ಟಿ20 ಸರಣಿ: ಇಂಗ್ಲೆಂಡ್ ವಿರುದ್ಧ ಎರಡನೇ ರೋಚಕ ಪಂದ್ಯದಲ್ಲಿ ಸೋತ ಟೀಂ ಇಂಡಿಯಾ: ಜಾಕೋಬ್ ಬೆಥೆಲ್ ಅಬ್ಬರ | INDvENG
ಸಾಂದರ್ಭಿಕ ಚಿತ್ರ
Published on:
Copied
Follow Us
INDvENG: ಮ್ಯಾಂಚೆಸ್ಟರ್‌ನ ಎಮಿರೇಟ್ಸ್ ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಟೀಂ ಇಂಡಿಯಾ ನೀಡಿದ 191 ರನ್ಗಳ ಗುರಿ ಬೆನ್ನಟ್ಟಿ ಯಶಸ್ವಿಯಾಗಿದ್ದು, ಸರಣಿಯ ಎರಡನೇ ಪಂದ್ಯವನ್ನು ಗೆದ್ದಿದೆ.
ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 190 ರನ್ಗಳನ್ನು ಗಳಿಸಿತ್ತು. ಟೀಂ ಇಂಡಿಯಾಕ್ಕೆ ಆಯ್ಕೆಯಾದ ಮೊದಲ ಪಂದ್ಯದಲ್ಲೇ ವೈಭವ್ ಸೂರ್ಯವಂಶಿ ಕೇವಲ 14 ರನ್ಗಳಿಸಿ ಔಟ್ ಆಗಿ ಅಭಿಮಾನಿಗಳಿಗೆ ನಿರಾಶೆ ಮೂಡಿಸಿದರು.
191ರನ್ಗಳ ಗುರಿ ಬೆನ್ನತ್ತಿದೆ ಇಂಗ್ಲೆಂಡ್ ತಂಡದ ಪರ ಇಂಗ್ಲೆಂಡ್‌ನ ಯುವ ಆಟಗಾರ ಜಾಕೋಬ್ ಬೆಥೆಲ್ ಅಬ್ಬರದ ಅರ್ಧಶತಕದೊಂದಿಗೆ ತಂಡವನ್ನು ಗೆಲುವಿನ ಸನಿಹಕ್ಕೆ ಕೊಂಡೊಯ್ದರು. ಮತ್ತು ಭಾರತದ ಬೌಲರ್ಗಳನ್ನು ಚಚ್ಚಿ ಹಾಕಿದರು. ಹ್ಯಾರಿ ಬ್ರೂಕ್ (32) ಮತ್ತು ಟಾಮ್ ಬ್ಯಾಂಟನ್ (39) ಅವರೊಂದಿಗೆ ಪಾಟ್ನಾರ್ಶಿಪ್ ಆಟವಾಡಿದರು. ತಂಡವು ಐದು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.