ಈ ವಿಷಯ ಹೇಳಿದ್ದೇ ತಪ್ಪಾಯ್ತು! ಚಿನ್ನಾಭರಣ, ಲಕ್ಷ ಲಕ್ಷ ಹಣ ತೋರಿಸಿದ ರೀಲ್ಸ್​ ರಾಣಿಗೆ 1 ಕೋಟಿ ರೂ. ನಷ್ಟ | YouTuber

ತಮ್ಮ ಬಹುತೇಕ ವಿಡಿಯೋಗಳಲ್ಲಿ ಕೋಟಿ ರೂ. ಬೆಲೆ ಬಾಳುವ ದುಬಾರಿ ಚಿನ್ನಾಭರಣ ಮತ್ತು ನಗದನ್ನು ಮುಂದಿಟ್ಟು ರೀಲ್ಸ್ ಮಾಡುತ್ತಿದ್ದರು. ತಾನು ಸಿರಿವಂತೆ ಎಂದು ತೋರಿಸಿದ್ದಕ್ಕಿಂತ ಆಕೆ ನೀಡಿದ ಮಾಹಿತಿಗಳೇ ಇಂದು ಮನೆಯಲ್ಲಿನ ಒಡೆವಗಳ ಲೂಟಿಗೆ ಮುಖ್ಯ ಕಾರಣವಾಗಿದೆ.
YouTuber
ಈ ವಿಷಯ ಹೇಳಿದ್ದೇ ತಪ್ಪಾಯ್ತು! ಚಿನ್ನಾಭರಣ, ಲಕ್ಷ ಲಕ್ಷ ಹಣ ತೋರಿಸಿದ ರೀಲ್ಸ್​ ರಾಣಿಗೆ 1 ಕೋಟಿ ರೂ. ನಷ್ಟ
Published on: 

YouTuber: ತಮಿಳುನಾಡು ಮೂಲದ ರೀಲ್ಸ್​, ಯೂಟ್ಯೂಬರ್ ಆದ ಮಧುಮಿತಾ ಅವರ ಮನೆಯಲ್ಲಿ 1 ಕೋಟಿ ರೂ. ಕಳ್ಳತನವಾಗಿದ್ದು, ಖದೀಮರ ಕೈಚಳಕದಿಂದ ಅಕ್ಷರಶಃ ಕಂಗಾಲಾಗಿರುವ ರೀಲ್ಸ್ ರಾಣಿ ಇದೀಗ ಪೊಲೀಸ್​ ಠಾಣೆಯಲ್ಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಪತಿ ವಿನೋದ್‌ಕುಮಾರ್ ಮತ್ತು ಮಗುವಿನೊಂದಿಗೆ ಕನ್ಯಾಕುಮಾರಿ ಜಿಲ್ಲೆಯ ಧಮ್ಮತು ಕೋಣಂ ಪ್ರದೇಶದ ವಿಐಪಿ ಗಾರ್ಡನ್‌ನಲ್ಲಿ ವಾಸವಿರುವ ಮಧುಮಿತಾ, ತಮ್ಮ ಬಹುತೇಕ ವಿಡಿಯೋಗಳಲ್ಲಿ ಕೋಟಿ ರೂ. ಬೆಲೆ ಬಾಳುವ ದುಬಾರಿ ಚಿನ್ನಾಭರಣ ಮತ್ತು ನಗದನ್ನು ಮುಂದಿಟ್ಟು ರೀಲ್ಸ್ ಮಾಡುತ್ತಿದ್ದರು. ತಾನು ಸಿರಿವಂತೆ ಎಂದು ತೋರಿಸಿದ್ದಕ್ಕಿಂತ ಆಕೆ ನೀಡಿದ ಮಾಹಿತಿಗಳೇ ಇಂದು ಮನೆಯಲ್ಲಿನ ಒಡೆವಗಳ ಲೂಟಿಗೆ ಮುಖ್ಯ ಕಾರಣವಾಗಿದೆ.

ಚಿನ್ನದ ಆಭರಣ, ಕ್ಯಾಶ್​ ಅನ್ನು ಮುಂದಿಟ್ಟು ರೀಲ್ಸ್ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದ ಮಹಿಳೆ, ಇದರಲ್ಲಿ ತಾನು ಯಾವ ಜಾಗದಲ್ಲಿದ್ದೇನೆ ಮತ್ತು ಸಮಯ ಎಷ್ಟಾಗಿದೆ ಎಂಬುದನ್ನೂ ತೋರಿಸಿದ್ದೇ 118 ಪೌಂಡ್ ಚಿನ್ನ, ವಜ್ರಗಳು ಮತ್ತು 1 ಕೋಟಿ ರೂ. ಮೌಲ್ಯದ ನಗದು ದರೋಡೆ ಆಗಿರುವುದಕ್ಕೆ ದೊಡ್ಡ ಕಾರಣ ಎನ್ನಲಾಗಿದೆ.

Also Read
ನಮ್ಮ ಸಿನಿಮಾ ಸಂಭ್ರಮಿಸಿ, ಇಲ್ಲ... 'ದಿ ಪ್ಯಾರಡೈಸ್'​ಗೆ ನೆಗೆಟಿವ್​ ರಿವ್ಯೂ ಬೆನ್ನಲ್ಲೇ ನಟ ನಾನಿ ಓಪನ್​ ಟಾಕ್​ | Actor Nani
YouTuber

ಕಳ್ಳರ ಲೂಟಿ ಬೆನ್ನಲ್ಲೇ ರಾಜಕ್ಕಮಂಗಲಂ ಪೊಲೀಸ್ ಠಾಣೆಯಲ್ಲಿ ಮಧುಮಿತಾ ದೂರು ದಾಖಲಿಸಿದ್ದು, ಪ್ರಕರಣ ಕೈಗೆತ್ತಿಕೊಂಡಿರುವ ಪೊಲೀಸರು ವಿಶೇಷ ತಂಡವನ್ನು ರಚಿಸಿ ತನಿಖೆಯನ್ನು ಚುರುಕುಗೊಳಿಸಿದ್ದಾರೆ. ದರೋಡೆಯಾದ ಮನೆಯಲ್ಲಿ ಪತ್ತೆಯಾದ ಬೆರಳಚ್ಚುಗಳನ್ನು ಸಂಗ್ರಹಿಸಲು ವಿಧಿವಿಜ್ಞಾನ ತಂಡ ಮತ್ತು ಬೆರಳಚ್ಚು ತಜ್ಞರನ್ನು ಕರೆಸಲಾಗಿದೆ. ಇದರೊಟ್ಟಿಗೆ ಮನೆಯ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುವ ಮೂಲಕ ತನಿಖೆಯನ್ನು ತೀವ್ರಗೊಳಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net