ನವದೆಹಲಿ: ಮುಂದಿನ ಎರಡು-ಮೂರು ದಿನಗಳವರೆಗೆ ಭಾರತದಲ್ಲಿ 350ಕ್ಕೂ ಹೆಚ್ಚು ವಿಮಾನಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಶನಿವಾರ ವರದಿಯಾಗಿದೆ.
A320 ವರ್ಗದ ವಿಮಾನಗಳಲ್ಲಿನ ಹಾರಾಟ ನಿಯಂತ್ರಣ ವ್ಯವಸ್ಥೆಗಳ ಮೇಲೆ ತೀವ್ರವಾದ ಸೌರ ವಿಕಿರಣ ಪರಿಣಾಮ(solar radiation might impact flight control systems) ಬೀರಬಹುದು ಎಂದು ಏರ್‌ಬಸ್ ಎಚ್ಚರಿಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ದೇಶಾದ್ಯಂತ ಮತ್ತು ವಿದೇಶಗಳಲ್ಲಿ ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಗಳಿಗೆ ಆಡಚರಣೆ ಉಂಟಾಗಲಿದೆ. ಈ ಹಿನ್ನೆಲೆ ಪ್ರಪಂಚದಾದ್ಯಂತ 6,000 ಕ್ಕೂ ಹೆಚ್ಚು ವಿಮಾನಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.
ಈ ವಿಮಾನಗಳಲ್ಲಿ ಹೆಚ್ಚಿನವು ಇಂಡಿಗೋ ಮತ್ತು ಏರ್ ಇಂಡಿಯಾ ಗ್ರೂಪ್‌ಗೆ ಸೇರಿವೆ. ನವೀಕರಣಗಳು ಪೂರ್ಣಗೊಂಡ ನಂತರ ಮುಂದಿನ ಸೋಮವಾರ ಅಥವಾ ಮಂಗಳವಾರ ವಿಮಾನಗಳು ಸಾಮಾನ್ಯ ಸ್ಥಿತಿಗೆ ಮರಳುವ ನಿರೀಕ್ಷೆಯಿದೆ ಎಂದು ವಿಮಾನಯಾನ ಸಂಸ್ಥೆಗಳು ತಿಳಿಸಿವೆ.
ಏನಿದು ಸೌರ ವಿಕಿರಣ?
ತೀವ್ರವಾದ ಸೌರ ವಿಕಿರಣವು ಪ್ರಮುಖವಾಗಿ A320 ಸರಣಿಯ ವಿಮಾನಗಳಲ್ಲಿ ಹಾರಾಟ ನಿಯಂತ್ರಣಗಳಿಗೆ ನಿರ್ಣಾಯಕವಾದ ಡೇಟಾವನ್ನು ಹಾಳುಮಾಡಬಹುದು. ಹೀಗಾಗಿ, ಈ ಸಮಸ್ಯೆಯನ್ನು ಸರಿಪಡಿಸಲು ಅಗತ್ಯವಿರುವ ಸಾಫ್ಟ್‌ವೇರ್ ಬದಲಾವಣೆಗಳ ಹಿನ್ನಲೆ ವಿಮಾನ ಸ್ಥಗಿತ ಅನಿವಾರ್ಯವಾಗಿದೆ(ಏಜೆನ್ಸೀಸ್).