ಭಕ್ತರು ಅರ್ಪಿಸಿದ್ದ ನಗದು ಮತ್ತು ಕಾಣಿಕೆಗಳನ್ನು ಪರಿಶೀಲಿಸುವಾಗ 20 ರೂಪಾಯಿ ನೋಟಿನ ಮೇಲೆ ಬರೆದಿದ್ದ ಸಂದೇಶವೊಂದು ಅಧಿಕಾರಿಗಳ ಗಮನ ಸೆಳೆದಿದ್ದು, ಅದರಲ್ಲಿ "ಸ್ವಾಮಿ.. ನನಗೆ ನನ್ನ ಅತ್ತೆಯ ಕಾಟ ತಡೆಯಲು ಸಾಧ್ಯವಾಗುತ್ತಿಲ್ಲ, ದಯವಿಟ್ಟು ಆಕೆ ಬೇಗ ಸಾಯುವಂತೆ ಮಾಡು" ಎಂದು ಕೈಬರಹದಲ್ಲಿ ಬರೆಯಲಾಗಿತ್ತು. ಇದನ್ನು ಕಂಡು ದೇವಸ್ಥಾನದ ಸಿಬ್ಬಂದಿ ಹಾಗೂ ಅಧಿಕಾರಿಗಳು ಒಂದು ಕ್ಷಣ ದಂಗಾಗಿದ್ದು, ಇದರೊಂದಿಗೆ ಇಂಗ್ಲಿಷ್‌ನಲ್ಲಿ ಬರೆದಿದ್ದ ಮತ್ತೊಂದು ನೋಟು ಕೂಡ ಪತ್ತೆಯಾಗಿದೆ.