3 ವರ್ಷ, 10 ರೂ. ನಾಣ್ಯ! ಕೂಡಿಟ್ಟ ಹಣದಲ್ಲಿ ಹೊಸ ಸ್ಕೂಟರ್ ಖರೀದಿಸಿದ್ರೂ ಈಡೇರಲಿಲ್ಲ ಈತನ ಆಸೆ​ | 10 Coins

ಚರ್ಚ್ ಪಾದ್ರಿಯಾಗಿರುವ ಜೋಸೆಫ್, 2023ರ ಅಕ್ಟೋಬರ್ 10ರಿಂದ ಈ ರೀತಿ ಕಾಯಿನ್​ ಉಳಿಸಲು ಶುರು ಮಾಡಿದರು. ದಿನನಿತ್ಯದ ವಸ್ತುಗಳ ಖರೀದಿಗಳ ಸಮಯದಲ್ಲಿ ಅವರಿಗೆ ಸಿಕ್ಕ 10 ರೂ. ನಾಣ್ಯವೇ ಈಗ ಒಂದೂವರೆ ಲಕ್ಷ ರೂ. ಆಗಿದೆ.
3 ವರ್ಷ, ದಿನಕ್ಕೆ 10 ರೂ. ನಾಣ್ಯ​... ಕೂಡಿಟ್ಟ ಹಣದಲ್ಲಿ ಹೊಸ ಸ್ಕೂಟರ್ ಖರೀದಿಸಿದ್ರೂ ಈ ವ್ಯಕ್ತಿಯ ಆಸೆ ಇನ್ನೂ ಈಡೇರಿಲ್ಲ​
3 ವರ್ಷ, ದಿನಕ್ಕೆ 10 ರೂ. ನಾಣ್ಯ​... ಕೂಡಿಟ್ಟ ಹಣದಲ್ಲಿ ಹೊಸ ಸ್ಕೂಟರ್ ಖರೀದಿಸಿದ್ರೂ ಈ ವ್ಯಕ್ತಿಯ ಆಸೆ ಇನ್ನೂ ಈಡೇರಿಲ್ಲ​
Published on: 

ತೆಲಂಗಾಣ: ಒಮ್ಮೊಮ್ಮೆ ಇಂದಿನ ಸಣ್ಣ ಉಳಿತಾಯವು ಮುಂದೊಂದು ದಿನ ದೊಡ್ಡ ಹಣವಾಗಿ ಬದಲಾಗಲಿದೆ ಎಂಬುದಕ್ಕೆ ನಮ್ಮ ಮುಂದೆ ಹಲವು ನಿದರ್ಶನಗಳಿವೆ. ಇದಕ್ಕೆ ಈ ವ್ಯಕ್ತಿಯ ಶಿಸ್ತಿನ ಉಳಿತಾಯ ಮತ್ತೊಂದು ಜ್ವಲಂತ ಸಾಕ್ಷಿ ಎಂದೇ ಹೇಳಬಹುದು.

10 ರೂ. ನಾಣ್ಯ

ತೆಲಂಗಾಣದ ಮಂಚೇರಿಯಲ್ ಜಿಲ್ಲೆಯ ಲುಕ್ಸೆಟ್ಟಿಪೇಟ್‌ನ ಬಿ. ರವಿ ಜೋಸೆಫ್ ಎಂಬ ವ್ಯಕ್ತಿಯೊಬ್ಬರು, ಕಳೆದ ಮೂರು ವರ್ಷಗಳಿಂದ ಪ್ರತಿದಿನ 10 ರೂ. ನಾಣ್ಯವನ್ನು (ಒಂದು ಅಥವಾ ಎರಡಕ್ಕಿಂತ ಹೆಚ್ಚು) ಕೂಡಿಡುವ ಮೂಲಕ ಬರೋಬ್ಬರಿ 1.23 ಲಕ್ಷ ರೂ. ಮೌಲ್ಯದ ಹೊಸ ಹೋಂಡಾ ಆಕ್ಟಿವಾ ಸ್ಕೂಟರ್​ ಅನ್ನು ಖರೀದಿ ಮಾಡಿದ್ದಾರೆ. ಚರ್ಚ್ ಪಾದ್ರಿಯಾಗಿರುವ ಜೋಸೆಫ್, 2023ರ ಅಕ್ಟೋಬರ್ 10ರಿಂದ ಈ ರೀತಿ ಕಾಯಿನ್​ ಉಳಿಸಲು ಶುರು ಮಾಡಿದರು. ದಿನನಿತ್ಯದ ವಸ್ತುಗಳ ಖರೀದಿಗಳ ಸಮಯದಲ್ಲಿ ಅವರಿಗೆ ಸಿಕ್ಕ 10 ರೂ. ನಾಣ್ಯವೇ ಈಗ ಒಂದೂವರೆ ಲಕ್ಷ ರೂ. ಆಗಿದೆ.

ಆಸೆ ಬೇರೆಯೇ ಇತ್ತು

ಕಳೆದ ಮೂರು ವರ್ಷಗಳಿಂದ, ನಾನು ದಿನನಿತ್ಯ ಹೊರಗೆ ಹೋದಾಗಲೆಲ್ಲ ಅಂಗಡಿ, ತರಕಾರಿ ಕೊಳ್ಳುವಾಗ ಸೇರಿದಂತೆ ಇತರೆ ವಸ್ತುಗಳನ್ನು ಖರೀದಿಸುವಾಗ ಹೇಗಾದರೂ 10 ರೂ. ನಾಣ್ಯವನ್ನು ಉಳಿಸಿಕೊಳ್ಳುತ್ತಿದ್ದೆ. ಹೀಗೆ ಮಾಡುತ್ತಾ ಬಂದಿದ್ದಕ್ಕೆ ಇಂದು ನನ್ನ ಬಳಿ 1,23,000 ರೂ. ಸೇವಿಂಗ್ಸ್​ ಇದೆ. ಈ ಹಣದಲ್ಲೇ ಈಗ ಹೊಸ ಸ್ಕೂಟರ್​ ಖರೀದಿ ಮಾಡಿದ್ದೇನೆ. ಅಷ್ಟಕ್ಕೂ, ನನ್ನ ಆಸೆ ಬೇರೆಯೇ ಇತ್ತು ಎಂದು ಜೋಸೆಫ್​ ಹೇಳಿಕೊಂಡಿದ್ದಾರೆ.

Also Read
ತನ್ನನ್ನು ತಿಂದು ಹಾಕಲು ವೈರಿ ಎದುರಿಗೆ ಬಂದರೆ ಸಾಕು ಕಣ್ಣಿನಿಂದ ರಕ್ತವನ್ನೇ ಹರಿಸುತ್ತೆ ಈ ವಿಚಿತ್ರ ಜೀವಿ | Horned lizards
3 ವರ್ಷ, ದಿನಕ್ಕೆ 10 ರೂ. ನಾಣ್ಯ​... ಕೂಡಿಟ್ಟ ಹಣದಲ್ಲಿ ಹೊಸ ಸ್ಕೂಟರ್ ಖರೀದಿಸಿದ್ರೂ ಈ ವ್ಯಕ್ತಿಯ ಆಸೆ ಇನ್ನೂ ಈಡೇರಿಲ್ಲ​

ಹಣಕಾಸಿನ ಕೊರತೆಯಿರುವ ಕಾರಣ, ನಾನು ಸ್ಕೂಟರ್​ ತೆಗೆದುಕೊಂಡೆ. ಇಲ್ಲದೆ ಹೋಗಿದ್ರೆ, ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕ್​ ಅನ್ನೇ ಖರೀದಿಸುತ್ತಿದ್ದೆ. ಆದರೆ, ಸಾಧ್ಯವಾಗಲಿಲ್ಲ. 10 ರೂ. ನಾಣ್ಯದ ಉಳಿತಾಯವನ್ನು ಇಲ್ಲಿಗೆ ನಿಲ್ಲಿಸುತ್ತಿರಲಿಲ್ಲ. ಆದರೆ, ಮುಂದಿನ ದಿನಗಳಲ್ಲಿ ಈ ಕಾಯಿನ್​ಗೆ ಇರುವ ಕಾನೂನುಬದ್ಧ ಸ್ಥಾನಮಾನ ಹೋದರೆ ಅಥವಾ ಚಲಾವಣೆ ನಿಂತುಬಿಟ್ಟರೆ ಏನು ಕಥೆ ಎಂಬ ಗೊಂದಲ ಹಾಗೂ ಕುಟುಂಬದವರ ಮಾತುಗಳು ಇದನ್ನು ಮುಂದುವರಿಸದಂತೆ ತಡೆಯಿತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net