ಟಾಟಾ ಸನ್ಸ್‌ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಎನ್. ಚಂದ್ರಶೇಖರನ್! Tata Sons

ಟಾಟಾ ಸನ್ಸ್‌ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಎನ್. ಚಂದ್ರಶೇಖರನ್! Tata Sons
ಟಾಟಾ ಸನ್ಸ್‌ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಎನ್. ಚಂದ್ರಶೇಖರನ್! Tata Sons
Published on

ಪ್ರಮುಖ ಮುಖ್ಯಾಂಶಗಳು

  • ಟಾಟಾ ಸನ್ಸ್‌ ಅಧ್ಯಕ್ಷ ಸ್ಥಾನಕ್ಕೆ ಎನ್. ಚಂದ್ರಶೇಖರನ್ ರಾಜೀನಾಮೆ
  • ಫೆಬ್ರವರಿವರೆಗೆ ಅಧಿಕಾರದಲ್ಲಿ ಮುಂದುವರಿಯಲಿರುವ ಎನ್. ಚಂದ್ರಶೇಖರನ್
  • ಟಾಟಾ ಟ್ರಸ್ಟ್ಸ್ ಜೊತೆಗಿನ ಭಿನ್ನಾಭಿಪ್ರಾಯದಿಂದ ಹುದ್ದೆತ್ಯಜಿಸಿದ ಚಂದ್ರಶೇಖರನ್
  • ಸುಗಮ ಅಧಿಕಾರ ಹಸ್ತಾಂತರಕ್ಕೆ ಉತ್ತರಾಧಿಕಾರ ಪ್ರಕ್ರಿಯೆ ಆರಂಭಿಸಲು ಮನವಿ
ನವದೆಹಲಿ: ಟಾಟಾ ಸನ್ಸ್‌ (Tata Sons) ಅಧ್ಯಕ್ಷ ಸ್ಥಾನಕ್ಕೆ ಎನ್. ಚಂದ್ರಶೇಖರನ್ ( N Chandrasekaran ) ಅವರು ರಾಜೀನಾಮೆ ನೀಡಿದ್ದಾರೆ. ಆದರೂ, ತಮ್ಮ ಅಧಿಕಾರಾವಧಿ ಮುಗಿಯುವವರೆಗೆ ಅಂದರೆ ಮುಂಬರುವ ಫೆಬ್ರವರಿಯವರೆಗೆ (ಫೆಬ್ರವರಿ 2027) ಈ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ ಎಂದು 'ರಾಯಿಟರ್ಸ್​' ಸುದ್ದಿ ಸಂಸ್ಥೆ ವರದಿ ಮಾಡಿದೆ.
ಟಾಟಾ ಗ್ರೂಪ್‌ನ ವಿವಿಧ ವ್ಯವಹಾರಗಳಲ್ಲಿ ಹಲವು ಸವಾಲುಗಳು ಎದುರಾಗಿರುವ ಸಂದರ್ಭದಲ್ಲಿ ಹಾಗೂ ಚಂದ್ರಶೇಖರನ್​ ಅವರ ಮರುನೇಮಕಾತಿ ವಿಚಾರವಾಗಿ ಟಾಟಾ ಸನ್ಸ್ ಮತ್ತು ಟಾಟಾ ಟ್ರಸ್ಟ್ಸ್ ನಡುವೆ ಉಂಟಾಗಿರುವ ಭಿನ್ನಾಭಿಪ್ರಾಯಗಳ ನಡುವೆಯೇ ಈ ಬೆಳವಣಿಗೆ ಸಂಭವಿಸಿದೆ. ಆಗಸ್ಟ್ 18 ರಂದು ನಿಗದಿಯಾಗಿರುವ ಕಂಪನಿಯ ವಾರ್ಷಿಕ ಮಹಾಸಭೆಯ (AGM) ಮುಂಚಿತವಾಗಿ ಎನ್. ಚಂದ್ರಶೇಖರನ್ ಅವರು ಟಾಟಾ ಸನ್ಸ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದಾರೆ.
400 ಶತಕೋಟಿ ಡಾಲರ್‌ ಮೌಲ್ಯದ ಟಾಟಾ ಗ್ರೂಪ್‌ನ ಪ್ರಮುಖ ಹೋಲ್ಡಿಂಗ್ ಕಂಪನಿಯಾಗಿರುವ ಟಾಟಾ ಸನ್ಸ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಟಾಟಾ ಮೋಟಾರ್ಸ್ ಮತ್ತು ಏರ್ ಇಂಡಿಯಾ ಸೇರಿದಂತೆ 30ಕ್ಕೂ ಹೆಚ್ಚು ಕಂಪನಿಗಳನ್ನು ನಿಯಂತ್ರಿಸುತ್ತದೆ. ಹಾಗೆಯೇ, ಈ ಸಮೂಹದ ದತ್ತಿ ವಿಭಾಗವಾದ 'ಟಾಟಾ ಟ್ರಸ್ಟ್ಸ್' ಟಾಟಾ ಸನ್ಸ್‌ನಲ್ಲಿ ಶೇ. 66ರಷ್ಟು ಮಾಲೀಕತ್ವವನ್ನು ಹೊಂದಿದೆ.
ಅಂದಹಾಗೆ, ಟಾಟಾ ಸನ್ಸ್ ಅಧ್ಯಕ್ಷರಾಗಿ ಚಂದ್ರಶೇಖರನ್ ಅವರ ಪ್ರಸ್ತುತ ಅಧಿಕಾರಾವಧಿಯು ಫೆಬ್ರವರಿಯಲ್ಲಿ ಮುಕ್ತಾಯಗೊಳ್ಳಲಿದೆ. ಈ ವಿಷಯದ ಸೂಕ್ಷ್ಮತೆಯ ಕಾರಣದಿಂದ ಹೆಸರನ್ನು ಬಹಿರಂಗಪಡಿಸಲು ಬಯಸದ ಮೂಲವೊಂದು, ಚಂದ್ರಶೇಖರನ್​ ಅವರು ರಾಜೀನಾಮೆ ನೀಡಿದ್ದು ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸಲಿದ್ದಾರೆ ಎಂದು ತಿಳಿಸಿದೆ.
ರಾಯಿಟರ್ಸ್​ನ ಈ ಹಿಂದಿನ ವರದಿಯ ಪ್ರಕಾರ, ಫೆಬ್ರವರಿಯಲ್ಲಿ ಟಾಟಾ ಟ್ರಸ್ಟ್‌ನ ಅಧ್ಯಕ್ಷರಾದ ನೊಯೆಲ್ ಟಾಟಾ ಅವರು ಚಂದ್ರಶೇಖರನ್ ಅವರ ಅಧಿಕಾರಾವಧಿ ವಿಸ್ತರಣೆಯನ್ನು ವಿರೋಧಿಸಿದ ಹಿನ್ನೆಲೆಯಲ್ಲಿ, ಟಾಟಾ ಸನ್ಸ್ ಆ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದನ್ನು ಮುಂದೂಡಿತ್ತು. ಮೂಲಗಳ ಪ್ರಕಾರ, ಟಾಟಾ ಸನ್ಸ್ ಅನ್ನು ಎಂದಿಗೂ ಷೇರು ಮಾರುಕಟ್ಟೆಯಲ್ಲಿ ಪಟ್ಟಿ ಮಾಡುವುದಿಲ್ಲ ಎಂಬ ಭರವಸೆ ಸೇರಿದಂತೆ ನೊಯೆಲ್ ಟಾಟಾ ಕೆಲವು ಕರಾರುಗಳನ್ನು ಬೇಡಿಕೆಯಾಗಿ ಮುಂದಿಟ್ಟಿದ್ದರು. ಆದರೆ, ಚಂದ್ರಶೇಖರನ್ ಅವರು ಇಂತಹ ಯಾವುದೇ ಭರವಸೆ ನೀಡಲು ಒಪ್ಪಿರಲಿಲ್ಲ. ಇದರ ಜೊತೆಗೆ, ಮಂಡಳಿಯ ಪ್ರತಿನಿಧಿತ್ವದ ವಿಚಾರದಲ್ಲೂ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳು ಮೂಡಿದ್ದವು.
ರಾಯಿಟರ್ಸ್​ ವರದಿಯ ಪ್ರಕಾರ ಟಾಟಾ ಸನ್ಸ್ ಅಧ್ಯಕ್ಷ ಎನ್. ಚಂದ್ರಶೇಖರನ್ ರಾಜೀನಾಮೆ ನೀಡಿದ್ದಾರೆ ಎಂಬ ಸುದ್ದಿ ಪ್ರಕಟವಾದ ಬೆನ್ನಲ್ಲೇ, ಟಾಟಾ ಗ್ರೂಪ್‌ನ ಷೇರುಗಳು ಶೇ. 4ರವರೆಗೆ ಕುಸಿದಿದೆ. ಭಾರತದ ಅತಿ ದೊಡ್ಡ ಐಟಿ ಸೇವಾ ರಫ್ತುದಾರ ಸಂಸ್ಥೆಯಾದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಶೇ. 4.1ರಷ್ಟು ಕುಸಿತ ಕಂಡು ಅಗ್ರಸ್ಥಾನದಲ್ಲಿದ್ದರೆ, ಜಾಗ್ವಾರ್​ ಲ್ಯಾಂಡ್ ರೋವರ್ ಒಡೆತನದ ಟಾಟಾ ಮೋಟಾರ್ಸ್ ಶೇ. 2.8ರಷ್ಟು ಇಳಿಕೆ ಕಂಡಿತು.
ಈ ನಡುವೆ ಬುಧವಾರ ನೀಡಿದ ಅಧಿಕೃತ ಹೇಳಿಕೆಯಲ್ಲಿ, ತಾನು ಟಾಟಾ ಸನ್ಸ್ ಮಂಡಳಿಗೆ ತನ್ನ ನಿರ್ಧಾರವನ್ನು ತಿಳಿಸಿರುವುದಾಗಿ ಮತ್ತು ಸುಗಮ ಅಧಿಕಾರ ಹಸ್ತಾಂತರವನ್ನು ಖಚಿತಪಡಿಸಲು ಶೀಘ್ರದಲ್ಲೇ ಉತ್ತರಾಧಿಕಾರ ಪ್ರಕ್ರಿಯೆಯನ್ನು ಪ್ರಾರಂಭಿಸುವಂತೆ ಕೋರಿರುವುದಾಗಿ ಚಂದ್ರಶೇಖರನ್ ತಿಳಿಸಿದ್ದಾರೆ. "ನಾನು ಟಾಟಾ ಗ್ರೂಪ್‌ನಲ್ಲಿ 40 ವರ್ಷಗಳ ವೃತ್ತಿಜೀವನವನ್ನು ಪೂರ್ಣಗೊಳಿಸಿದ್ದೇನೆ. ಈ ಪ್ರತಿಷ್ಠಿತ ಸಂಸ್ಥೆಗೆ ಕೊಡುಗೆ ನೀಡಲು ಸಿಕ್ಕ ಅತ್ಯಂತ ತೃಪ್ತಿಕರ ಅವಕಾಶಕ್ಕಾಗಿ ನಾನು ಕೃತಜ್ಞನಾಗಿದ್ದೇನೆ. ಕಳೆದ ದಶಕದಲ್ಲಿ ಟಾಟಾ ಸನ್ಸ್ ಅನ್ನು ಮುನ್ನಡೆಸಿರುವುದು ನನಗೆ ದೊಡ್ಡ ಗೌರವ ಮತ್ತು ಅಪಾರ ಜವಾಬ್ದಾರಿಯಾಗಿದೆ ಎಂದು ಹೇಳಿದ್ದಾರೆ, (ಏಜೆನ್ಸೀಸ್​).

Related Stories

Boiled Sambar
35 ರಲ್ಲಿ 31 ಕೌನ್ಸಿಲರ್‌ಗಳು ಪಕ್ಷೇತರ, ಕೋರ್ಟ್ ಮೊರೆ, ರಾತ್ರಿ 10 ಗಂಟೆಯವರೆಗೂ ಮತದಾನ!...ಥ್ರಿಲ್ಲರ್ ಸಿನಿಮಾವನ್ನೇ ಮೀರಿಸುವಂತಿದೆ ರಾಜಸ್ಥಾನದ ಚುನಾವಣೆ | Tijara Election
Delhi riots case: Sharjeel Imam granted interim bail to attend a wedding ceremony.
Waris Pathan
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net