ರಾಂಚಿ: ದೇಶದಲ್ಲಿ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು (Fuel Price Hike) ಸಾಮಾನ್ಯ ಜನರ ಜೇಬಿಗೆ ಕತ್ತರಿ ಹಾಕುತ್ತಿವೆ. ಮಧ್ಯಮ ವರ್ಗದ ಜನರು ವಾಹನ ತೆಗೆಯಬೇಕಾದರೆ ನೂರು ಬಾರಿ ಯೋಚಿಸುವಂತಾಗಿದೆ. ಆದಾಗ್ಯೂ, ಜಾರ್ಖಂಡ್ನ ಶಿಕ್ಷಕರೊಬ್ಬರು ಈ ಇಂಧನ ಬೆಲೆ ಏರಿಕೆಯ ಸಮಸ್ಯೆಗೆ ತಾವೇ ಒಂದು ಪರ್ಯಾಯ ದಾರಿಯನ್ನು ಕಂಡುಕೊಂಡಿದ್ದು, ಬೈಕ್ ಬಿಟ್ಟು ಕುದುರೆ ಸವಾರಿಯ ಮೂಲಕ ಸರ್ಕಾರದ ಸಮೀಕ್ಷಾ ಕಾರ್ಯ ನಡೆಸುತ್ತಿದ್ದು, ಸದ್ಯ ಇಂಟರ್ನೆಟ್‌ನಲ್ಲಿ ಈ ನಡೆ ಭಾರಿ ಸಂಚಲನ ಮೂಡಿಸಿದೆ.