ತಮಿಳುನಾಡು ಚುನಾವಣೆ; ಮಹಿಳಾ ಮತದಾರರನ್ನು ಗುರಿಯಾಗಿಸಿ ದಳಪತಿ ವಿಜಯ್ ಭರ್ಜರಿ ಭರವಸೆ: 8ಗ್ರಾಂ ಚಿನ್ನ, 2,500 ರೂ ಭತ್ಯೆ | Thalapathy Vijay

ದಳಪತಿ ವಿಜಯ್
ದಳಪತಿ ವಿಜಯ್
Published on
ಚೆನ್ನೈ: ತಮಿಳುನಾಡಿನಲ್ಲಿ ಹೊಸ ಪಕ್ಷ ಟಿವಿಕೆ ಕಟ್ಟಿ ರಾಜಕೀಯಕ್ಕೆ ಧುಮುಕಿರುವ ಸೂಪರ್ ಸ್ಟಾರ್ ದಳಪತಿ ವಿಜಯ್, ಇಂದು(ಮಾ. 07) ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ, 2026ರ ವಿಧಾನಸಭೆ ಚುನಾವಣೆಗೂ ಮುನ್ನ ಮಹಿಳಾ ಮತದಾರರನ್ನು ಗುರಿಯಾಗಿಸಿ 12 ಭರ್ಜರಿ ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದಾರೆ.
ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿರುವ ವಿಜಯ್, ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಂ ಸರ್ಕಾರವು ಈಗಾಗಲೇ ಜಾರಿಗೆ ತಂದಿರುವ ಕಲ್ಯಾಣ ಯೋಜನೆಗಳಂತೆ ಹೆಚ್ಚಿನದಾಗಿ ಮಹಿಳೆಯರಿಗೆ ಮಾಸಿಕ ಆರ್ಥಿಕ ಸಹಾಯ, ಚಿನ್ನದೊಂದಿಗೆ ವಿವಾಹ ಹಾಗೂ ಉಚಿತ ಬಸ್ ಪ್ರಯಾಣ ಸೇರಿ ಹಲವು ಭರವಸೆ ನೀಡಿದ್ದಾರೆ.
ತಮಿಳಿಗ ವೆಟ್ರಿ ಕಳಗಂ ಪಕ್ಷ ಅಧಿಕಾರಕ್ಕೆ ಬಂದ್ರೆ, ರಾಜ್ಯ ಮತ್ತು ಕೇಂದ್ರ ಸರ್ಕಾರಿ ನೌಕರರ ಕುಟುಂಬಗಳನ್ನು ಹೊರತುಪಡಿಸಿ ಕುಟುಂಬದ ಮಹಿಳಾ ಮುಖ್ಯಸ್ಥರಿಗೆ ತಿಂಗಳಿಗೆ 2,500 ರೂ.ಗಳನ್ನು ಮಾಸಿಕ ಆರ್ಥಿಕ ಸಹಾಯ, ಅನ್ನಪೂರ್ಣಿ ಸೂಪರ್-6 ಅಡಿಯಲ್ಲಿ ವರ್ಷಕ್ಕೆ 6 ಉಚಿತ ಎಲ್​ಪಿಜಿ ಸಿಲಿಂಡರ್ ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ಮುಂದುವರೆದು, ಯುವತಿಯರಿಗಾಗಿ ಅನ್ನನ್ ಸೀರೆ ಯೋಜನೆ ಅಡಿಯಲ್ಲಿ ಮದುವೆ ಸಮಯದಲ್ಲಿ 8 ಗ್ರಾಂ ಚಿನ್ನ ಮತ್ತು ಗುಣಮಟ್ಟದ ರೇಷ್ಮೆ ಸೀರೆ, ಮಾಜಿ ಸಿಎಂ ಕೆ.ಕಾಮರಾಜ್  ಹೆಸರಿನಲ್ಲಿ ಕಾಮರಾಜರ್ ಶಿಕ್ಷಣ ಯೋಜನೆ ಸ್ಥಾಪಿಸಿ ಬಡಮಕ್ಕಳ ಶಿಕ್ಷಣಕ್ಕಾಗಿ ಅವರ ತಾಯಂದಿರಿಗೆ ವಾರ್ಷಿಕ 15,000 ಸಹಾಯಧನದ ಭರವಸೆ ನೀಡಿದ್ದಾರೆ.
ಈಗಾಗಲೇ ಡಿಎಂಕೆ ಜಾರಿಗೆ ತಂದಿರುವ ಉದ್ಯೋಗಸ್ಥ ಮತ್ತು ಕೆಲವೇ ಮಾರ್ಗಕ್ಕೆ ಅನ್ವಯವಾಗುವ ಉಚಿತ ಬಸ್ ಪ್ರಯಾಣವನ್ನು ರಾಜ್ಯದ ಎಲ್ಲಾ ಸರ್ಕಾರಿ ಬಸ್​ಗಳಲ್ಲಿ ಎಲ್ಲಾ ಮಹಿಳೆರಿಗೆ ಉಚಿತ ಪ್ರಯಾಣದ ವಿಸ್ತರಣೆಯ ಭರವಸೆ. ಮಹಿಳಾ ಸುರಕ್ಷತೆಗೆ ರಾಣಿ ವೇಲು ನಾಚಿಯಾರ್ ಹೆಸರಿನಲ್ಲಿ ರಾಣಿ ವೇಲುನಾಚಿಯಾರ್ ಪಡೆ ರಚಿಸುವ ಜೊತೆಗೆ ಮಹಿಳೆಯರ ಮೇಲಿನ ಅಪರಾಧಗಳಿಗೆ ತ್ವರಿತಗತಿಯಲ್ಲಿ ಶಿಕ್ಷೆ ವಿಧಿಸಲು ವಿಶೇಷ ಕೊರ್ಟ್​ಗಳನ್ನು ಸ್ಥಾಪಿಸುವ ಆಶ್ವಾಸನೆ ನೀಡಿದ್ದಾರೆ. 
ಇನ್ನೂ ಗರ್ಭಣಿಯರನ್ನು ಗುರಿಯಾಗಿಸಿ, ನವಜಾತ ಶಿಶುಗಳಿಗೆ ಉಚಿತ ಚಿನ್ನದ ಉಂಗುರ ಮತ್ತು ಪ್ರೋಟೀನ್ ಪುಡಿ, ಬೇಬಿ ಸೋಪ್, ಬೇಬಿ ಎಣ್ಣೆ, ಸೊಳ್ಳೆ ಪರದೆಗಳು ಹಾಗೂ ಡೈಪರ್‌ಗಳನ್ನು ಒಳಗೊಂಡಿರುವ ಬೇಬಿ ವೆಲ್ಕಮ್ ಕಿಟ್ ನೀಡಲಾಗುವುದು ಎಂದು ತಿಳಿಸಿದ್ದಾರೆ (ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net