ಟಿ20 ಸರಣಿ: ಇಂಗ್ಲೆಂಡ್ ವಿರುದ್ಧ ಮೂರನೇ ಪಂದ್ಯದಲ್ಲಿ 125 ರನ್‌ಗಳ ಅಂತರದಿಂದ ಹೀನಾಯವಾಗಿ ಸೋತ ಟೀಂ ಇಂಡಿಯಾ | INDvENG
ಸಾಂದರ್ಭಿಕ ಚಿತ್ರ
Published on:
Copied
Follow Us
INDvENG: ನಾಟಿಂಗ್‌ಹ್ಯಾಮ್‌ನಲ್ಲಿ ಮಂಗಳವಾರ(ಜು. 07) ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಮೂರನೇ ಪಂದ್ಯದಲ್ಲಿ ಭಾರತ, ಇಂಗ್ಲೆಂಡ್ ವಿರುದ್ಧ 125 ರನ್‌ಗಳ ಅಂತರದಿಂದ ಹೀನಾಯವಾಗಿ ಸೋತಿದೆ. ಸರಣಿಯಲ್ಲಿ ಇಂಗ್ಲೆಂಡ್ 2-0 ಮುನ್ನಡೆ ಸಾಧಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ 20 ಓವರ್‌ಗಳಲ್ಲಿ 201/7 ರನ್ ಗಳಿಸಿತು. ಆರಂಭಿಕ ಆಟಗಾರ ಫಿಲಿಪ್ ಸಾಲ್ಟ್ 44 ಎಸೆತಗಳಲ್ಲಿ 7 ಬೌಂಡರಿ ಮತ್ತು 3 ಸಿಕ್ಸರ್‌ಗಳೊಂದಿಗೆ ಅದ್ಭುತ 70 ರನ್ ಗಳಿಸುವ ಮೂಲಕ ತಂಡದ ಗೆಲುವಿನ ರೂವಾರಿಯಾದರು.
ಅದೇ ರೀತಿ ಜೋಸ್ ಬಟ್ಲರ್ 36 ರನ್ ಗಳಿಸಿದರೆ, ಸ್ಯಾಮ್ ಕರನ್ 41 ರನ್ ಗಳಿಸಿ ಅಜೇಯರಾಗಿ ಉಳಿದು ತಂಡ ಬೃಹತ್ ರನ್ ಕಲೆಹಾಕುವಲ್ಲಿ ಸಹಾಯ ಮಾಡಿದರು. ಭಾರತದ ಪರ ಹರ್ಷಿತ್ ರಾಣಾ 40 ರನ್ ನೀಡಿ ಪ್ರಿನ್ಸ್ ಯಾದವ್ 30 ರನ್ ನೀಡಿ ತಲಾ ಎರಡು ವಿಕೆಟ್ ಪಡೆದರು.
ಬಳಿಕ 202ರನ್‌ಗಳ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಆರಂಭಿಕವಾಗಿ ಬ್ಯಾಟಿಂಗ್ ವೈಫಲ್ಯವನ್ನು ಅನುಭವಿಸಿತು. 12 ಓವರ್‌ಗಳಲ್ಲಿ 76 ರನ್‌ಗಳಿಗೆ ಆಲೌಟ್ ಆಗುವುದರೊಂದಿಗೆ ಪಂದ್ಯವನ್ನು ಕೈಚೆಲ್ಲಿತು. ಇಂಗ್ಲೆಂಡ್‌ಗೆ 125 ರನ್‌ಗಳ ಅಂತರದ ಗೆಲುವಿಗೆ ಕಾರಣವಾಯಿತು. ಈ ಸೋಲು ಭಾರತ ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಭಾರಿ ರನ್ಗಳಿಂದ ಸೋತ ಪಂದ್ಯವಾಗಿ ದಾಖಲೆ ಬರೆದಿದೆ (ಏಜೆನ್ಸೀಸ್).