ಟಿ20 ಸರಣಿ: ಇಂಗ್ಲೆಂಡ್​ಗೆ 191 ರನ್​ಗಳ ಗುರಿ ನೀಡಿದ ಭಾರತ: ಮೊದಲ ಪಂದ್ಯದಲ್ಲೇ 14 ರನ್​ಗೆ ಔಟ್ ಆದ ವೈಭವ್ ಸೂರ್ಯವಂಶಿ | INDvENG

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
INDvENG: ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಮ್ಯಾಂಚೆಸ್ಟರ್‌ನಲ್ಲಿ ನಡೆದಿದ್ದು, ಭಾರತ 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 190 ರನ್​ಗಳನ್ನು ಹೊಡೆಯುವ ಮೂಲಕ ಇಂಗ್ಲೆಂಡ್​ ತಂಡಕ್ಕೆ 191ರನ್​ಗಳ ಗುರಿ ನೀಡಿದೆ. ಮತ್ತು ಟೀಂ ಇಂಡಿಯಾಕ್ಕೆ ಆಯ್ಕೆಯಾದ ಮೊದಲ ಪಂದ್ಯದಲ್ಲೇ ವೈಭವ್ ಸೂರ್ಯವಂಶಿ ಕೇವಲ 14 ರನ್​​ಗಳಿಸಿ ಔಟ್​ ಆಗಿದ್ದಾರೆ.
ಮ್ಯಾಂಚೆಸ್ಟರ್‌ನ ಎಮಿರೇಟ್ಸ್ ಓಲ್ಡ್ ಟ್ರಾಫರ್ಡ್‌ನಲ್ಲಿ ಪಂದ್ಯ ನಡೆಯುತ್ತಿದ್ದು, ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ಟಾಸ್ ಗೆದ್ದು ಮೊದಲ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆರಂಭಿಕ ಆಟಗಾರರಾಗಿ ಅಭಿಷೇಕ್ ಶರ್ಮಾ ಮತ್ತು ಮೊದಲ ಭಾರಿ ಟೀಂ ಇಂಡಿಯಾ ತಂಡಕ್ಕೆ ಆಯ್ಕೆಯಾದ ವೈಭವ್ ಸೂರ್ಯವಂಶಿ ಕಣಕ್ಕಿಳಿದರು.
5 ಓವರ್​ಗಳಲ್ಲಿ 50 ರನ್​ಗಳಿಸಿರು. ವೈಭವ್ ಸೂರ್ಯವಂಶಿ ಎರಡು ಸಿಕ್ಸ್ ಬಾರಿಸುವ ಮೂಲಕ 10 ಎಸೆತಗಳಲ್ಲಿ 14 ರನ್ ಗಳಿಸಿದರು. ಆದರೆ ಐದನೇ ಓವರ್‌ನಲ್ಲಿ ವಿಲ್ ಜ್ಯಾಕ್ಸ್ ಓವರ್​ನಲ್ಲಿ ಸ್ಟಂಪ್ ಔಟಾಗಿ ಅಭಿಮಾನಿಗಳನ್ನು ನಿರಾಸೆಗೊಳಿಸಿದರು. ಆದಾಗ್ಯೂ, ಅಭಿಷೇಕ್ ಶರ್ಮಾ ಬ್ಯಾಟಿಂಗ್ ಮುಂದುವರೆಸಿ 43 ರನ್​ಗಳಿಸಿದರು.
ಬಳಿಕ ಮಧ್ಯದ ಓವರ್​ಗಳಲ್ಲಿ ಶ್ರೇಯಸ್ ಅಯ್ಯರ್ ಮತ್ತು ಇಶಾನ್ ಕಿಶನ್ ಬ್ಯಾಟಿಂಗ್ ಮೂಲಕ ಭಾರತ ತಂಡ 190 ಉತ್ತಮ ರನ್​ ಕಲೆಹಾಕಿತು. ಇಂಗ್ಲೆಂಡ್ ಪರ, ಸ್ಯಾಮ್ ಕರನ್ 33 ರನ್‌ಗೆ 3 ವಿಕೆಟ್ ಪಡೆಯುವ ಭಾರತದ ರನ್​ ಗಳಿಕೆಯನ್ನು ತಡೆಗಟ್ಟಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net