

ಪ್ರಮುಖ ಮುಖ್ಯಾಂಶಗಳು
ಯಾವುದೇ ವಿಚಾರಕ್ಕೆ ಮಕ್ಕಳನ್ನು ಬೈಬೇಡಿ, ಚೆನ್ನಾಗಿ ನೋಡಿಕೊಳ್ಳಿ ಪ್ಲೀಸ್ ಎಂದು ಡೆತ್ನೋಟ್ ಬರೆದಿಟ್ಟು ತೆಲಂಗಾಣದ ನಿಜಾಮಾಬಾದ್ ನಗರದಲ್ಲಿ ದಂಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ. ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ತಮ್ಮ ಮಕ್ಕಳನ್ನು ಚಿಕ್ಕಮ್ಮನ ಮನೆಯಲ್ಲಿ ಬಿಟ್ಟಿದ್ದರು ಎನ್ನಲಾಗಿದೆ.
ವಿನಾಯಕ ನಗರದ ನಿವಾಸಿಯಾದ
ಶೇಷಲಾ ನರೇಶ್(35) ಹಾಗೂ
ಶೇಷಲಾ ಮೇಘನಾ(30)
ಮೃತರು ಗುರುತಿಸಲಾಗಿದೆ.
ತೀವ್ರ ಸಾಲಬಾಧೆ ಹಾಗೂ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರಿಂದ ಈ ನಿರ್ಧಾರ ತೆಗೆದುಕೊಂಡಿರಬಹುದು ಎಂದು ಶಂಕಿಸಲಾಗಿದೆ.
ದಂಪತಿ ಹತ್ತು ವರ್ಷದ ಹಿಂದೆ ಮದುವೆಯಾಗಿದ್ದರು ಅವರಿಗೆ ಇಬ್ಬರು ಮಕ್ಕಳಿದ್ದಾರೆ.
ನರೇಶ್ ಅವರು ಕಳೆದ ವರ್ಷ 90 ಲಕ್ಷ ಕೊಟ್ಟು ಮನೆ ಕೊಂಡುಕೊಂಡಿದ್ದರು. ಸಾಲಕ್ಕಾಗಿ ಹಲವಾರು ಕಡೆ ಹುಡುಕಾಡಿದ್ದರು. ಆದರೆ ಎಲ್ಲಿಯೂ ಸಿಗದಿದ್ದ ಕಾರಣ ತಮ್ಮ ಆಸ್ತಿಯ ಒಂದು ಭಾಗವನ್ನು ಮಾರಾಟ ಮಾಡಲು ನಿರ್ಧರಿಸಿದರು. ಹೀಗಿದ್ದರೂ ಸಾಲ ಮಾಡುವ ಪರಿಸ್ಥಿತಿ ಇತ್ತು. ಅದನ್ನು ಕಳೆದ ಕೆಲವು ತಿಂಗಳಿಂದ ಪಾವತಿ ಮಾಡುತ್ತಾ ಬಂದಿದ್ದರು. ಇದರಿಂದ ಉಂಟಾದ ಒತ್ತಡ ಹಾಗೂ ಆರೋಗ್ಯ ಸಮಸ್ಯೆಗಳಿಗೆ ಬೇಸತ್ತಿದ್ದ ಅವರು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದರು.