ಬಂಗಾಳದಲ್ಲಿ 'ದೀದಿ' ಕುರುಹುಗಳಿಗೆ ಬ್ರೇಕ್: ಮಮತಾ ವಿನ್ಯಾಸದ ಫುಟ್‌ಬಾಲ್ ಶಿಲ್ಪ ತೆರವಿಗೆ ನೂತನ ಸರ್ಕಾರ ನಿರ್ಧಾರ! Suvendu Adhikari

Suvendu Adhikari  (ಚಿತ್ರ X)
Suvendu Adhikari (ಚಿತ್ರ X)
Published on

ಪ್ರಮುಖ ಮುಖ್ಯಾಂಶಗಳು

  • ಪಶ್ಚಿಮ ಬಂಗಾಳದಲ್ಲಿ ಸಿಎಂ ಸುವೇಂದು ಅಧಿಕಾರಿ ನೇತೃತ್ವದ ನೂತನ ಸರ್ಕಾರ ಹಲವಾರು ಬದಲಾವಣೆ ತಂದಿದೆ
  • ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿನ್ಯಾಸಗೊಳಿಸಲಾದ ವಿವಾದ್ಮಕ ಪ್ರತಿಮೆಯನ್ನು ಶೀಘ್ರದಲ್ಲೇ ತೆಗೆದುಹಾಕಲಾಗುವುದು
  • ಕೋಲ್ಕತಾದ ಸಾಲ್ಟ್ ಲೇಕ್ ಕ್ರೀಡಾಂಗಣದ ಮುಖ್ಯ ದ್ವಾರದ ಮುಂಭಾಗದಲ್ಲಿದ್ದ ಈ ವಿಶಿಷ್ಟ ವಿನ್ಯಾಸದ ಪ್ರತಿಮೆ
  • ಎರಡೂ ಕಾಲುಗಳು ಚೆಂಡಿನೊಂದಿಗೆ ಸಂವಹನ ನಡೆಸುತ್ತಿರುವ ಫುಟ್ಬಾಲ್ ಆಟಗಾರನನ್ನು ಚಿತ್ರಿಸುತ್ತದೆ
ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಸುವೇಂದು ಅಧಿಕಾರಿ (Suvendu Adhikari) ನೇತೃತ್ವದ ನೂತನ ಸರ್ಕಾರವು ರಾಜ್ಯಾದ್ಯಂತ ಅತ್ಯಂತ ತ್ವರಿತ ಮತ್ತು ದೃಢವಾದ ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುತ್ತಿದೆ. ಆದಾಗ್ಯೂ, ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿನ್ಯಾಸಗೊಳಿಸಲಾದ ವಿವಾದ್ಮಕ ಪ್ರತಿಮೆಯನ್ನು ಶೀಘ್ರದಲ್ಲೇ ತೆಗೆದುಹಾಕಲಾಗುವುದು ಎಂದು ರಾಜ್ಯದ ನೂತನ ಕ್ರೀಡಾ ಸಚಿವ ನಿಶಿತ್ ಪ್ರಾಮಾಣಿಕ್ ಅಧಿಕೃತವಾಗಿ ಘೋಷಿಸಿದ್ದಾರೆ.
ಆದಾಗ್ಯೂ, ಕೋಲ್ಕತಾದ ಸಾಲ್ಟ್ ಲೇಕ್ ಕ್ರೀಡಾಂಗಣದ ಮುಖ್ಯ ದ್ವಾರದ ಮುಂಭಾಗದಲ್ಲಿದ್ದ ಈ ವಿಶಿಷ್ಟ ವಿನ್ಯಾಸದ ಪ್ರತಿಮೆಯನ್ನು ಸ್ಥಾಪಿಸಲಾಗಿದ್ದು, ಎರಡೂ ಕಾಲುಗಳು ಚೆಂಡಿನೊಂದಿಗೆ ಸಂವಹನ ನಡೆಸುತ್ತಿರುವ ಫುಟ್ಬಾಲ್ ಆಟಗಾರನನ್ನು ಚಿತ್ರಿಸುತ್ತದೆ. ಆದರೆ, ಮೇಲಿನ ದೇಹವು ಸೊಂಟದ ಮೇಲೆ ಇರಿಸಲಾದ ಫುಟ್ಬಾಲ್​ ಮಾತ್ರ ಒಳಗೊಂಡಿದ್ದು, ಇದನ್ನು ಸೃಜನಶೀಲ, ಶೈಲೀಕೃತ ದೃಶ್ಯ ಪರಿಣಾಮವನ್ನು ತಿಳಿಸಲು ರಚಿಸಲಾಗಿದೆ.
ಕೋಲ್ಕತಾ ಡರ್ಬಿ ಪಂದ್ಯದ ಬಳಿಕ ಸಚಿವರ ಖಡಕ್ ಹೇಳಿಕೆ
ಭಾನುವಾರ (ಮೇ 17) ಮೋಹನ್ ಬಗಾನ್ ಸೂಪರ್ ಜೈಂಟ್ ಮತ್ತು ಈಸ್ಟ್ ಬೆಂಗಾಲ್ ಎಫ್‌ಸಿ ನಡುವಿನ ಇಂಡಿಯನ್ ಸೂಪರ್ ಲೀಗ್ ಕೊನೆಗೊಂಡ ನಂತರ ಮಾತನಾಡಿದ ಪ್ರಾಮಾಣಿಕ್, ಇಂತಹ ಕೊಳಕು ಕಾಣುವ ಪ್ರತಿಮೆ, ಮುಂಡದ ಮೇಲೆ ಎರಡು ಕಾಲುಗಳನ್ನು ಕತ್ತರಿಸುವುದು ಮತ್ತು ಅದರ ಮೇಲೆ ಫುಟ್‌ಬಾಲ್ ಇಡುವುದ ಅರ್ಥಹೀನವಾಗಿದೆ. ಇದು ಸೌಂದರ್ಯ ದೃಷ್ಟಿಯಲ್ಲೂ ಹಿತಕರವಾಗಿ ಕಾಣುವುದಿಲ್ಲ. ಆದರಿಂದ ನಾವು ಯಾವುದೇ ಅರ್ಥವಿಲ್ಲದ, ವಿಕಾರವಾದ ರಚನೆಯನ್ನು ಇಟ್ಟುಕೊಳ್ಳುವುದಿಲ್ಲ ಎಂದು ಹೇಳಿದರು.

ಆಡಳಿತ ಬದಲಾವಣೆಯ ಬೆನ್ನಲ್ಲೇ ಐತಿಹಾಸಿಕ ಸುಧಾರಣೆಗಳ ಪರ್ವ!

ಸುವೇಂದು ಅಧಿಕಾರಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ, ರಾಜಕೀಯ ತೀವ್ರವಾಗಿ ಬದಲಾಯಿತು. ಟಿಎಂಸಿಗೆ ಹೊಸ ಸರ್ಕಾರದ ಹಲವಾರು ನಿರ್ಧಾರಗಳು, ಹಿಂದಿನ ಆಡಳಿತದ ಅಕ್ರಮಗಳು ಮತ್ತು ರಾಜಕೀಯ ಪ್ರೇರಿತ ಸ್ಥಾಪನೆಗಳನ್ನು ನೇರವಾಗಿ ಗುರಿಯಾಗಿರಿಸಿಕೊಂಡಿರುವುದು ಸದ್ಯ ಬಾಯಲಿಟ್ಟ ಬಿಸಿ ತುಪ್ಪದಂತಾಗಿದೆ. ಅಧಿಕಾರಿ ನೇತೃತ್ವದ ಸರ್ಕಾರವು ಅಪರಾಧಿಗಳನ್ನು ಸುಮ್ಮನೆ ಬಿಡುವುದಿಲ್ಲ. ಜೊತೆಗೆ ತಪ್ಪು ಮಾಡಿದವರು ಶಿಕ್ಷೆಯನ್ನು ಅನುಭವಿಸಲೇ ಬೇಕು ಎಂಬ ಸ್ಪಷ್ಟ ಸಂದೇಶವನ್ನು ಸಾರ್ವಜನಿಕರಿಗರೆ ರವಾನಿಸಿದೆ.

ಸರ್ಕಾರಿ ಶಿಕ್ಷಣ ವ್ಯವಸ್ಥೆ ಸುಧಾರಿಸಲು ಮುಖ್ಯಮಂತ್ರಿ ಸುವೇಂದು ಅಧಿಕಾರಿ ಪ್ರತಿಜ್ಞೆ!

ಸೋಮವಾರ (ಮೇ 18) ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ, ಸರ್ಕಾರಿ ಸ್ವಾಮ್ಯದ ಶಿಕ್ಷಣ ಸಂಸ್ಥೆಗಳಲ್ಲಿ ಮೂಲಸೌಕರ್ಯಗಳನ್ನು ಸುಧಾರಿಸಲು ತಮ್ಮ ಸರ್ಕಾರ ಗರಿಷ್ಠ ಪ್ರಯತ್ನಗಳನ್ನು ಮಾಡಲಿದೆ. ಆದಾಗ್ಯೂ, ಶಿಕ್ಷಣವೆಂಬುದು ಮೂಲಭೂತ ಹಕ್ಕಾಗಿದ್ದರೂ ರಾಜ್ಯದ ಜನಸಂಖ್ಯೆಯ ಶೇ. 90 ರಷ್ಟು ಜನರು ಅವಲಂಬಿಸಿರುವ ಸರ್ಕಾರಿ ಸ್ವಾಮ್ಯದ ಶಿಕ್ಷಣ ಸಂಸ್ಥೆಗಳು ಖಾಸಗಿ ಸಂಸ್ಥೆಗಳಿಗಿಂತ ಹಿಂದೆ ಉಳಿದಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರಗತಿಯನ್ನು ನಾನು ಬಯಸುತ್ತೇನೆ, ಆದರೆ ಸರ್ಕಾರಿ ಸಂಸ್ಥೆಗಳ ಮೂಲಸೌಕರ್ಯವನ್ನು ಸುಧಾರಿಸಲು ನಾವು ಆದಷ್ಟು ಪ್ರಯತ್ನ ನಡೆಸುತ್ತೇವೆ ಎಂದರು.

ಬಂಗಾಳದಲ್ಲಿ ಬಿಜೆಪಿ ಭರ್ಜರಿ ದಿಗ್ವಿಜಯ

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿದ ನಂತರ ಭಾರತೀಯ ಜನತಾ ಪಕ್ಷ (ಬಿಜೆಪಿ) ಉತ್ಸಾಹದ ಅಲೆಯನ್ನು ಸವಾರಿ ಮಾಡುತ್ತಿದೆ. ಈ ಹಿಂದೆ ಅಧಿಕಾರದಲ್ಲಿದ್ದ ಟಿಎಂಸಿ ಕೇವಲ 80 ಸ್ಥಾನಗಳನ್ನು ಗಳಿಸಿದರೆ, ಬಿಜೆಪಿ 207 ಸ್ಥಾನಗಳನ್ನು ಗಳಿಸಿ ಸುವೇಂದು ಅಧಿಕಾರಿ ಮುಖ್ಯಮಂತ್ರಿಯಾಗಿ ಆಯ್ಕೆಯಾದರು (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net