ಈ ಬೆಳವಣಿಗೆಯೊಂದಿಗೆ ವಿಜಯ್ ಮತ್ತು ರಾಹುಲ್ ಗಾಂಧಿ ಜಂಟಿಯಾಗಿ ತಮಿಳುನಾಡಿನ ಜನರ, ವಿಶೇಷವಾಗಿ ಯುವಜನತೆಯ ಆಶೋತ್ತರಗಳನ್ನು ಈಡೇರಿಸುವ ಭರವಸೆ ನೀಡಿದ್ದಾರೆ. ಈ ಪಾಲುದಾರಿಕೆಯು ಕೇವಲ ಸದ್ಯದ ಸರ್ಕಾರ ರಚನೆಗೆ ಮಾತ್ರ ಸೀಮಿತವಾಗದೆ, ಮುಂದಿನ ಲೋಕಸಭೆ, ರಾಜ್ಯಸಭೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲೂ ಮುಂದುವರಿಯುವ ಭರವಸೆಯನ್ನು ಉಭಯ ಪಕ್ಷಗಳು ವ್ಯಕ್ತಪಡಿಸಿವೆ ಎಂದು ಚೋಡಂಕರ್ ತಿಳಿಸಿದ್ದಾರೆ. ಈ ಹೊಸ ರಾಜಕೀಯ ಸಮೀಕರಣವು ತಮಿಳುನಾಡಿನ ಸಾಂಪ್ರದಾಯಿಕ ದ್ರಾವಿಡ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದ್ದು, ಸರ್ಕಾರ ರಚನೆಯಲ್ಲಿ ದಳಪತಿ ವಿಜಯ್ ಅವರ ಹಾದಿ ಈಗ ಸುಗಮವಾದಂತಾಗಿದೆ.