ಈ ಕುರಿತಾಗಿ ಅಧಿಕೃತವಾಗಿ ಇನ್ನೂ ಮಾಹಿತಿ ಹೊರಬೀಳದಿದ್ದರೂ ಕಾಲಿವುಡ್ ತೆರೆಮರೆಯಲ್ಲಿ ದೊಡ್ಡ ಈವೆಂಟ್ ಹಮ್ಮಿಕೊಳ್ಳಲು ತಯಾರಿ ನಡೆಸುತ್ತಿರುವುದು ಬಹುತೇಕ ನಿಜ ಎಂದೇ ಹೇಳಲಾಗಿದೆ. ವರದಿಗಳ ಪ್ರಕಾರ, ಒಬ್ಬ ಸ್ಟಾರ್ ನಟನಾಗಿ ಚಿತ್ರರಂಗವನ್ನು ಆಳಿದ ದಳಪತಿ, ಇಂದು ತಮಿಳುನಾಡಿನ ಮುಖ್ಯಮಂತ್ರಿ ಪಟ್ಟದಲ್ಲಿರುವುದು ಚಿತ್ರರಂಗಕ್ಕೆ ಹೆಮ್ಮೆ ತಂದಿದೆ. ಹೀಗಾಗಿ, ನಟ-ನಟಿಯರು, ನಿರ್ದೇಶಕರು, ನಿರ್ಮಾಪಕರು ಮತ್ತು ತಂತ್ರಜ್ಞರ ಉನ್ನತ ನಿಯೋಗವು ಶೀಘ್ರದಲ್ಲೇ ಸಿಎಂ ವಿಜಯ್ರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ, ದೊಡ್ಡ ವೇದಿಕೆಯಲ್ಲಿ ಸನ್ಮಾನಿಸಲು ಸಜ್ಜಾಗಿದೆ ಎನ್ನಲಾಗಿದೆ.