ಬಿಸಿನೆಸ್ ಇನ್ಸೈಡರ್ ಪ್ರಕಾರ, ಬಾಲ್ಯದಲ್ಲಿ ಬಾಂಗ್ಲಾದೇಶದಿಂದ ನ್ಯೂಯಾರ್ಕ್‌ಗೆ ಸ್ಥಳಾಂತರಗೊಂಡ ಇಮ್ರಾನ್, ಮಾರಾಟ ಕ್ಷೇತ್ರದಲ್ಲಿ ಎರಡು ದಶಕಗಳ ಕಾಲ ಕೆಲಸ ಮಾಡಿದರು. ನಂತರ 2020 ರಲ್ಲಿ ಗೂಗಲ್‌ಗೆ ಸೇರಿದರು. ಅಲ್ಲಿ ಅವರ ಮೂಲ ವೇತನ ಸುಮಾರು 170,000 ಅಮೆರಿಕನ್ ಡಾಲರ್ ಆಗಿತ್ತು. ಆದರೆ, ಗೂಗಲ್‌ನಲ್ಲಿ ಅವರಿಗೆ ಸಿಕ್ಕ ಭಾರಿ ಮೊತ್ತದ ಸೇಲ್ಸ್ ಕಮಿಷನ್‌ಗಳು ಅವರ ಆದಾಯದ ಚಿತ್ರಣವನ್ನೇ ಬದಲಾಯಿಸಿದವು. ಈ ಕಮಿಷನ್‌ಗಳ ಬಲದಿಂದಾಗಿ ಕಳೆದ ವರ್ಷ ಅವರ ಒಟ್ಟು ವಾರ್ಷಿಕ ಗಳಿಕೆಯು ಬರೋಬ್ಬರಿ 9.32 ಕೋಟಿ ರೂ. ತಲುಪಿತ್ತು ಎಂದಿದ್ದಾರೆ.