನು ನಾವು ವೇದಿಕೆಯಿಂದ ಹೊರಹಾಕಿದ್ದೆವೆ. ಹಾಗೆಯೇ ಕೇವಲ ಟೆಲಿಗ್ರಾಮ್​ ಮೂಲಕ ಪೇಪರ್​​ ಲೀಕ್​ ಆಗಿಲ್ಲ ಎಂದು ಹೇಳಿದ್ದಾರೆ.

ರಿಲಾಯನ್ಸ್​ ಮೇಲೆ ಗರಂ ಆದ ಟೆಲಿಗ್ರಾಮ್​ ಸ್ಥಾಪಕ

ಭಾರತದಲ್ಲಿ ತಮ್ಮ ಮೆಸೇಜಿಂಗ್​ ವೇದಿಕೆ ತಾತ್ಕಾಲಿಕ ನಿಷೇಧವಾಗುವುದರಲ್ಲಿ ರಿಲಯನ್ಸ್ ಗ್ರೂಪ್ ಮತ್ತು ವಾಟ್ಸಾಪ್ ಭಾಗಿಯಾಗಿದೆ ಎಂದು ಪಾವೆಲ್ ಡುರೊವ್ ಆರೋಪಿಸಿದ್ದಾರೆ.
ಈ ಕುರಿತು ಟ್ವಿಟ್​ ಮಾಡಿರುವ ಪಾವೆಲ್ ಡುರೊವ್, ಭಾರತೀಯ ಟೆಲಿಕಾಂ ಕಂಪನಿ ರಿಲಯನ್ಸ್, ಬಿಜಿಪಿ ಹೈಜಾಕಿಂಗ್ ಎಂಬ ವಿಧಾನದ ಮೂಲಕ ಭಾರತದ ಹೊರಗಿನ ಯುಎಇ ಸೇರಿದಂತೆ ಲಕ್ಷಾಂತರ ಬಳಕೆದಾರರಿಗೆ ಟೆಲಿಗ್ರಾಮ್ ಪ್ರವೇಶವನ್ನು ಹಾಳು ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ವಾಟ್ಸಾಪ್‌ನ ಮಾಲೀಕ ಕಂಪನಿಯಾದ ಮೆಟಾ, ರಿಲಾಯನ್ಸ್​​ನ ಭಾಗಶಃ ಒಡೆತನ ಹೊಂದಿರುವ ಕಾರಣ ಟೆಲಿಗ್ರಾಮ್​ ಭಾರತದಲ್ಲಿ ಬೆಳವಣಿಗೆ ಹೊಂದದಂತೆ ತಡೆಯುತ್ತಿದೆ ಎಂದು ಹೇಳಿದ್ದಾರೆ.

ಜೂನ್​ 21 ಕ್ಕೆ ಜೀಟ್​ ಮರು ಪರೀಕ್ಷೆ

ಮೇ 3, 2026 ರಂದು ನಡೆದ ನೀಟ್​ ಯುಜಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಕಾರಣ, ಈ ಪರೀಕ್ಷೆಯನ್ನು ಜೂನ್​ 21 ಕ್ಕೆ ಮತ್ತೊಂದು ಬಾರಿ ನಡೆಸಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಮುಂದಾಗಿದೆ. ಮೇ 3 ರಂದು ನಡೆದ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣವನ್ನು ಕೇಂದ್ರ ತನಿಖಾ ಸಂಸ್ಥೆಯಾದ ಸಿಬಿಐ ವಿಚಾರಣೆ ನಡೆಸುತ್ತಿದ್ದು, ಈಗಾಗಲೇ ಹಲವು ಅಧಿಕಾರಿಗಳು ಮತ್ತು ಶಿಕ್ಷಕರನ್ನು ವಶಕ್ಕೆ ಪಡೆದುಕೊಂಡಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net