ಟಾಸ್ ಗೆದ್ದ ಭಾರತದ ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಪರ ಜೋಸ್ ಬಟ್ಲರ್ 64 ಎಸೆತಗಳಲ್ಲಿ 12 ಬೌಂಡರಿಗಳು ಮತ್ತು ಎಂಟು ಸಿಕ್ಸರ್‌ಗಳನ್ನು ಹೊಡೆದು 131 ರನ್ ಗಳಿಸಿದ್ರೆ, ಹ್ಯಾರಿ ಬ್ರೂಕ್ 45 ಎಸೆತಗಳಲ್ಲಿ 4 ಬೌಂಡರಿ 8 ಸಿಕ್ಸರ್‌ಗಳನ್ನು ಹೊಡೆದು 95 ರನ್ಗಳಿಗೆ ತಂಡ ಬೃಹತ್ ಮೊತ್ತ ಕಲೆಹಾಕಲು ಸಹಾಯ ಮಾಡಿದರು.