20 ವರ್ಷದ ಬಳಿಕ ಕೋಲ್ಕತ್ತಾಕ್ಕೆ ಲೇಖಕಿ ತಸ್ಲೀಮಾ ನಸ್ರೀನ್​ ವಾಪಸ್​​; ಕಾರಣ ಏನು?..Taslima Nasrin

Taslima Nasrin return to Kolkata after 20 years
Taslima Nasrin return to Kolkata after 20 years
Published on

ಪ್ರಮುಖ ಮುಖ್ಯಾಂಶಗಳು

  • 20 ವರ್ಷದ ಬಳಿಕ ಕೋಲ್ಕತ್ತಾಕ್ಕೆ ಮರಳಲಿರುವ ಲೇಖಕಿ ತಸ್ಲೀಮಾ ನಸ್ರೀನ್​
  • ಲಜ್ಜಾ ಕಾದಂಬರಿಯಿಂದ ಬಾಂಗ್ಲಾದಿಂದ ಗಡೀಪಾರಾಗಿದ್ದ ಲೇಖಕಿ ತಸ್ಲೀಮಾ ನಸ್ರೀನ್​
  • ವಿವಾದಾತ್ಮಕ ಲೇಖನದಿಂದ ಕೋಲ್ಕತ್ತಾದಲ್ಲಿ ಹಿಂಸಾತ್ಮಕ ಘಟನೆ ನಡೆದಿತ್ತು ಆ ಕಾರಣದಿಂದ ಅವರು ಕೋಲ್ಕತ್ತಾ ತೊರೆದಿದ್ದರು.
ನವದೆಹಲಿ: ಕೋಲ್ಕತ್ತಾ ತೊರೆದ 20 ವರ್ಷಗಳ ಬಳಿಕ ಬಾಂಗ್ಲಾದಿಂದ ಗಡೀಪಾರಾಗಿದ್ದ ಸ್ತ್ರೀವಾದಿ, ಲೇಖಕಿ, ವೈದ್ಯೆ, ಮಾನವ ಹಕ್ಕುಗಳ ಹೋರಾಟಗಾರ್ತಿ ತಸ್ಲೀಮಾ ನಸ್ರೀನ್ ಆಗಸ್ಟ್​ 1ರಂದು ​ ವಾಪಸ್​ ಆಗಲಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ.
ಸೆಕ್ಯುಲರ್ ಮಿಷನ್, ಪಶ್ಚಿಮಂಬೊಂಗರ್ ಜೊನ್ನೊ, ಮತ್ತು ಹ್ಯೂಮನ್ ರೈಟ್ಸ್ ಬಿಯಾಂಡ್ ಫ್ರಾಂಟಿಯರ್ಸ್. ಜಂಟಿಯಾಗಿ ಆಗಸ್ಟ್​ 1ರಂದು ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದಲ್ಲಿನ ರವೀಂದ್ರ ಸದನದಲ್ಲಿ ಕಾರ್ಯಕ್ರಮವನ್ನು ಆಯೋಜಿಸಿದೆ. ಈ ಸಮಾರಂಭದಲ್ಲಿ ತಸ್ಲೀಮಾ ಅವರು ಭಾಗವಹಿಸಲಿರುವ ಬಗ್ಗೆ ಆಯೋಜಕ ಸಂಸ್ಥೆ ತಮ್ಮ ಫೇಸ್​ ಬುಕ್​ ಹಾಗೂ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.

ಯಾರೆಲ್ಲ ಭಾಗಿ?

ಮುಖ್ಯಮಂತ್ರಿ ಸುವೇಂದು ಅಧಿಕಾರಿ, ಖ್ಯಾತ ಲೇಖಕ ಶಿರಶೇಂದು ಮುಖೋಪಾಧ್ಯಾಯ ಅವರೊಂದಿಗೆ ಈ ಕಾರ್ಯಕ್ರಮದಲ್ಲಿ ತಸ್ಲೀಮಾ ನಸ್ರೀನ್​ ಭಾಗವಹಿಸುವ ನಿರೀಕ್ಷೆಯಿದೆ. ಲೇಖಕಿಯ ಕವಿತೆಗಳ ವಾಚನ ಇರಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಯಾರಿಂದ ಆಹ್ವಾನ?

ಮಾನವ ಹಕ್ಕುಗಳ ಬಗ್ಗೆ ಹಾಗೂ ದೇಶದ ಶಾಂತಿ ಕದಡುವ ಕೋಮುವಾದದ ವಿರುದ್ಧ ಅವರ ಹೋರಾಟವನ್ನು ಕಣ್ಣಾರೆ ಕಂಡ 'ಸೆಕ್ಯುಲರ್ ಮಿಷನ್' ಹಾಗೂ 'ಹ್ಯೂಮನ್ ರೈಟ್ಸ್ ಅಂಡ್ ಬಾಂಗ್ಲಾದೇಶ್ ಫ್ರೀಡಂ ಫೈಟರ್ಸ್ ಫೌಂಡೇಶನ್' ಸಂಸ್ಥೆಗಳು ಅವರಿಗೆ ಕಾರ್ಯಕ್ರಮಕ್ಕೆ ಆಹ್ವಾನ ಕೊಟ್ಟಿದೆ.

ಕೋಲ್ಕತ್ತಾದಿಂದ ದೂರವಾಗಿದ್ದು ಏಕೆ?

2007ರಲ್ಲಿ ಕೋಲ್ಕತ್ತಾದಲ್ಲಿ ಕಮ್ಯುನಿಸ್ಟ್​ ಪಕ್ಷಗಳು ಅಧಿಕಾರದಲ್ಲಿದ್ದವು ಈ ವೇಳೆ ತಸ್ಲೀಮಾ ನಸ್ರೀನ್ ಅವರ ದ್ವಿಖಂಡಿಯೋ ಪುಸ್ತಕ ಕೋಲ್ಕತ್ತಾವನ್ನು ಅಲ್ಲೋಲ ಕಲ್ಲೋಲ ಮಾಡಿತ್ತು. ಹಿಂಸಾತ್ಮಕ ಪ್ರಕರಣಗಳು ಜರುಗಿತ್ತು. ಮೂಲಭೂತವಾದಿಗಳ ತೀವ್ರ ವಿರೋಧಕ್ಕೆ ಮಣಿದು ಅಂದಿನ ಸರ್ಕಾರ ಅವರನ್ನು ಅವರನ್ನು ಹೊರಗೆ ಕಳಹಿಸಿತ್ತತು. ಹೀಗಾಗಿ, ಅಂದು ಇಷ್ಟದ ನಗರವನ್ನು ತೊರೆಯಲೇ ಬೇಕಾದ ಸಂದರ್ಭ ಎದುರಾಗಿತ್ತು. 2007ರಲ್ಲಿ ಕೋಲ್ಕತ್ತಾ ಬಿಟ್ಟ ಅವರು ನ್ಯೂಯಾರ್ಕ್​ನಲ್ಲಿ ನೆಲೆಸಿದ್ದರು. ಸುಮಾರು 20 ವರ್ಷದ ಬಳಿಕ ವಾಪಾಸ್​ ಆಗುತ್ತಿದ್ದಾರೆ.

ಆಯೋಜಕರು ಹೇಳಿದ್ದೇನು?

ಮೂಲಭೂತವಾದಿಗಳ ಹೋರಾಟಕ್ಕೆ ಹೆದರಿ ಸರ್ಕಾರ ಅವರನ್ನು ಇಲ್ಲಿಂದ ಹೊರ ಕಳುಹಿಸಿದ್ದರು. ಕಳೆದ ಸರ್ಕಾರದ ಅವಧಿಯಲ್ಲಿ ಅವರನ್ನು ವಾಪಸ್ ತರುವ ಪ್ರಯತ್ನ ನಾವು ಮಾಡಿದ್ದೆವು ಆದರೆ ಸಾಧ್ಯವಾಗಲಿಲ್ಲ. ಸದ್ಯ ಬಿಜೆಪಿ ಸರ್ಕಾರದ ಸಹಾಯದಿಂದ ಅವರನ್ನು ಕೋಲ್ಕತ್ತಾಕ್ಕೆ ವಾಪಸ್ ಕರೆಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಕಾರ್ಯಕ್ರಮದ ಆಯೋಜಕರು ಮಾಹಿತಿ ಹಂಚಿಕೊಂಡಿದ್ದಾರೆ.

ಬಾಂಗ್ಲಾದಿಂದ ಗಡೀಪಾರಾಗಿದ್ದು ಯಾಕೆ?

ಬಾಂಗ್ಲಾದಲ್ಲಿ ಮುಸ್ಲಿಂರಿಂದ ಹಿಂದೂಗಳ ಮೇಲಾಗುತ್ತಿದ್ದ ದೌರ್ಜನ್ಯದ ಬಗ್ಗೆ ಲಜ್ಜಾ ಎನ್ನುವ ಕಾದಂಬರಿ ಬರೆದಿದ್ದರು. ಇದರಿಂದ 1994ರಲ್ಲಿ ಬಾಂಗ್ಲಾದಿಂದ ಗಡೀಪಾರಾಗಿದ್ದರು. ಕೆಲ ಕಾಲ ವಿದೇಶದಲ್ಲಿ ಆಶ್ರಯ ಪಡೆದುಕೊಂಡಿದ್ದ ಅವರಯು 2004ರಿಂದ 2007ರವರೆಗೆ ಭಾರತದಲ್ಲಿ ಉಳಿದುಕೊಂಡಿದ್ದರು, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net