TCS ಕೆಲಸ ಬಿಟ್ಟು ರೈಸ್ ಬಿಸಿನೆಸ್!...ವರ್ಷಕ್ಕೆ ₹25 ಲಕ್ಷ ಸಂಪಾದಿಸುತ್ತಿರುವ ಯುವಕನ ಯಶೋಗಾಥೆ ಇದು Corporate Vs Business
Corporate Vs Business (ಚಿತ್ರ X)
Published on:
Copied
Follow Us
Corporate Vs Business: ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ನಂತಹ ಪ್ರತಿಷ್ಠಿತ ಐಟಿ ಕಂಪನಿಯ ಕ್ಯಾಂಪಸ್ ಪ್ಲೇಸ್‌ಮೆಂಟ್ ಆಫರ್ ತಿರಸ್ಕರಿಸಿ, ಸ್ವಂತವಾಗಿ ಅಕ್ಕಿ ವಿತರಣಾ ಉದ್ಯಮ ಆರಂಭಿಸಿ ವರ್ಷಕ್ಕೆ ಸುಮಾರು 25 ಲಕ್ಷ ಆದಾಯ ಗಳಿಸುತ್ತಿರುವ ಯುವಕನೊಬ್ಬನ ಯಶೋಗಾಥೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಂಕಿತ್ ಪಾಂಡೆ ಎಂಬ ಬಳಕೆದಾರರು ತಮ್ಮ ಸ್ನೇಹಿತನ ಈ ಯಶಸ್ಸಿನ ಕಥೆಯನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆರಂಭದಲ್ಲಿ ಕಾರ್ಪೊರೇಟ್ ಕೆಲಸದ ಭದ್ರತೆಯನ್ನು ಬಿಟ್ಟು ಬಿಸಿನೆಸ್ ಆರಂಭಿಸಬೇಕು ಎಂದು ನಿರ್ಧರಿಸಿದಾಗ ಆ ಯುವಕನ ಸಂಬಂಧಿಕರು ಹಾಗೂ ಸ್ನೇಹಿತರಿಂದ ತೀವ್ರ ಟೀಕೆಗೆ ಗುರಿಯಾಗಿದ್ದರು. ಆದರೆ, ಎಲ್ಲಾ ಸವಾಲುಗಳನ್ನು ಮೀರಿ ಆತ ಇಂದು ಯಶಸ್ವಿ ಉದ್ಯಮಿಯಾಗಿದ್ದಾನೆ ಎಂದು ಹೇಳಿದ್ದಾರೆ.
ಉದ್ಯಮ ಮಾದರಿ ಕಾರ್ಯನಿರ್ವಹಿಸುವ ವಿಧಾನ
ಪಾಂಡೆ ಸೂಚಿಸುವಂತೆ ಈ ಯುವ ಉದ್ಯಮಿಯ ಯಶಸ್ಸಿನ ಮೂಲ ಸೂತ್ರವೆಂದರೆ ಮಧ್ಯವರ್ತಿಗಳ ಹಾವಳಿಯನ್ನು ಸಂಪೂರ್ಣವಾಗಿ ತಪ್ಪಿಸಿ ನೇರವಾಗಿ ಹಳ್ಳಿಗಳು ಹಾಗೂ ರಾಜ್ಯಗಳ ರೈತರನ್ನು ಸಂಪರ್ಕಿಸಿ ಅವರಿಂದ ಯಾವುದೇ ಮಧ್ಯವರ್ತಿಗಳಿಲ್ಲದೇ ನೇರವಾಗಿ ಭತ್ತ ಮತ್ತು ಅಕ್ಕಿಯನ್ನು ಸೌರ್ಸ್ ಮಾಡುತ್ತಾರೆ. ಇದರಿಂದ ರೈತರಿಗೂ ನ್ಯಾಯಯುತ ಬೆಲೆ ಸಿಗುವುದರ ಜೊತೆಗೆ, ಉದ್ಯಮಿಗೆ ಆರಂಭಿಕ ಖರೀದಿ ವೆಚ್ಚವೂ ಕಡಿಮೆಯಾಗುತ್ತದೆ.
ಆದಾಗ್ಯೂ, ರೈತರಿಂದ ಪ್ರತಿ ಕೆಜಿ ಅಕ್ಕಿಯನ್ನು 35 ರೂ.ಗೆ ಖರೀದಿಸಿ ಅದನ್ನು ಶುಚಿಗೊಳಿಸಿ ಮತ್ತು ಸ್ವಂತ ಬ್ರ್ಯಾಂಡ್ ಅಡಿಯಲ್ಲಿ ಪ್ಯಾಕಿಂಗ್ ಮಾಡಲು ಪ್ರತಿ ಕೆಜಿಗೆ 3 ಹಾಗೂ ಗ್ರಾಮೀಣ ಭಾಗದಿಂದ ಮಾರುಕಟ್ಟೆಗೆ ಸಾಗಿಸಲು 2 ವೆಚ್ಚವಾಗುತ್ತದೆ. ಈ ಎಲ್ಲಾ ಪ್ರಕ್ರಿಯೆಗಳ ನಂತರ ಒಂದು ಕೆಜಿ ಅಕ್ಕಿಯ ಒಟ್ಟು ಉತ್ಪಾದನಾ ವೆಚ್ಚ 40 ರೂ.ಗೆ ತಲುಪುತ್ತದೆ.
ಪ್ಯಾಕ್ ಮಾಡಿದ ಅಕ್ಕಿಯನ್ನು ಉದ್ಯಮಿಯು ತಾನು ಕಟ್ಟಿಕೊಂಡಿರುವ ನೆಟ್‌ವರ್ಕ್ ಮೂಲಕ ರಿಟೇಲರ್‌ಗಳಿಗೆ ಪ್ರತಿ ಕೆಜಿಗೆ 50 ರಂತೆ ಮಾರಾಟ ಮಾಡುತ್ತಾನೆ. ಇದರಿಂದ ಉದ್ಯಮಿಗೆ ಪ್ರತಿ ಕೆಜಿಗೆ ನೇರವಾಗಿ 10 ನಿವ್ವಳ ಲಾಭ ಸಿಗುತ್ತದೆ. ಚಿಲ್ಲರೆ ವ್ಯಾಪಾರಿಗಳು ಇದನ್ನು ಅಂತಿಮ ಗ್ರಾಹಕರಿಗೆ 55 ರಿಂದ 57 ಕ್ಕೆ ಮಾರಾಟ ಮಾಡಿ, ಕೆಜಿಗೆ 5 ರಿಂದ 7 ರಷ್ಟು ಲಾಭ ಕಂಡುಕೊಳ್ಳುತ್ತಾರೆ.
ಪ್ರಸ್ತುತ, ಈ ಉದ್ಯಮವು ತಿಂಗಳಿಗೆ ಸುಮಾರು 200 ಕ್ವಿಂಟಾಲ್ ಅಕ್ಕಿಯನ್ನು ಸುಮಾರು 200 ಚಿಲ್ಲರೆ ಅಂಗಡಿಗಳಿಗೆ ಪೂರೈಸುತ್ತಿದೆ. ಈ ಲೆಕ್ಕಾಚಾರದ ಪ್ರಕಾರ, ಆ ಯುವಕ ತಿಂಗಳಿಗೆ 2 ಲಕ್ಷಕ್ಕೂ ಹೆಚ್ಚು ಹಾಗೂ ವರ್ಷಕ್ಕೆ ಸುಮಾರು 25 ಲಕ್ಷ ಲಾಭ ಗಳಿಸುತ್ತಿದ್ದಾರೆ.
ನೆಟ್ಟಿಗರ ಪ್ರತಿಕ್ರಿಯೆ
ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಉದ್ಯಮಶೀಲತೆ ಮತ್ತು ರಿಸ್ಕ್ ತೆಗೆದುಕೊಳ್ಳುವಿಕೆಯ ಕುರಿತು ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ. ಒಬ್ಬ ಬಳಕೆದಾರರು ಹೆಚ್ಚಿನ ರಿಸ್ಕ್ ತಗೆದುಕೊಂಡಷ್ಟೂ ಹೆಚ್ಚಿನ ಲಾಭ ಸಿಗುತ್ತದೆ. ಸರಿಯಾದ ಸಮಯದಲ್ಲಿ ರಿಸ್ಕ್ ತಗೆದುಕೊಂಡಿದ್ದಕ್ಕೆ ಇಂದು ಉತ್ತಮ ಪ್ರತಿಫಲ ಸಿಗುತ್ತಿದೆ ಎಂದು ಕಮೆಂಟ್ ಮಾಡಿದ್ದರೆ. ಇನ್ನೊಬ್ಬ ಬಳಕೆದಾರ ಕಾರ್ಪೊರೇಟ್ ಕೆಲಸಕ್ಕಿಂತ ಸ್ವಂತ ಡಿಸ್ಟ್ರಿಬ್ಯೂಷನ್ ನೆಟ್‌ವರ್ಕ್ ಕಟ್ಟುವುದು ಎಂದಿಗೂ ಶ್ರೇಷ್ಠ, ಎಂದು ಅಭಿಪ್ರಾಯಪಟ್ಟಿದ್ದಾರೆ (ಏಜೆನ್ಸೀಸ್).