ಅಮೆರಿಕದಲ್ಲಿ ಮಗಳ ಮದುವೆ, ತೆಲಂಗಾಣದಿಂದ ಹಾರೈಕೆ; ಲೈವ್​ ಆಗಿ ಮಾಂಗಲ್ಯಧಾರಣೆ ಕಣ್ತುಂಬಿಕೊಂಡ ಪೋಷಕರು..Telangana

Telangana parents watch daughter US wedding via livestream
Telangana parents watch daughter US wedding via livestream
Published on

ಪ್ರಮುಖ ಮುಖ್ಯಾಂಶಗಳು

  • ಅಮೆರಿಕದಲ್ಲಿ ಮಗಳ ಮದುವೆ, ಲೈವ್​​​​​ ವಿಡಿಯೋದಲ್ಲಿ ಮಗಳಿಗೆ ಹಾರೈಸಿದ ಪೋಷಕರು.
  • ಕಾರಣಾಂತರದಿಂದ ಅಮೆರಿಕಕ್ಕೆ ಹೋಗಲಾಗದೆ... ತಾಯ್ನಾಡಿನಿಂದಲೇ ಹಾರೈಕೆ.
  • ಮಾಂಗಲ್ಯಧಾರಣೆ ವೇಳೆ ಲೈವ್​ನಲ್ಲಿಯೇ ಅಕ್ಷತೆ ಹಾಕಿದ ಪೋಷಕರು.
Telangana parents watch daughter US wedding via livestream:  ಮದುವೆ ಎನ್ನುವುದು ಪೋಷಕರಿಗೆ ಸೇರಿದಂತೆ ಮಕ್ಕಳಿಗೂ ಒಂದು ಸಂಭ್ರಮದ ಕ್ಷಣ.  ಹೀಗಾಗಿ  ಮಕ್ಕಳು ಹುಟ್ಟುತ್ತಲೇ  ಅವರ ವಿವಾಹ, ಓದಿಗಾಗಿ ಹಣ ಉಳಿತಾಯಕ್ಕೆ ಶುರು ಮಾಡುತ್ತಾರೆ.  ಚಿನ್ನ ಖರೀದಿಗೆ ಹಣ ಕೂಡಿಡುತ್ತಾರೆ.  ಮದುವೆ ಸಮಾರಂಭವನ್ನುಅದ್ದೂರಿಯಾಗಿ ಮಾಡಲು ವಿಶೇಷ ಛತ್ರಗಳನ್ನು ಬುಕ್ ಮಾಡುತ್ತಾರೆ.  ಈ ಮಧ್ಯೆ ತೆಲಂಗಾಣದ  ಕುಟುಂಬವೊಂದು ವಿದೇಶದಲ್ಲಿ ನಡೆಯುತ್ತಿರುವ ಮಗಳ ಮದುವೆಗೆ ಭಾರತದಿಂದಲೇ ವಿಡಿಯೋ ಕಾಲ್​ ಮೂಲಕ ಹಾರೈಸಿದ ದೃಶ್ಯಗಳು ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಅಮೆರಿಕದಲ್ಲಿ ಮದುವೆ, ತೆಲಂಗಾಣದಿಂದ ಹಾರೈಕೆ

ಹೌದು,  ತೆಲಂಗಾಣದ ಸೂರ್ಯಪೇಟೆಯಲ್ಲಿರು  ದಂಪತಿ ತಮ್ಮ ಪುತ್ರಿ ಹಿಮಬಿಂದು ಮದುವೆಗೆ ಸಾವಿರಾರು ಕಿಲೋಮೀಟರ್ ದೂರವಿರುವ ಅಮೆರಿಕಕ್ಕೆ ಪ್ರಯಾಣಿಸಲು ಸಾದ್ಯವಾಗದ ಕಾರಣ, ಭಾರತದಿಂದಲೇ  ವಿವಾಹದ ವಿಧಿವಿಧಾನಗಳನ್ನು ಮಾಡಿ, ಮಾಂಗಲ್ಯಧಾರಣೆ ಕಣ್ತುಂಬಿಕೊಂಡಿದ್ದಾರೆ.

ಪ್ರೀತಿಸಿ ಮದುವೆ

ತೆಲಂಗಾಣ ಮೂಲದ ಹಿಮಬಿಂದು ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದ ಎನ್​ಟಿಆರ್​ ಜಿಲ್ಲೆಯ ಯುವ ರೋಹಿತ್ ಕುಮಾರ್ ಎಂಬುವವರೊಂದಿಗೆ ಪ್ರೇಮದಲ್ಲಿದ್ದರು. ಕೊನೆಗೆ ಇಬ್ಬರು ತಮ್ಮ ಕುಟುಂಬಸ್ಥರನ್ನು ಒಪ್ಪಿಸಿ ಮದುವೆ ಮಾಡಿಕೊಳ್ಳಲು ನಿರ್ಧರಿಸಿದರು. ಅದರ ಭಾಗವಾಗಿ ಮದುವೆ ಶುಕ್ರವಾರ ಮದುವೆ ಮಾಡಿಕೊಂಡರು.
ಕಾರಣಾಂತರದಿಂದ ದಂಪತಿ, ಜಯರಾಜು ಮತ್ತು ಜ್ಯೋತಿ ಅಮೆರಿಕಕ್ಕೆ ತೆರಳಲಾಗದ ಕಾರಣ  ವರ್ಚುವಲ್ ಆಗಿ ವೀಕ್ಷಿಸಿದರು.  ಭಾರತದ ಸಂಪ್ರದಾಯದಂತೆ ನವಜೋಡಿ ಮದುವೆಯಾಗಿದ್ದಾರೆ. ತಮ್ಮ ಮಗಳು ಮತ್ತು ಅಳಿಯ ವಿವಾಹ ಪ್ರತಿಜ್ಞೆ ವಿನಿಮಯ ಮಾಡಿಕೊಳ್ಳುವಾಗ, ಮಾಂಗಲ್ಯಧಾರಣೆ ಮಾಡುವಾಗ ಟಿವಿ ಮೇಲೆಯೇ ಅಕ್ಷತೆ ಕಾಳನ್ನು ಹಾಕಿ ಹಾರೈಸಿದ್ದಾರೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net