ಟಿವಿಕೆ ಪ್ರತಿ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸುತ್ತಿದ್ದಂತೆ ವಿಜಯ್ ಅವರ ನಿವಾಸದಲ್ಲಿ ಸಂಭ್ರಮಾಚರಣೆಗಳು ಭುಗಿಲೆದ್ದವು. ನಟ ವಿಜಯ್ ತಂದೆ ಎಸ್.ಎ. ಚಂದ್ರಶೇಖರ್ ಅವರು ಲಿಫ್ಟ್ನಿಂದ ಎಂಟ್ರಿಯಾಗುತ್ತಿದ್ದಂತೆ, ಹರ್ಷೋದ್ಗಾರ, ಅಪ್ಪುಗೆ ಸಂತೋಷದ ಕಣ್ಣೀರು ಹರಿಸಿರುವ ವಿಡಿಯೋ ಎಕ್ಸ್ನಲ್ಲಿ ಹಂಚಿಕೊಳ್ಳಲಾಗಿದೆ. ಟಿವಿಕೆಯ ಚಿಹ್ನೆಯಾದ ಶಿಳ್ಳೆಯನ್ನು ಹಿಡಿದು, ವಿಜಯ್ ತಂದೆ ಸೇರಿದಂತೆ ಅವರ ಕುಟುಂಬಸ್ಥರೆಲ್ಲರು ಶಿಳ್ಳೆ ಹೊಡೆಯುವ ಮೂಲಕ ಸಂಭ್ರಮಿಸಿದ್ದಾರೆ.