ಸದ್ಯ ಚುನಾವಣೆ ಎದುರಿಸುತ್ತಿರುವ 26 ಸ್ಥಾನಗಳ ಪೈಕಿ ಎನ್‌ಡಿಎ (NDA) 18, ಕಾಂಗ್ರೆಸ್ 4, ವೈಎಸ್‌ಆರ್ ಕಾಂಗ್ರೆಸ್ 3 ಮತ್ತು ಜಾರ್ಖಂಡ್ ಮುಕ್ತಿ ಮೋರ್ಚಾ (JMM) ಒಂದು ಸ್ಥಾನವನ್ನು ಹೊಂದಿವೆ. ಆದರೆ, ಚುನಾವಣೆಯ ನಂತರದ ರಾಜಕೀಯ ಲೆಕ್ಕಾಚಾರಗಳ ಪ್ರಕಾರ ಎನ್‌ಡಿಎ ಬಲ 17ಕ್ಕೆ ಕುಸಿಯುವ ಸಾಧ್ಯತೆಯಿದ್ದು, ಕಾಂಗ್ರೆಸ್ ಸಂಖ್ಯೆ 4 ರಿಂದ 5 ಕ್ಕೆ ಏರಲಿದೆ. ಹಾಗೆಯೇ ಜಾರ್ಖಂಡ್ ಮುಕ್ತಿ ಮೋರ್ಚಾ ಎರಡು ಸ್ಥಾನಗಳನ್ನು ಗೆಲ್ಲುವ ಮುನ್ಸೂಚನೆ ಇದೆ. ಇನ್ನುಳಿದಂತೆ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರ ಟಿವಿಕೆ (TVK) ಪಕ್ಷ ಮತ್ತು ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಬಣ ತಲಾ ಒಂದು ಸ್ಥಾನವನ್ನು ಗೆಲ್ಲುವ ನಿರೀಕ್ಷೆಯಿದ್ದು, ಉಪಚುನಾವಣೆ ನಡೆಯಲಿರುವ ಈ ಎರಡು ಸ್ಥಾನಗಳ ಅವಧಿ ಕೇವಲ ಎರಡು ವರ್ಷಗಳಿಗೆ ಸೀಮಿತವಾಗಿರಲಿದೆ.