ಧಾರ್ಮಿಕ ನಂಬಿಕೆ ಓಕೆ! ನದಿಗೆ 11 ಸಾವಿರ ಲೀ. ಹಾಲು ಚೆಲ್ಲೋದು ಯಾಕೆ? ನೆಟ್ಟಿಗರಿಂದ ಭಾರೀ ಆಕ್ರೋಶ

11 ಸಾವಿರ ಲೀ. ಹಾಲನ್ನು ನದಿಗೆ ಚೆಲ್ಲಿದ ಬಾಬಾ
11 ಸಾವಿರ ಲೀ. ಹಾಲನ್ನು ನದಿಗೆ ಚೆಲ್ಲಿದ ಬಾಬಾ
Published on

ಪ್ರಮುಖ ಮುಖ್ಯಾಂಶಗಳು

  • 11 ಸಾವಿರ ಲೀ. ಹಾಲು ನರ್ಮದಾ ನದಿಗೆ
  • ಇಂತಹ ಬಾಬಾಗಳು ನಮ್ಮ ಪರಿಸರಕ್ಕೆ ಮಾರಕ ಎಂದ ನೆಟ್ಟಿಗರು
ಮಧ್ಯಪ್ರದೇಶ: ಧಾರ್ಮಿಕ ನಂಬಿಕೆಯ ಹೆಸರಿನಲ್ಲಿ ನಡೆಸಿದ ಪೂಜೆ, ಪುನಃಸ್ಕಾರಕ್ಕೆ ಹಲವರಿಗೆ ಖುಷಿಯಿದೆ. ಆದರೆ, ಅದೇ ದೇವರ ಹೆಸರಲ್ಲಿ ನದಿಗೆ ಬರೋಬ್ಬರಿ 11 ಸಾವಿರಕ್ಕೂ ಅಧಿಕ ಲೀಟರ್​ಗಟ್ಟಲೇ ಹಾಲು ಚೆಲ್ಲುವುದು ಎಷ್ಟು ಎಂಬ ಪ್ರಶ್ನೆ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶಕ್ಕೆ ಗುರಿಯಾಗಿದೆ. 
ಮಧ್ಯಪ್ರದೇಶದಲ್ಲಿ ಹರಿಯುವ ನರ್ಮದಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ಹಾಲನ್ನು ಧಾರ್ಮಿಕ ಭಾವನೆಯ ನೆಪದಲ್ಲಿ ಸುರಿಯುತ್ತಿರುವ ವಿಡಿಯೋವೊಂದು ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದನ್ನು ನೋಡಿದ ಅನೇಕ ಪರಿಸರವಾದಿಗಳು, ಇಂತಹ ಆಚರಣೆಯ ವಿರುದ್ಧ ಸಿಡಿದೆದ್ದಿದ್ದಾರೆ. ಧಾರ್ಮಿಕ ಅಭಿವ್ಯಕ್ತಿ, ಪರಿಸರದ ಮೇಲಿನ ಪರಿಣಾಮ ಮತ್ತು ಸಂಪನ್ಮೂಲ ಬಳಕೆಯ ಕುರಿತು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
“ಇದೇನಿದು? ಧರ್ಮದ ಹೆಸರಿನಲ್ಲಿ ಅಪಹಾಸ್ಯವೇ? ಎಂದು ಒಬ್ಬರು ಕರೆದರೆ, ಶಾಲೆಗಳಲ್ಲಿ ಬಡ ಮಕ್ಕಳಿಗಾದರೂ ನೀಡಿದಿದ್ದರೆ, ಎಷ್ಟು ಉಪಯೋಗ ಆಗುತ್ತಿತ್ತು” ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು, “ಧರ್ಮದ ಹೆಸರಿನಲ್ಲಿ ಮೂರ್ಖತನ” ಎಂದು ಬಣ್ಣಿಸಿದ್ದಾರೆ. ಒಟ್ಟಾರೆ, ಹಲವರು ಧಾರ್ಮಿಕ ಭಾವನೆಯ ನೆಪದಲ್ಲಿ ನದಿಗೆ ಹಾಲನ್ನು ಚೆಲ್ಲೋದು ಸರಿಯಲ್ಲ ಎಂದು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).  
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net