

ಕೋಲ್ಕತ್ತಾ/ಢಾಕಾ: ಬಾಂಗ್ಲಾದೇಶದ 13ನೇ ರಾಷ್ಟ್ರೀಯ ಸಂಸತ್ಚುನಾವಣೆಯಲ್ಲಿ ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ (BNP) ಅಭೂತಪೂರ್ವ ಜಯ ಗಳಿಸಿದ ಹಿನ್ನೆಲೆಯಲ್ಲಿ,ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರುಬಿಎನ್ಪಿ ನಾಯಕ ತಾರಿಕ್ರೆಹಮಾನ್( tariq)ಅವರಿಗೆ ವಿಶೇಷವಾಗಿ ಅಭಿನಂದನೆ ಸಲ್ಲಿಸಿದ್ದಾರೆ.
ಶನಿವಾರಮಮತಾ ಬ್ಯಾನರ್ಜಿ ಅವರು ಢಾಕಾದ ಗುಲ್ಶನ್ನಲ್ಲಿರುವ ಬಿಎನ್ಪಿ ಕಚೇರಿಗೆ ಹೂವಿನಗುಚ್ಛ ಮತ್ತು ಸಿಹಿತಿಂಡಿಗಳನ್ನು ಕಳುಹಿಸಿಕೊಡುವ ಮೂಲಕ ತಮ್ಮ ಸ್ನೇಹಹಸ್ತ ಚಾಚಿದ್ದಾರೆ. ಬಿಎನ್ಪಿ ಮಾಧ್ಯಮ ವಿಭಾಗದಸದಸ್ಯ ಅತಿರ್ಕುರ್ ರೆಹಮಾನ್ ರುಮನ್ ಅವರು ಈ ಹೂವುಮತ್ತು ಸಿಹಿಗಳನ್ನು ಸ್ವೀಕರಿಸಿದರು.
ಮಮತಾಬ್ಯಾನರ್ಜಿ ಸಂದೇಶ:
ಶುಕ್ರವಾರವೇ'X' (ಟ್ವಿಟರ್) ಮೂಲಕ ಅಭಿನಂದನೆ ಸಲ್ಲಿಸಿದ್ದಮಮತಾ ಬ್ಯಾನರ್ಜಿ, "ಬಾಂಗ್ಲಾದೇಶದ ನನ್ನೆಲ್ಲಾ ಸಹೋದರ ಸಹೋದರಿಯರಿಗೆ ಮತ್ತು ಜನತೆಗೆ ನನ್ನ ಹೃದಯಾಳದ ಅಭಿನಂದನೆಗಳು.ಈ ಅದ್ಭುತ ವಿಜಯಕ್ಕಾಗಿ ನನ್ನ 'ತಾರಿಕ್ ಭಾಯ್' ಮತ್ತು ಅವರ ಪಕ್ಷಕ್ಕೆ ಶುಭಾಶಯಗಳು.ಮುಂಬರುವ ರಂಜಾನ್ ಮಾಸದ ಶುಭಾಶಯಗಳು ಕೂಡಎಲ್ಲರಿಗೂ ಇರಲಿ. ಉಭಯ ದೇಶಗಳ ಬಾಂಧವ್ಯಮತ್ತಷ್ಟು ಗಟ್ಟಿಯಾಗಲಿ" ಎಂದು ಬರೆದುಕೊಂಡಿದ್ದಾರೆ.
ಮೋದಿಅವರಿಂದಲೂ ಅಭಿನಂದನೆ
ಭಾರತದಪ್ರಧಾನಿ ನರೇಂದ್ರ ಮೋದಿ ಅವರು ಕೂಡಫೇಸ್ಬುಕ್ ಪೋಸ್ಟ್ ಮೂಲಕತಾರಿಕ್ ರೆಹಮಾನ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಬಿಎನ್ಪಿ ಪಕ್ಷವನ್ನು ನಿರ್ಣಾಯಕಗೆಲುವಿನತ್ತ ಮುನ್ನಡೆಸಿದ ರೆಹಮಾನ್ ಅವರ ನಾಯಕತ್ವವನ್ನು ಮೋದಿಶ್ಲಾಘಿಸಿದ್ದಾರೆ.
ಚುನಾವಣಾಫಲಿತಾಂಶದ ವಿವರ:
ಗುರುವಾರನಡೆದ 13ನೇ ಜಾತಿಯ ಸಂಸತ್ಚುನಾವಣೆ ಮತ್ತು ಜನಮತಸಂಗ್ರಹದ ಫಲಿತಾಂಶಗಳು ಪ್ರಕಟವಾಗಿದ್ದು, ಬಿಎನ್ಪಿ ಮೈತ್ರಿಕೂಟ ಕ್ಲೀನ್ಸ್ವೀಪ್ ಮಾಡಿದೆ.
ಈ ವಿಜಯದೊಂದಿಗೆ ಬಾಂಗ್ಲಾದೇಶದಲ್ಲಿ ಹೊಸ ರಾಜಕೀಯ ಅಧ್ಯಾಯಆರಂಭವಾಗಿದ್ದು, ಭಾರತದೊಂದಿಗಿನ ಅದರ ಸಂಬಂಧ ಹೇಗಿರಲಿದೆಎಂಬುದು ಈಗ ಕುತೂಹಲ ಮೂಡಿಸಿದೆ,(ಏಜೆನ್ಸೀಸ್).