ಸಾಸಿವೆ ಎಣ್ಣೆಯಲ್ಲಿ ಹುರಿದ ಟ್ಯಾರಂಟುಲಾ! ಜೇಡವನ್ನೇ ಖಾದ್ಯವಾಗಿ ತಿನ್ನುತ್ತೆ ಈ ಬುಡಕಟ್ಟು ಸಮುದಾಯ | Tribe eats spiders as food

ಅಸ್ಸಾಂನ ಬುಡಕಟ್ಟು ಸಮುದಾಯದಲ್ಲಿ ಜೇಡ ತಿನ್ನುವ ಪದ್ಧತಿ
ಅಸ್ಸಾಂನ ಬುಡಕಟ್ಟು ಸಮುದಾಯದಲ್ಲಿ ಜೇಡ ತಿನ್ನುವ ಪದ್ಧತಿ
Published on

ಪ್ರಮುಖ ಮುಖ್ಯಾಂಶಗಳು

  • ಅಸ್ಸಾಂನ ರಾಭಾ ಬುಡಕಟ್ಟು ಸಮುದಾಯದ ವಿಶಿಷ್ಟ ಆಹಾರ ಪದ್ಧತಿ
  • ‘ಇಂಡಿಯನ್ ಬ್ಲ್ಯಾಕ್ ಅರ್ಥ್ ಟೈಗರ್ ಸ್ಪೈಡರ್’ಅನ್ನು ತಿನ್ನುವ ಸಂಪ್ರದಾಯ
  • ಏಪ್ರಿಲ್–ಮೇ ತಿಂಗಳಲ್ಲಿ ಹೆಚ್ಚು ಸಿಗುವ ಟ್ಯಾರಂಟುಲಾ ಜೇಡಗಳು
Spider eating: ಜೇಡ ಅಂದ್ರೆ ಸಾಕು, ಹಲವರಿಗೆ ನಡುಕ ಶುರುವಾಗುತ್ತೆ. ಆದರೆ ಅಸ್ಸಾಂನ ಈ ಬುಡಕಟ್ಟು ಸಮುದಾಯಕ್ಕೆ ಮಾತ್ರ ಜೇಡವೇ ಒಂದು ವಿಶೇಷ ಖಾದ್ಯ. ಟ್ಯಾರಂಟುಲಾ ಜೇಡವನ್ನು ಹಿಡಿದು, ಬಿಸಿ ನೀರಿನಲ್ಲಿ ನೆನೆಸಿ, ಸಾಸಿವೆ ಎಣ್ಣೆಯಲ್ಲಿ ಹುರಿದು ತಿನ್ನುವ ವಿಶಿಷ್ಟ ಆಹಾರ ಪದ್ಧತಿ ಇದೀಗ ಸಂಶೋಧಕರ ಗಮನ ಸೆಳೆದಿದೆ.
ಅಸ್ಸಾಂನ ಕಾಮರೂಪ್ (ಗ್ರಾಮೀಣ) ಜಿಲ್ಲೆಯ ರಾಭಾ ಬುಡಕಟ್ಟು ಸಮುದಾಯದಲ್ಲಿ ಈ ಪದ್ಧತಿ ಹಲವು ವರ್ಷಗಳಿಂದ ನಡೆದುಕೊಂಡು ಬರುತ್ತಿದೆ ಎನ್ನುವುದನ್ನು ಸಂಶೋಧಕರು ದಾಖಲಿಸಿದ್ದಾರೆ. ಸಂಶೋಧಕರ ಪ್ರಕಾರ, ರಾಭಾ ಸಮುದಾಯದವರು ಈ ಜೇಡವನ್ನು ‘ಭಾಲುಕ್ ಮಕರ’ ಎಂದು ಕರೆಯುತ್ತಾರೆ. ‘ಭಾಲುಕ್’ ಅಂದ್ರೆ ಕರಡಿ. ಜೇಡದ ಕಪ್ಪು, ದಟ್ಟ ಕೂದಲಿನಂತಿರುವ ದೇಹದ ಕಾರಣ ಈ ಹೆಸರು ಬಂದಿದೆ. ‘ಮಕರ’ ಅಂದ್ರೆ ಜೇಡ ಎಂಬ ಅರ್ಥ.

ಜೇಡ ಬೇಟೆಯಾಡುವ

ರಾಭಾ ಸಮುದಾಯದ

ಫರ್ಗ್ಯೂಸನ್ ಕಾಲೇಜಿನ ವನ್ಯಜೀವಿ ಜೀವಶಾಸ್ತ್ರಜ್ಞ ಹಾಗೂ ಸಂಶೋಧಕ ಜ್ಯೋತಿಪ್ರಕಾಶ್ ಬೋರೊ ಅವರ ತಂಡ ಈ ಪದ್ಧತಿಯನ್ನು ದಾಖಲಿಸಿದೆ. ಬಿಲದಿಂದ ಹೊರಗೆಳೆದು, ಸಾಸಿವೆ ಎಣ್ಣೆಯಲ್ಲಿ ಹುರಿಯುತ್ತಾರೆ. ರಾಭಾ ಸಮುದಾಯದವರು ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಈ ಜೇಡಗಳು ಹೆಚ್ಚಾಗಿ ಸಿಗುತ್ತವೆ ಎಂದು ಸಂಶೋಧಕರಿಗೆ ತಿಳಿಸಿದ್ದಾರೆ. ನೆಲದಲ್ಲಿರುವ ಬಿಲಗಳನ್ನು ಅಗೆದು ಅಥವಾ ಮರದ ಕಡ್ಡಿಗಳನ್ನು ಒಳಗೆ ಹಾಕಿ ಜೇಡಗಳನ್ನು ಹೊರಗೆಳೆದುಕೊಳ್ಳುತ್ತಾರೆ.

ಜೇಡಗಳನ್ನು ಫ್ರೈ ಮಾಡಿ ತಿನ್ನುತ್ತಾರೆ

ಒಂದು ಬಾರಿ ಜೇಡ ಹಿಡಿಯುವ ಹೋದರೆ 30ರವರೆಗೂ ಜೇಡಗಳು ಸಿಗಬಹುದು ಎನ್ನಲಾಗಿದೆ. ಹಿಡಿದ ಜೇಡಗಳನ್ನು ಮೊದಲು ನೀರಿನಲ್ಲಿ ತೊಳೆದು, ನಂತರ ಹಲವು ಬಾರಿ ಬಿಸಿ ನೀರಿನಲ್ಲಿ ಕೆಲವು ನಿಮಿಷ ನೆನೆಸಲಾಗುತ್ತದೆ. ಬಳಿಕ 7ರಿಂದ 10 ನಿಮಿಷ ಸಾಸಿವೆ ಎಣ್ಣೆಯಲ್ಲಿ ಹುರಿಯತ್ತಾರೆ. ಜೇಡ ಕಂದು ಬಣ್ಣಕ್ಕೆ ತಿರುಗಿದ ಬಳಿಕ ಬೆಳ್ಳುಳ್ಳಿ ಪುಡಿ ಮತ್ತು ಉಪ್ಪು ಸೇರಿಸುತ್ತಾರೆ. ಸಾಮಾನ್ಯವಾಗಿ ಕಾಲುಗಳನ್ನು ಮಾತ್ರ ತೆಗೆದುಹಾಕಿ, ಉಳಿದ ಭಾಗವನ್ನು ಹಾಗೆಯೇ ತಿನ್ನುತ್ತಾರೆ.

ಜೇಡಕ್ಕೂ ಇದೆ ‘ಮೀಟ್’ ಪರ್ಯಾಯದ ಸ್ಥಾನ

ಈಶಾನ್ಯ ಭಾರತದ ಕೆಲವು ಭಾಗಗಳಲ್ಲಿ ಜೇಡಗಳನ್ನು ಆಹಾರವಾಗಿ ತಿನ್ನುವ ಸಂಪ್ರದಾಯ ಹಿಂದಿನಿಂದಲೂ ಇದೆ ಎನ್ನಲಾಗಿದೆ. ಆದರೆ ಇವುಗಳ ಬಗ್ಗೆ ವೈಜ್ಞಾನಿಕ ದಾಖಲೆಗಳು ಇನ್ನೂ ಕಡಿಮೆ. ನಾಗಾಲ್ಯಾಂಡ್‌ನ ಕೆಲವು ಬುಡಕಟ್ಟು ಸಮುದಾಯಗಳಲ್ಲೂ ಎರಡು ಬಗೆಯ ಆರ್ಬ್-ವೀವರ್ ಜೇಡಗಳನ್ನು ಆಹಾರವಾಗಿ ಸೇವಿಸುವ ಪದ್ಧತಿಯನ್ನು ಈ ಹಿಂದೆ ಸಂಶೋಧಕರು ದಾಖಲಿಸಿದ್ದರು. ಅಲ್ಲಿ ಅವುಗಳನ್ನು ಸ್ಥಳೀಯವಾಗಿ ‘ಸಿಯಾಂಕ್ಯೂ’ ಎಂದು ಕರೆಯಲಾಗುತ್ತೆ.
ಸ್ಥಳೀಯರು ಜೇಡಗಳ ಸಂಖ್ಯೆ ಸ್ಥಿರವಾಗಿದೆ ಎನ್ನುತ್ತಾರೆ. ಆದರೆ, ಜೇಡಗಳ ನಿಖರ ಸಂಖ್ಯೆ ಮತ್ತು ಜನಸಂಖ್ಯೆಯ ಮಾಹಿತಿಯನ್ನು ಸಂಶೋಧಕರು ಇನ್ನೂ ಪರಿಶೀಲಿಸಿಲ್ಲ. ಹೀಗಾಗಿ ಈ ವಿಶಿಷ್ಟ ಆಹಾರ ಪದ್ಧತಿಯ ಬಗ್ಗೆ ಇನ್ನಷ್ಟು ಅಧ್ಯಯನ ಅಗತ್ಯವಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net